ವೀರಶೈವ ಲಿಂಗಾಯತರ ಉಳಿಸಿಕೊಳ್ಳಲು ಬಿಜೆಪಿ, ಸೆಳೆಯಲು ಕಾಂಗ್ರೆಸ್ ಕಸರತ್ತು
ಮೈಸೂರು

ವೀರಶೈವ ಲಿಂಗಾಯತರ ಉಳಿಸಿಕೊಳ್ಳಲು ಬಿಜೆಪಿ, ಸೆಳೆಯಲು ಕಾಂಗ್ರೆಸ್ ಕಸರತ್ತು

March 31, 2022

ಸಮುದಾಯದ ಮಠ-ಮಾನ್ಯಗಳ ಮೊರೆ ಹೋದ ಉಭಯ ಪಕ್ಷಗಳು

ಸಿದ್ಧಗಂಗಾ ಮಠಕ್ಕೆ ಇಂದು ರಾಹುಲ್ ಗಾಂಧಿ, ನಾಳೆ ಅಮಿತ್ ಷಾ ಭೇಟಿಯ ಮಹತ್ವದ ಸಂದೇಶ

ಬೆAಗಳೂರು, ಮಾ.೩೦(ಕೆಎಂಶಿ)- ವಿಧಾನಸಭಾ ಚುನಾ ವಣೆ ಸಮೀಪಿಸುತ್ತಿದ್ದಂತೆ ವೀರಶೈವ/ಲಿಂಗಾಯತ ಮತ ಗಳನ್ನು ಸೆಳೆಯಲು ಆಡಳಿತಾರೂಢ ಬಿಜೆಪಿ ಮತ್ತು ಪ್ರತಿಪಕ್ಷ ಕಾಂಗ್ರೆಸ್ ಪೈಪೋಟಿ ನಡೆಸಿವೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಳಿಸಿದ ನಂತರ ಈ ಸಮು ದಾಯದ ಮತಗಳನ್ನು ಕಸಿಯಲು ಕಾಂಗ್ರೆಸ್, ಮಠಗಳ ಪ್ರದಕ್ಷಿಣೆ ಜೊತೆಗೆ ಮುಂದಿನ ಚುನಾವಣಾ ಸಾರಥ್ಯವನ್ನು ಆ ಸಮು ದಾಯಕ್ಕೆ ಸೇರಿದ ನಾಯಕರಿಗೇ ವಹಿಸಿದೆ. ಡಾ. ಶಿವಕುಮಾರ ಶ್ರೀಗಳ ೧೧೫ನೇ ಜಯಂತ್ಯುತ್ಸವ ಕಾರ್ಯಕ್ರಮವನ್ನು ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಎರಡೂ ಪಕ್ಷಗಳು ಸ್ಫರ್ಧೆಗಿಳಿದಿವೆ.

ತುಮಕೂರಿನ ಶ್ರೀಕ್ಷೇತ್ರದಲ್ಲಿ ಏ.೧ರಂದು ನಡೆಯಲಿರುವ ಈ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ಕೇಂದ್ರ ಗೃಹ ಸಚಿವ ಅಮಿತ್ ಷಾ ೨ ದಿನಗಳ ಕಾಲ ರಾಜ್ಯ ಪ್ರವಾಸ ಕೈಗೊಳ್ಳುತ್ತಿದ್ದಾರೆ. ಇವರ ಭೇಟಿ ಸಂದರ್ಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಹಲವು ನಾಯಕರು ಶ್ರೀಕ್ಷೇತ್ರದ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಮಿತ್ ಷಾ ಮಠಕ್ಕೆ ಭೇಟಿ ಕೊಡುವ ಮುನ್ನವೇ ಕಾಂಗ್ರೆಸ್‌ನ ರಾಷ್ಟಿçÃಯ ನಾಯಕ ರಾಹುಲ್ ಗಾಂಧಿ ನಾಳೆ ಮಧ್ಯಾಹ್ನವೇ ಶ್ರೀಕ್ಷೇತ್ರಕ್ಕೆ ತೆರಳಿ ಕಾರ್ಯ ಕ್ರಮವೊಂದರಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲೇಬೇಕೆಂದು ರಾಹುಲ್ ಗಾಂಧಿ ಅವರನ್ನು ರಾಜ್ಯ ಕಾಂಗ್ರೆಸ್ ನಾಯಕರು ಕರೆತರುತ್ತಿದ್ದಾರೆ. ಜಯಂತ್ಯುತ್ಸವ ಸ್ವಾಗತ ಸಮಿತಿ ಪಕ್ಷಾತೀತವಾಗಿ ಎಲ್ಲಾ ನಾಯಕರಿಗೂ ಆಹ್ವಾನ ನೀಡಿದೆ. ಈ ಹಿಂದೆ ಎಷ್ಟೋ ಬಾರಿ ಕಾಂಗ್ರೆಸ್‌ಗೆ ಆಹ್ವಾನ ನೀಡಿದ್ದ ಕಾರ್ಯಕ್ರಮದಲ್ಲಿ ಆ ಪಕ್ಷದ ರಾಷ್ಟಿçÃಯ ನಾಯಕರು ಭಾಗವಹಿಸಿರಲಿಲ್ಲ.

