ವೃದ್ಧರಿಗೆ ಸೇವೆ ಮೂಲಕ ಅನಂತಕುಮಾರ್ ಜನ್ಮ ದಿನಾಚರಣೆ
ಮೈಸೂರು

ವೃದ್ಧರಿಗೆ ಸೇವೆ ಮೂಲಕ ಅನಂತಕುಮಾರ್ ಜನ್ಮ ದಿನಾಚರಣೆ

September 23, 2021

ಮೈಸೂರು, ಸೆ. 22- ಕೇಂದ್ರ ಸಚಿವ ದಿವಂಗತ ಅನಂತಕುಮಾರ್‍ರವರ ಜನ್ಮ ದಿನಾಚರಣೆ ಅಂಗವಾಗಿ ಪ್ರಜ್ಞಾವಂತ ನಾಗ ರಿಕ ವೇದಿಕೆ ಹಾಗೂ ಅನಂತ್ ಕುಮಾರ್ ಅಭಿಮಾನಿ ಬಳಗದ ವತಿಯಿಂದ ಕನಕಗಿರಿ ಯಲ್ಲಿರುವ ಶ್ರೀ ಭಾರತಿ ವೃದ್ಧ ಸೇವಾಶ್ರಮ ದಲ್ಲಿರುವ ವೃದ್ಧರಿಗೆ ಹೊದಿಕೆ ಹಾಗೂ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷ ಕೆ.ಆರ್.ಸತ್ಯನಾರಾಯಣ್ ಮಾತನಾಡಿ, ಅದಮ್ಯ ಚೇತನದ ಮೂಲಕ ಅಕ್ಷರ ಅನ್ನ ಆರೋಗ್ಯ ಕ್ಷೇತ್ರದಲ್ಲಿ ಅನಂತಕುಮಾರ್ ಅವರು ಲಕ್ಷಾಂತರ ಮಂದಿಯ ಜೀವನಕ್ಕೆ ದಾರಿದೀಪವಾಗಿದ್ದಾರೆ. ಹಸಿರು ಭಾನುವಾರ ಸಸಿ ನೆಡುವ ಅಭಿಯಾನದ ಮೂಲಕ ಬೆಂಗ ಳೂರಿನಲ್ಲಿ ಸಾಕಷ್ಟು ಸಂಘ ಸಂಸ್ಥೆಗಳಿಗೆ ಹಸಿರು ಸಂರಕ್ಷಣೆ ಮಾಡಲು ಪೆÇ್ರೀತ್ಸಾಹ ನೀಡಿದರು. ಕನ್ನಡ ಭಾಷೆ, ರಾಜ್ಯದ ಗಡಿ, ಜಲವಿವಾದದಂತಹ ವಿಚಾರದಲ್ಲಿ ಪಕ್ಷಾ ತೀತವಾಗಿ ಕನ್ನಡಿಗನಾಗಿ ಧ್ವನಿಯೆತ್ತುತ್ತಿ ದ್ದರು. ರೈತಾಪಿವರ್ಗಕ್ಕೆ ರಾಸಾಯನಿಕ ಬಣ್ಣ ಮಿಶ್ರಣ ರಹಿತ ರಸಗೊಬ್ಬರ ಕಡಿಮೆ ಬೆಲೆ ಯಲ್ಲಿ ವಿತರಣೆ, ಬಡವರ್ಗದ ಹೃದಯ ಸಂಬಂಧಿ ಶಸ್ತ್ರಚಿಕಿತ್ಸೆ, ಸ್ಟಂಟ್ ಅಳವಡಿಕೆಗೆ ಸರ್ಕಾರದಿಂದ ಸಬ್ಸಿಡಿ, ವಿವಿಧ ಕ್ಷೇತ್ರದ ನೂರಾರು ವ್ಯಕ್ತಿಗಳನ್ನು ಸಮಾಜದ ಶಕ್ತಿ ಯನ್ನಾಗಿ ಮುಖ್ಯವಾಹಿನಿಗೆ ತಂದವರು ಅನಂತ್‍ಕುಮಾರ್ ಎಂದರು. ದ್ರಾಕ್ಷಾಯಿಣಿ ಸತ್ಯನಾರಾಯಣ್, ವಿಪ್ರ ಮಹಿಳಾ ಮುಖಂಡರಾದ ವೀಣಾ ಅಯ್ಯಂಗಾರ್, ಪ್ರಜ್ಞಾವಂತ ನಾಗರಿಕ ವೇದಿಕೆ ಅಧ್ಯಕ್ಷ ಕಡ ಕೊಳ ಜಗದೀಶ್, ಹೊಯ್ಸಳ ಕರ್ನಾಟಕ ಸಂಘದ ಸಹ ಕಾರ್ಯದರ್ಶಿ ರಂಗನಾಥ್, ಜಯಸಿಂಹ, ಸುಚೀಂದ್ರ, ಕುಸುಮಾ, ಲಕ್ಷ್ಮಿ, ಶೈಲಾ, ಸವಿತಾ, ಜಯಲಕ್ಷಿ ಮಾಲ್, ಶ್ಯಾಮ್ ಇನ್ನಿತರರು ಈ ವೇಳೆ ಹಾಜರಿದ್ದರು.

Translate »