ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ರೈತ ಸಂಘ ಪ್ರತಿಭಟನೆ
ಮೈಸೂರು

ರಸಗೊಬ್ಬರ ಬೆಲೆ ಏರಿಕೆ ಖಂಡಿಸಿ ರೈತ ಸಂಘ ಪ್ರತಿಭಟನೆ

April 21, 2021

ಮೈಸೂರು,ಏ.20(ಪಿಎಂ)- ರಾಸಾ ಯನಿಕ ಗೊಬ್ಬರದ ಬೆಲೆ ಹೆಚ್ಚಳದ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘದ ಮೈಸೂರು ತಾಲೂಕು ಘಟಕದ ವತಿಯಿಂದ ಮಂಗಳ ವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ತಾಲೂಕು ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಪ್ರಧಾನಿ ನರೇಂದ್ರ ಮೋದಿಯವರು ರಾಸಾಯನಿಕ ಗೊಬ್ಬರದ ಬೆಲೆ ಹೆಚ್ಚಿ ಸುವ ಮೂಲಕ ಕೃಷಿಯಿಂದ ರೈತರು ವಿಮುಖರಾಗುವಂತೆ ಮಾಡುತ್ತಿದ್ದಾರೆ. ರೈತರ ಆದಾಯ ದ್ವಿಗುಣಗೊಳಿಸುವು ದಾಗಿ ಕೇವಲ ಹೇಳುತ್ತಲೇ ಪ್ರತಿ ವರ್ಷ ಕೃಷಿ ಉತ್ಪನ್ನ ವೆಚ್ಚವನ್ನು ಹೆಚ್ಚಿಸುತ್ತಲೇ ಬರುತ್ತಿದ್ದಾರೆ. ಈಗ ರಸಗೊಬ್ಬರ ಬೆಲೆ ದುಬಾರಿ ಮಾಡಿದ್ದಾರೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ವೇಳೆ ಮಾಧ್ಯಮದವ ರೊಂದಿಗೆ ಮಾತನಾಡಿದ ಸಂಘದ ತಾಲೂಕು ಅಧ್ಯಕ್ಷ ಪಿ.ಮರಂಕಯ್ಯ, ಏ.26 ರಂದು ರಾಜ್ಯದ ಎಲ್ಲಾ ಸಂಸದರ ಕಚೇರಿ ಎದುರು ಪ್ರತಿಭಟನೆ ನಡೆಸಿ, ಅವರ ಮೂಲಕ ರಸಗೊಬ್ಬರದ ಬೆಲೆ ಇಳಿಕೆ ಮಾಡುವಂತೆ ಒತ್ತಾಯ ಪತ್ರವನ್ನು ಪ್ರಧಾನಿಗಳಿಗೆ ಕಳು ಹಿಸಲಾಗುವುದು. ಅಂತೆಯೇ ಮೈಸೂರಿ ನಲ್ಲಿ ಸಂಸದ ಪ್ರತಾಪ್ ಸಿಂಹ ಅವರ ಕಚೇರಿ ಎದುರು ಪ್ರತಿಭಟನೆ ನಡೆಸಲಾಗು ವುದು. ಇದೇ ವೇಳೆ ಅವರು ಇತ್ತೀಚಿಗೆ ರೈತ ಹೋರಾಟಗಾರರ ಬಗ್ಗೆ `ಖಾಲಿ ಹೋರಾಟ ಗಾರರು’ ಎಂದು ಹೇಳಿಕೆ ನೀಡಿರುವ ಸಂಬಂಧ ಅವರು ಸ್ಪಷ್ಟೀಕರಣ ನೀಡಬೇಕೆಂದು ಒತ್ತಾ ಯಿಸಲಾಗುವುದು ಎಂದು ತಿಳಿಸಿದರು.

ತಾಲೂಕು ಕಚೇರಿಯ ಗ್ರೇಡ್-2 ತಹಸೀ ಲ್ದಾರ್ ರತ್ನಾಂಬಿಕೆ ಅವರಿಗೆ ಮನವಿ ಸಲ್ಲಿಸಿ, ಪ್ರತಿಭಟನೆ ಕೈಬಿಡಲಾಯಿತು. ತಾಲೂಕು ಸಂಘಟನಾ ಕಾರ್ಯದರ್ಶಿ ವಿಜಯೇಂದ್ರ, ಸಂಘದ ಮುಖಂಡರಾದ ಮಂಡಕಳ್ಳಿ ಮಹೇಶ್, ಚಂದ್ರಶೇಖರ್, ಕೋಚನಹಳ್ಳಿ ಗೋವಿಂದ ರಾಜು, ಆನಂದೂರು ಪ್ರಭಾಕರ್ ಮತ್ತಿತ ರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Translate »