ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಆರ್ಭಟ ಚಂಡಮಾರುತಕ್ಕೆ ಮೂವರು ಬಲಿ
ಮೈಸೂರು

ಪಶ್ಚಿಮ ಬಂಗಾಳದಲ್ಲಿ ಆಂಫಾನ್ ಆರ್ಭಟ ಚಂಡಮಾರುತಕ್ಕೆ ಮೂವರು ಬಲಿ

May 21, 2020

ಕೊಲ್ಕತ್ತಾ: ಆಂಫಾನ್ ಚಂಡಮಾರುತ ಕೊನೆಗೂ ಪಶ್ಚಿಮ ಬಂಗಾಳದ ಕರಾವಳಿ ತೀರವನ್ನು ಪ್ರವೇಶಿಸಿದೆ. ಪರಿಣಾಮ ಹಲವಾರು ಜಿಲ್ಲೆಗಳಲ್ಲಿ ಭೀಕರ ಮಳೆ ಕಾಣಿಸಿಕೊಂಡಿದ್ದು, 160ರಿಂದ 170 ಕಿಮೀ ವೇಗದಲ್ಲಿ ಬೀಸುತ್ತಿರುವ ಚಂಡಮಾರು ತಕ್ಕೆ 3 ಜನ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಭಾರೀ ಮಳೆ ಮತ್ತು ಗಾಳಿಗೆ ಕರಾವಳಿ ಭಾಗದ ಜಿಲ್ಲೆಗಳಲ್ಲಿ ಮರಗಳು ಮತ್ತು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಚಂಡ ಮಾರುತ ಉಂಟು ಮಾಡಿರುವ ಪರಿಸ್ಥಿತಿ ಪಶ್ಚಿಮ ಬಂಗಾಳದಲ್ಲಿ ಭೀಕರವಾಗಿದ್ದು, ಹೌರಾ ಜಿಲ್ಲೆಯ ಮಿನಾಖಾನ್ ಜಿಲ್ಲೆಯಲ್ಲಿ ಇಬ್ಬರು ಮಹಿಳೆಯರು ಹಾಗೂ ಬಂಗಾಲದ ಉತ್ತರ ಭಾಗದ 24 ಪರಗಣ ಜಿಲ್ಲೆಯಲ್ಲಿ ಓರ್ವ ಪುರುಷ ಮೃತಪಟ್ಟಿದ್ದಾನೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಂಡಮಾರುತದ ಕಾರಣ ದಿಂದಾಗಿ ಸಮುದ್ರದಲ್ಲಿ 5 ಮೀಟರ್ ಎತ್ತರದ ಉಬ್ಬರವಿಳಿತದ ಅಲೆಗಳು ಕಾಣಿಸುತ್ತಿವೆ. ಅಲ್ಲದೆ, ಮಳೆಯಿಂದಾಗಿ ಸಾಕಷ್ಟು ಕಡೆ ಗಳಲ್ಲಿ ಭೂ ಕುಸಿತ ಉಂಟಾಗಿರುವ ಕುರಿತು ಸಹ ಸಾಕಷ್ಟು ವರದಿ ಯಾಗಿದೆ. ಕೊರೊನಾ ಭೀತಿಯ ನಡುವೆ ಈ ಪರಿಸ್ಥಿತಿ ನಿಭಾಯಿ ಸುವುದು ಪಶ್ಚಿಮ ಬಂಗಾಳ ಸರ್ಕಾರಕ್ಕೆ ಸವಾಲಿನ ಕೆಲಸವಾಗಿದೆ.

Translate »