ಬಾಲಿವುಡ್ ಮೇರುನಟ ಬಚ್ಚನ್‍ಗೂ ತಟ್ಟಿದ ‘ಮೀ ಟೂ’ ಕಳಂಕ
ಮೈಸೂರು

ಬಾಲಿವುಡ್ ಮೇರುನಟ ಬಚ್ಚನ್‍ಗೂ ತಟ್ಟಿದ ‘ಮೀ ಟೂ’ ಕಳಂಕ

October 14, 2018

ಮುಂಬೈ: ಮೀ ಟೂ ಆಂದೋ ಲನ ಚಿತ್ರರಂಗ ಗಣ್ಯಾತಿಗಣ್ಯರ ಬಣ್ಣ ಬಯಲು ಮಾಡುತ್ತಿರುವ ಬೆನ್ನಲ್ಲೇ, ಸ್ಫೋಟಕ ಆರೋಪ ವೊಂದು ಇದೀಗ ಬಾಲಿವುಡ್ ಮೇರುನಟ ಅಮಿತಾಭ್ ಬಚ್ಚನ್ ವಿರುದ್ಧ ಕೇಳಿಬಂದಿದೆ.

ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಕೂಡ ಇಂತಹದ್ದೇ ಕೆಲಸಗಳಲ್ಲಿ ಭಾಗಿ ಯಾಗಿದ್ದಾರೆಂದು ಖ್ಯಾತ ಕೇಶ ವಿನ್ಯಾಸಕಿ ಸಪ್ನಾ ಭವಾನಿಯವರು ಗಂಭೀರ ಆರೋಪ ಮಾಡಿದ್ದು, ಇದು ಬಾಲಿವುಡ್‍ನಲ್ಲಿ ಹೊಸ ಸಂಚಲನಕ್ಕೆ ದಾರಿ ಮಾಡಿಕೊಟ್ಟಿದೆ. ಮೀ ಟೂ ಆಂದೋಲನ ಬೆಂಬಲಿಸಿ ಬಚ್ಚನ್ ಮಾಡಿದ್ದ ಟ್ವೀಟ್ ಒಂದನ್ನು ಮಹಿಳೆಯೊಬ್ಬರು ಟ್ವೀಟ್ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಸಪ್ನಾ ‘ಇದೊಂದು ದೊಡ್ಡ ಸುಳ್ಳು. ಪಿಂಕ್ ಚಿತ್ರ ಬಿಡುಗಡೆಯಾಯಿತು. ಹೋಯಿತು. ಇನ್ನು ಹೋರಾಟಗಾರನಾಗಿ ಗುರುತಿಸಿಕೊಂಡಿರುವ ನಿಮ್ಮ ಬಣ್ಣ ಶೀಘ್ರ ಹೊರಬರಲಿದೆ. ನಿಮ್ಮ ಸತ್ಯ ಶೀಘ್ರ ಹೊರಬೀಳಲಿದೆ. ಬಹುಶಃ ಸತ್ಯ ಇದನ್ನು ಕೇಳಿ ನೀವು ಬೆರಳು ಕಚ್ಚಿಕೊಳ್ಳುತ್ತಿರಬಹುದು. ಏಕೆಂದರೆ ಕಚ್ಚರೂ ಬರೀ ಉಗುರು ಸಾಕಾಗದು ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಬಚ್ಚನ್ ಲೈಂಗಿಕ ಕಿರುಕುಳ ಪ್ರಕರಣದ ಬಗ್ಗೆ ಸ್ವತಃ ನಾನೇ ಹಲವು ಕಥೆಗಳನ್ನು ಕೇಳಿದ್ದೇನೆ. ಬಹುಶಃ ಹೀಗೆ ನೊಂದವರ ಪೈಕಿ ಯಾರಾದರೂ ಬಹಿರಂಗವಾಗಿ ಪ್ರತಿಕ್ರಿಯೆ ನೀಡಿದರೆ ಎಲ್ಲವೂ ಬಯಲಾಗಲಿದೆ ಎಂದು ಸಪ್ನಾ ಟ್ವಿಟರ್‍ನಲ್ಲಿ ಪ್ರತಿಕ್ರಿಯಿಸಿದ್ದಾರೆ.

Translate »