ಕೊರೊನಾ ಸೋಂಕು ಹೆಚ್ಚಳ; ಜನರನ್ನೇ ದೂಷಿಸುವ ಸರ್ಕಾರದ್ದು ಬೇಜವಾಬ್ದಾರಿತನ
ಮೈಸೂರು

ಕೊರೊನಾ ಸೋಂಕು ಹೆಚ್ಚಳ; ಜನರನ್ನೇ ದೂಷಿಸುವ ಸರ್ಕಾರದ್ದು ಬೇಜವಾಬ್ದಾರಿತನ

April 21, 2021

ಮೈಸೂರು, ಏ.20(ಆರ್‍ಕೆಬಿ)- ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚಳಕ್ಕೆ ಜನರನ್ನೇ ದೂಷಿಸು ವುದು ಸರ್ಕಾರದ ಬೇಜವಾಬ್ದಾರಿತನ ಎಂದು ಎಂಎಲ್‍ಸಿ ಹೆಚ್.ವಿಶ್ವನಾಥ್ ಇಂದಿಲ್ಲಿ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಮೈಸೂರಿನ ಖಾಸಗಿ ಹೋಟೆಲ್‍ನಲ್ಲಿ ಮಾಧ್ಯಮ ಗಳೊಂದಿಗೆ ಪ್ರತಿಕ್ರಿಯಿಸಿದ ಅವರು, ಮುಖ್ಯ ಮಂತ್ರಿ, ಉಪಮುಖ್ಯಮಂತ್ರಿಗಳು ಮತ್ತು ಸಚಿವರ ನಡುವೆ ಯಾವುದೇ ಸಹಕಾರ ಇಲ್ಲ. ಸಹಕಾರ ಇಲ್ಲದಿದ್ದರಿಂದಲೇ ಇಂದು ಈ ಪರಿಸ್ಥಿತಿ ಬಂದಿದೆ. ಒಂದು ವಾರದಿಂದ ಬರೀ ಸಭೆಗಳನ್ನು ನಡೆಸುತ್ತಿದ್ದಾರೆ. ಯಾವ ತೀರ್ಮಾನ ಮಾಡಿದ್ದಾರೆ ಎಂದು ಪ್ರಶ್ನಿಸಿದರು.

ಈ ವೈಪರೀತ್ಯಗಳನ್ನು ತಡೆಗಟ್ಟುವಲ್ಲಿ ಸರ್ಕಾರ ವಿಫಲವಾಗಿದೆ ಎಂಬ ಭಾವನೆ ರಾಜ್ಯದ ಜನರಲ್ಲಿ ದಿನೇದಿನೆ ಜಾಸ್ತಿಯಾಗುತ್ತಿದೆ. 4 ತಿಂಗಳು ಸುಮ್ಮನೆ ಕುಳಿತು ಈಗ ಇದ್ದಕ್ಕಿದ್ದಂತೆ ಕೊರೊನಾ ನಿಯಂ ತ್ರಿಸಲು ಓಡಾಡುತ್ತಿದ್ದಾರೆ. ಇದು ಸರ್ಕಾರದ ಬೇಜ ವಾಬ್ದಾರಿತನ ತೋರಿಸುತ್ತದೆ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಒಬ್ಬರಿಗೆ ಬಿಟ್ಟು ಯಾರಿಗೂ ಅಧಿಕಾರ ವಿಲ್ಲ. ಈ ಸೋಂಕು ಹಬ್ಬಲು ಜನರೇ ಕಾರಣ ಎಂದು ಹೇಳಿದರೆ ಇದು ಬೇಜವಾಬ್ದಾರಿ ಹೇಳಿಕೆ ಅಲ್ಲದೆ ಮತ್ತೇನು? ಎಂದು ಪ್ರಶ್ನಿಸಿದ ಅವರು, ಇದು ಸರ್ಕಾರದ ಬೇಜವಾ ಬ್ದಾರಿ ಹೇಳಿಕೆಯಾಗಿದೆ ಎಂದು ಆಕ್ಷೇಪಿಸಿದರು.
ಡಿಹೆಚ್‍ಓ ಅವರಿಗೆ ಯಾವ ಅಧಿಕಾರವನ್ನೂ ಕೊಟ್ಟಿಲ್ಲ. ಅಧಿಕಾರವೇ ಕೊಡದಿದ್ದರೆ ಅವ ರೇನು ಮಾಡಲು ಸಾಧ್ಯ? ಸಣ್ಣಪುಟ್ಟದ್ದ್ಕೂ ಪತ್ರ ಬರೆದುಕೊಂಡು ಕೂರಬೇಕೇ? ಇಲಾಖೆಗೆ ಏಳು ಜನ ಐಎಎಸ್ ಅಧಿಕಾರಿಗಳಿದ್ದಾರೆ. ಅವರ ಬಳಿ ಹೋಗಿ ಡಿಹೆಚ್‍ಓ, ನಿರ್ದೇಶಕರು ಫೈಲ್ ಹಿಡಿದು ನಿಲ್ಲಬೇಕೇ ಎಂದು ಪ್ರಶ್ನಿಸಿದರು.

ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಸರ್ಕಾರ ಬಹಳ ಜವಾಬ್ದಾರಿಯುತವಾಗಿ ನಡೆದು ಕೊಳ್ಳಬೇಕಾಗುತ್ತದೆ. ಆರೋಗ್ಯ ಸಚಿವರಿಗೆ, ಜಿಲ್ಲಾ ಉಸ್ತುವಾರಿ ಸಚಿವರಿಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನೀಡಬೇಕು ಎಂದು ವಿಶ್ವನಾಥ್ ಸಲಹೆ ನೀಡಿದರು.

Translate »