`ಹಲೋ ಕಂದಾಯ ಸಚಿವರೇ’ ಸಹಾಯವಾಣ ಗೆ ಕರೆ ಮಾಡಿದರೆ ೭೨ ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣ ಮಂಜೂರಾತಿ ಪತ್ರ
ಮೈಸೂರು

`ಹಲೋ ಕಂದಾಯ ಸಚಿವರೇ’ ಸಹಾಯವಾಣ ಗೆ ಕರೆ ಮಾಡಿದರೆ ೭೨ ಗಂಟೆಯಲ್ಲಿ ಮನೆ ಬಾಗಿಲಿಗೆ ಪಿಂಚಣ ಮಂಜೂರಾತಿ ಪತ್ರ

March 31, 2022

ಬೆಂಗಳೂರು, ಮಾ.೩೦(ಕೆಎಂಶಿ)- ‘ಹಲೋ ಕಂದಾಯ ಸಚಿವರೇ’ ಎಂದು ಸಹಾಯವಾಣ ಗೆ ಕರೆ ಮಾಡಿದ ೭೨ ಗಂಟೆಯಲ್ಲಿ ಅರ್ಹ ಪಿಂಚಣ ದಾರರ ಮನೆ ಬಾಗಿಲಿಗೆ ಮಂಜೂರಾತಿ ಪತ್ರ ತಲುಪಿಸಬೇಕು ಎಂಬ ವಿನೂತನ ಯೋಜನೆಯನ್ನು ಜಾರಿಗೊಳಿಸ ಲಾಗುತ್ತಿದೆ ಎಂದು ಕಂದಾಯ ಸಚಿವ ಆರ್.ಅಶೋಕ್ ವಿಧಾನಪರಿಷತ್‌ನಲ್ಲಿಂದು ಘೋಷಿಸಿದರು.
ಪ್ರಶ್ನೋತ್ತರ ವೇಳೆ ಮುನಿರಾಜು ಪ್ರಸ್ತಾವಕ್ಕೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲರಿಗೆ ನೀಡುವ ನೆರವು ಸೇರಿದಂತೆ ಮಾಸಾಶನ ಯೋಜನೆಗಳು ತಲುಪಿಲ್ಲ ಎಂಬ ದೂರುಗಳು ಸಾಮಾನ್ಯವಾಗಿವೆ. ಪಿಂಚಣ ಸೌಲಭ್ಯವನ್ನು ಮನೆ ಬಾಗಿಲಿಗೆ ತಲುಪಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಹೊಸ ತಂತ್ರಾAಶ ರೂಪಿಸಲಾಗುವುದು ಎಂದರು. ಕಂದಾಯ ಇಲಾಖೆಯಲ್ಲಿ ಅರ್ಹ ಫಲಾನುಭವಿಗಳ ವಯೋಮಿತಿ ದಾಖಲೆ, ಆದಾಯ ಮಾಹಿತಿ ಸೇರಿ ಎಲ್ಲವೂ ಲಭ್ಯ ಇವೆ. ಆಧಾರ್ ಸಂಖ್ಯೆ ಬಳಕೆ ಮಾಡಿಕೊಂಡು ಫಲಾನುಭವಿಯ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ.

ಯೋಜನೆ ಲಾಭ ಪಡೆಯದಿದ್ದವರು ಹೊಸದಾಗಿ ಸ್ಥಾಪಿಸುವ ಸಹಾಯವಾಣ ಗೆ ಕರೆ ಮಾಡಿದರೆ ೭೨ ಗಂಟೆಯಲ್ಲಿ ಮಾಸಾಶನ ಮಂಜೂರಾದ ಆದೇಶ ಪ್ರತಿಯನ್ನು ಮನೆ ಬಾಗಿಲಿಗೆ ತಲುಪಿಸಲಾಗುತ್ತದೆ ಎಂದರು. ರಾಜ್ಯದಲ್ಲಿ ಆರಂಭಿಸಲಾದ ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಉತ್ತಮ ಸ್ಪಂದನೆ ದೊರೆತಿದೆ. ಈ ಅನುಭವದಿಂದ ಮನೆ ಬಾಗಿಲಿಗೆ ದಾಖಲೆಗಳನ್ನು ತಲುಪಿಸುವ ಯೋಜನೆ ರೂಪಿಸಲಾಗಿತ್ತು ಎಂದರು.

ರಾಜ್ಯದಲ್ಲಿ ೬೦ ಲಕ್ಷ ರೈತರಿಗೆ ಮನೆ ಬಾಗಿಲಿಗೆ ಜಾತಿ, ಆದಾಯ, ಪಹಣ ಮತ್ತು ಅಟ್ಲಾಸ್ ದಾಖಲೆಗಳನ್ನು ಉಚಿತವಾಗಿ ತಲುಪಿಸಲಾಗಿದೆ. ಈ ದಾಖಲೆಗಳ ವಾಯಿದೆ ಒಂದು ವರ್ಷದವರೆಗೂ ಇರಲಿದೆ. ಮುಂದಿನ ವರ್ಷ ಮತ್ತೆ ದಾಖಲೆಗಳನ್ನು ನೀಡುವ ಚಿಂತನೆ ಇದೆ. ಮನೆ ಬಾಗಿಲಿಗೆ ದಾಖಲೆ ನೀಡುವುದರಿಂದ ಆಸ್ತಿ ಯಾರ ಹೆಸರಿನಲ್ಲಿದೆ ಎಂಬ ಬಗ್ಗೆ ತಳ ಹಂತದಲ್ಲೇ ಅರಿವು ಮೂಡಲಿದೆ ಎಂದರು.

Translate »