ಮೈಸೂರಿನ 9 ಕೇಂದ್ರದಲ್ಲಿ ದ್ವಿತೀಯ ಪಿಯು ಮಾಲ್ಯಮಾಪನ ಆರಂಭ
ಮೈಸೂರು

ಮೈಸೂರಿನ 9 ಕೇಂದ್ರದಲ್ಲಿ ದ್ವಿತೀಯ ಪಿಯು ಮಾಲ್ಯಮಾಪನ ಆರಂಭ

May 22, 2020

ಮೈಸೂರು, ಮೇ 21(ಆರ್‍ಕೆ)- ದ್ವಿತೀಯ ಪಿಯು ಪರೀಕ್ಷಾ ಉತ್ತರ ಪತ್ರಿಕೆ ಮೌಲ್ಯ ಮಾಪನ ಕಾರ್ಯ ಮೈಸೂರಿ ನಲ್ಲಿ ಇಂದಿನಿಂದ ಆರಂಭವಾಯಿತು.

ಮೊದಲಿಗೆ ಅರ್ಥ ಶಾಸ್ತ್ರ (eಛಿoಟಿomiಛಿs) ವಿಷಯ ಪತ್ರಿಕೆಗಳ ಮೌಲ್ಯ ಮಾಪನ ಆರಂಭವಾ ಗಿದ್ದು, ಇದಕ್ಕಾಗಿ ಮಾಡಿ ರುವ ವ್ಯವಸ್ಥೆ ಸಮಂಜಸ ವಾಗಿದೆ ಎಂದು ಕಂಡು ಬಂದಲ್ಲಿ ಶನಿವಾರದಿಂದ ಉಳಿದ ಎಲ್ಲಾ ವಿಷಯ ಗಳ ಉತ್ತರ ಪತ್ರಿಕೆ ಮೌಲ್ಯ ಮಾಪನ ಕಾರ್ಯ ಏಕ ಕಾಲದಲ್ಲಿ ಆರಂಭವಾಗಲಿದೆ ಎಂದು ಪದವಿ ಪೂರ್ವ ಮತ್ತು ವೃತ್ತಿ ಶಿಕ್ಷಣ ಇಲಾಖೆ ಉಪನಿರ್ದೇಶಕಿ ಜಿ.ಆರ್.ಗೀತಾ ತಿಳಿಸಿದ್ದಾರೆ.

ರಾಜ್ಯದ ಎಲ್ಲಾ ಜಿಲ್ಲೆಗಳಲ್ಲೂ ಮೌಲ್ಯಮಾಪನ ಕಾರ್ಯ ನಡೆಯಲಿದ್ದು, ವಾಣಿಜ್ಯ, ಕಲೆ ಮತ್ತು ವಿಜ್ಞಾನ ವಿಭಾಗಗಳ ಎಲ್ಲಾ ವಿಷಯಗಳ ಉತ್ತರ ಪತ್ರಿಕೆ ಬಂಡಲ್‍ಗಳನ್ನು ಕೋಡಿಂಗ್, ಡೀಕೋಡಿಂಗ್ ಮಾಡಿದ ನಂತರ ಮೈಸೂರಿಂದ ಎಲ್ಲಾ ನೆರೆಹೊರೆ ಜಿಲ್ಲೆಗಳ ಉಪನಿರ್ದೇಶಕರ ಸುಪರ್ದಿಗೆ ಕಳುಹಿಸಿ ಕೊಡಲಾಗಿದೆ ಎಂದು ತಿಳಿಸಿದರು.

ಮೈಸೂರಿನ ಎಲ್ಲಾ 9 ಪದವಿ ಪೂರ್ವ ಕಾಲೇಜು ಮೌಲ್ಯಮಾಪನ ಕೇಂದ್ರಗಳಲ್ಲೂ ಶಿಬಿರಾಧಿಕಾರಿಗಳ ನೇತೃತ್ವದಲ್ಲಿ ಸಹಾಯಕ ಪರೀಕ್ಷಕರು (ಆಯಾ ವಿಷಯದ ಉಪನ್ಯಾಸಕರು) ಇಂದು ನಿಯೋಜಿತ ಕೇಂದ್ರಗಳಲ್ಲಿ ವರದಿ ಮಾಡಿಕೊಂಡು ಮೌಲ್ಯಮಾಪನ ಕಾರ್ಯವನ್ನು ಆರಂಭಿಸಿದ್ದಾರೆ. ಪ್ರತೀ ಕೇಂದ್ರಗಳಲ್ಲಿ ಶೌಚಾಲಯ, ಕುಡಿಯುವ ನೀರು, ಸ್ಯಾನಿಟೈಸರ್ ವ್ಯವಸ್ಥೆ ಮಾಡಲಾಗಿದ್ದು, ಆರೋಗ್ಯ ಇಲಾಖೆಯಿಂದ ಕೇಂದ್ರಗಳಲ್ಲಿ ರಸಾಯನಿಕ ದ್ರಾವಣ ಸಿಂಪಡಿಸಲಾಗಿದೆ. ಸಹಾಯಕ ಪರೀಕ್ಷಕರು ಒಂದು ಬೆಂಚಿನಲ್ಲಿ ಒಬ್ಬರೇ ಕುಳಿತು ಮಾಸ್ಕ್ ಧರಿಸಿ ಮೌಲ್ಯಮಾಪನ ಕಾರ್ಯದಲ್ಲಿ ನಿರತರಾಗಿದ್ದಾರೆ.

ಎಲ್ಲಾ ಕೇಂದ್ರಗಳಿಗೂ ಇಲಾಖೆ ಉಪನಿರ್ದೇಶಕಿ ಜಿ.ಆರ್.ಗೀತಾ ಭೇಟಿ ನೀಡಿ ಮೌಲ್ಯಮಾಪನ ಕಾರ್ಯ ಹಾಗೂ ಸೌಲಭ್ಯಗಳನ್ನು ವೀಕ್ಷಿಸಿ ಪ್ರಕ್ರಿಯೆಯ ಮೇಲ್ವಿಚಾರಣೆ ಮಾಡುತ್ತಿದಾರೆ. ಮೊದಲ ದಿನವಾದ ಇಂದು ಸಹಾಯಕ ಪರೀಕ್ಷಕರು ಹಾಜರಾತಿ ಕಡಿಮೆ ಇತ್ತು. ನಾಳೆ(ಮೇ 22)ಯೂ ಕೆಲವರು ಮೌಲ್ಯಮಾಪನ ಕರ್ತವ್ಯಕ್ಕೆ ವರದಿ ಮಾಡಿಕೊಳ್ಳಲಿದ್ದಾರೆ ಎಂದು ಉಪನಿರ್ದೇಶಕಿ ಮಾಹಿತಿ ನೀಡಿದರು.

Translate »