ಮೈಸೂರಲ್ಲೊಂದು ಅಮಾನವೀಯ ಘಟನೆ
ಮೈಸೂರು

ಮೈಸೂರಲ್ಲೊಂದು ಅಮಾನವೀಯ ಘಟನೆ

November 29, 2021

ಮೈಸೂರು, ನ.28- ಒಡಹುಟ್ಟಿದ ಅಣ್ಣನೇ ತನ್ನ ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದು, ಆಕೆ ಈಗ ಗರ್ಭಿಣಿ ಯಾಗಿರುವ ಅಮಾನವೀಯ ಘಟನೆ ಸಾಂಸ್ಕøತಿಕ ನಗರಿ ಮೈಸೂರಿನ ಗಿರಿದರ್ಶಿನಿ ಬಡಾವಣೆಯಿಂದ ವರದಿಯಾಗಿದೆ.

ತಂದೆ-ತಾಯಿ ಇಲ್ಲದೇ ಇಬ್ಬರು ಸಹೋದರರೊಂದಿಗೆ ವಾಸಿಸುತ್ತಿದ್ದ 17 ವರ್ಷದ ಡಿಪ್ಲೊಮಾ ವಿದ್ಯಾರ್ಥಿನಿ ಅಣ್ಣನಿಂ ದಲೇ ಅತ್ಯಾಚಾರಕ್ಕೆ ಒಳಗಾದವಳಾಗಿದ್ದು, ಆಕೆಗೆ ತಾನು ಗರ್ಭಿಣಿ ಯಾಗಿರುವ ಅರಿವೇ ಇರಲಿಲ್ಲ. ಹೊಟ್ಟೆನೋವು ಕಾಣಿಸಿಕೊಂಡ ಪರಿಣಾಮ ಚಿಕಿತ್ಸೆಗಾಗಿ ಈಕೆ ಕೆ.ಆರ್.ಆಸ್ಪತ್ರೆಗೆ ತೆರಳಿದಾಗ ಗರ್ಭಿಣಿಯಾಗಿರುವುದು ಬೆಳಕಿಗೆ ಬಂದಿದೆ. ಅಪ್ರಾಪ್ತ ಬಾಲಕಿ ಗರ್ಭಿಣಿಯಾಗಿದ್ದ ಕಾರಣ ಮಹಿಳಾ ವೈದ್ಯರು ಆಕೆಗೆ ಕೌನ್ಸಿಲಿಂಗ್ ನಡೆಸಿ, ಉಪಾಯವಾಗಿ ವಿಚಾರಿಸಿದಾಗ ಆಕೆ ಒಡಹುಟ್ಟಿದ ಅಣ್ಣನಿಂದಲೇ ಅತ್ಯಾಚಾರಕ್ಕೆ ಒಳಗಾಗಿರುವುದು ಬೆಳಕಿಗೆ ಬಂದಿದೆ. ಈ ಸಂಬಂಧ ವೈದ್ಯರಿಂದ ಆಲನಹಳ್ಳಿ ಪೊಲೀಸ್ ಠಾಣೆಗೆ ಮೆಮೋ ಕಳುಹಿಸಲಾಗಿದ್ದು, ಅದರ ಆಧಾರದ ಮೇರೆಗೆ ಪೊಲೀಸರು ಬಾಲಕಿ
ಅಣ್ಣನ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿ, ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿ ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಗಿರಿದರ್ಶಿನಿ ಬಡಾವಣೆಯ ಈ ಬಾಲಕಿಯ ತಂದೆ ಕೆಲ ವರ್ಷಗಳ ಹಿಂದೆಯೇ ಕುಟುಂಬವನ್ನು ತೊರೆದಿದ್ದಾನೆ. ತಾಯಿಯೊಂದಿಗೆ ಇಬ್ಬರು ಅಕ್ಕಂದಿರು ಹಾಗೂ ಇಬ್ಬರು ಅಣ್ಣಂದಿರೊಂದಿಗೆ ಬೆಳೆಯುತ್ತಿದ್ದ ಬಾಲಕಿಯ ತಾಯಿ ಕೂಡ ಕೆಲ ವರ್ಷಗಳ ಹಿಂದೆ ಮೃತಳಾಗಿದ್ದು, ಇಬ್ಬರು ಅಕ್ಕಂದಿರು ಮದುವೆಯಾಗಿ ಗಂಡಂದಿರ ಮನೆ ಸೇರಿದ್ದಾರೆ. ಇಬ್ಬರು ಅಣ್ಣಂದಿರೊಂದಿಗೆ ವಾಸಿಸುತ್ತಿದ್ದ ಬಾಲಕಿ ಡಿಪ್ಲೋಮಾ ವ್ಯಾಸಂಗ ಮಾಡುತ್ತಿದ್ದು, 30 ವರ್ಷ ವಯಸ್ಸಿನ ಈಕೆಯ ಹಿರಿಯ ಅಣ್ಣ ಪಾನಮತ್ತನಾಗಿ ಆಗಿದ್ದಾಂಗೇ ತಂಗಿಯ ಮೇಲೆ ಅತ್ಯಾಚಾರವೆಸಗುತ್ತಿದ್ದ ಎನ್ನಲಾಗಿದೆ.

ಅಸಹಾಯಕಳಾಗಿದ್ದ ಬಾಲಕಿ ತನ್ನ ಅಣ್ಣನಿಂದಲೇ ಆಗುತ್ತಿರುವ ದೌರ್ಜನ್ಯವನ್ನು ಯಾರಿಗೂ ಹೇಳಿಕೊಳ್ಳಲಾಗದೇ ನಲುಗಿದ್ದಾಳೆ. ಕೊನೆಗೂ ಹೊಟ್ಟೆ ನೋವಿಗೆ ಚಿಕಿತ್ಸೆ ಪಡೆಯಲು ಆಸ್ಪತ್ರೆಗೆ ತೆರಳಿದಾಗ ಪ್ರಕರಣ ಬಯಲಾಗಿ ಅಣ್ಣ ಜೈಲು ಸೇರಿದರೆ, ಬಾಲಕಿಯನ್ನು ಚೆಲುವಾಂಬ ಆಸ್ಪತ್ರೆಯಲ್ಲಿ ದಾಖಲಿಸಿ, ಆರೈಕೆ ಮಾಡಲಾಗುತ್ತಿದೆ.

Translate »