ಬಿಜೆಪಿಗೆ ಚುನಾವಣಾ ಪ್ರತಿತಂತ್ರ ರೂಪಿಸು ತ್ತಿರುವ ಕಾಂಗ್ರೆಸ್ ಇದೀಗ ಎಲ್ಲಾ ಅವಕಾಶ ಗಳನ್ನು ಬಳಕೆ ಮಾಡಿಕೊಂಡು ವಿವಿಧ ಸಮು ದಾಯಗಳ ಮತಗಳನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ.

ದಶಕಗಳ ಹಿಂದೆ ಕಾಂಗ್ರೆಸ್‌ನಿAದ ದೂರ ಹೋಗಿರುವ ಲಿಂಗಾ ಯತ ಮತದಾರರನ್ನು ಓಲೈಸಲು ಕಾಂಗ್ರೆಸ್ ಮುಂದಾಗಿದೆ. ಸುಮಾರು ಎರಡೂವರೆ ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷದಿಂದ ದೂರವಾದ ಲಿಂಗಾಯತ ಸಮುದಾಯ ೧೯೯೪ರಲ್ಲಿ ಜನತಾದಳ ದೊಂದಿಗೆ, ೧೯೯೯ರಲ್ಲಿ ಸಂಯುಕ್ತ ಜನತಾದಳದೊಂದಿಗೆ ಮತ್ತು ತದ ನಂತರದ ದಿನಗಳಲ್ಲಿ ಬಿಜೆಪಿಯ ಬೆನ್ನಿಗೆ ನಿಂತಿತ್ತು. ಲಿಂಗಾಯತ ಸಮುದಾಯದ ಬೆಂಬಲ ಪಡೆದ ಯಡಿಯೂರಪ್ಪ ಅವರು ೪ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಕಳೆದ ವರ್ಷ ಅವರು ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿದ ನಂತರ ಲಿಂಗಾಯತ ಸಮುದಾಯ ಡೋಲಾಯಮಾನ ಸ್ಥಿತಿಯ ಲ್ಲಿದ್ದು, ಮುಂದಿನ ದಿನಗಳಲ್ಲಿ ಬಿಜೆಪಿಯಿಂದ ಸೂಕ್ತ ಸಂದೇಶ ರವಾನೆಯಾಗದಿದ್ದರೆ ದೊಡ್ಡ ಮಟ್ಟದಲ್ಲಿ ಬೇರೆ ಕಡೆ ವಲಸೆ ಹೋಗಬಹುದು ಎಂದು ರಾಜಕೀಯ ವಲಯಗಳು ವಿಶ್ಲೇಷಿಸುತ್ತಿವೆ.

ಈ ಹಿನ್ನೆಲೆಯಲ್ಲಿಯೇ ಕಾಂಗ್ರೆಸ್ ಪಕ್ಷ ಪ್ರಬಲ ಲಿಂಗಾಯತ ಸಮುದಾಯವನ್ನು ಓಲೈಸಲು ಲಿಂಗಾಯತ ನಾಯಕ, ಮಾಜಿ ಸಚಿವ ಎಂ.ಬಿ.ಪಾಟೀಲ್ ಅವರನ್ನು ಕರ್ನಾಟಕದಲ್ಲಿ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದೆ. ಅದೇ ಕಾಲಕ್ಕೆ ಎಂ.ಬಿ.ಪಾಟೀಲ್ ಅವರ ಪದಗ್ರಹಣ
ಸಮಾರಂಭವನ್ನು ಅದ್ಧೂರಿಯಾಗಿ ನಡೆಸುವ ಮೂಲಕ ರಾಜ್ಯದ ಜನರಿಗೆ, ಅದರಲ್ಲೂ ಮುಖ್ಯವಾಗಿ ಲಿಂಗಾಯತ ಸಮುದಾಯದ ಜನರಿಗೆ ಪೂರಕ ಸಂದೇಶ ರವಾನಿಸಲು ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತು. ಅದಕ್ಕನುಗುಣವಾಗಿ ಮಾರ್ಚ್ ೨೮ರ ಸೋಮವಾರ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ ಸಮಾರಂಭದಲ್ಲಿ ಎಂ.ಬಿ.ಪಾಟೀಲ್ ಪ್ರಚಾರ ಸಮಿತಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಇದೀಗ ಪಕ್ಷದ ರಾಷ್ಟಿçÃಯ ನಾಯಕ ರಾಹುಲ್ ಗಾಂಧಿ ಅವರೇ ಮಾರ್ಚ್ ೩೧ರ ಗುರುವಾರ ರಾಜ್ಯಕ್ಕೆ ಆಗಮಿಸಲಿದ್ದು, ತುಮಕೂರಿನ ಶ್ರೀಸಿದ್ಧಗಂಗಾ ಮಠಕ್ಕೆ ಭೇಟಿ ನೀಡಲಿದ್ದಾರೆ.

ಬಿಜೆಪಿಯ ಭಾವನಾತ್ಮಕ ಅಸ್ತçಗಳಿಂದ ಕಂಗಾಲಾಗಿರುವ ಪಕ್ಷಕ್ಕೆ ಪ್ರಬಲ ಲಿಂಗಾಯತ ಸಮುದಾಯದ ಬೆಂಬಲ ದಕ್ಕಿದರೆ ಮುಂದಿನ ಚುನಾವಣೆಯಲ್ಲಿ ಗೆಲುವು ನಿಶ್ಚಿತ ಎಂಬುದು ಕೈ ಪಾಳೆಯದ ಲೆಕ್ಕಾಚಾರ ಎಂದು ಮೂಲಗಳು ಹೇಳಿವೆ.

Translate »