ಜಿಂಕೆ ಚರ್ಮ ಮಾರುತ್ತಿದ್ದ ಆಂಧ್ರದ ಮೂವರ ಬಂಧನ
ಮೈಸೂರು

ಜಿಂಕೆ ಚರ್ಮ ಮಾರುತ್ತಿದ್ದ ಆಂಧ್ರದ ಮೂವರ ಬಂಧನ

October 24, 2021

ಮೈಸೂರು,ಅ.23(ಎಂಟಿವೈ)-ಮೈಸೂರಿನ ಕುಕ್ಕರಹಳ್ಳಿ ಕೆರೆ ಬಳಿ ಜಿಂಕೆ ಚರ್ಮ ಮಾರಾಟ ಮಾಡುತ್ತಿದ್ದ ಆಂಧ್ರಪ್ರದೇಶದ ಮೂವರನ್ನು ಅರಣ್ಯ ಸಂಚಾರಿ ದಳದ ತಂಡ ಬಂಧಿ ಸಿದ್ದು, ಒಂದು ಜಿಂಕೆ ಚರ್ಮ ವಶಪಡಿಸಿಕೊಂಡಿದೆ. ಆಂಧ್ರಪ್ರದೇಶ ಚಿತ್ತೂರು ಜಿಲ್ಲೆಯ ಪಲಮನೇರು ತಾಲೂಕಿನ ಶಿಕಾರಿ ಕಾಲೋನಿಯ ನಿವಾಸಿ ಕುಟ್ಟಿ ಯಪ್ಪ ಬಿನ್ ಕಣಗಪರಂ(42), ವಿಜಯ್‍ಕಾಂತ್ ಬಿನ್ ದೇವರಾಜ್ (45), ಕಮಲ್‍ಹಾಸನ್ ಬಿನ್ ಪರಶುರಾಮ್(43) ಬಂಧಿತರಾ ದವರು. ಬಂಧಿತರು ಹಕ್ಕಿಪಿಕ್ಕಿ ಜನಾಂಗಕ್ಕೆ ಸೇರಿದವರಾಗಿದ್ದಾರೆ.

ಈ ವಿಚಾರ ತಿಳಿದ ಅರಣ್ಯ ಸಂಚಾರಿ ದಳದ ಸಿಬ್ಬಂದಿ ದಾಳಿ ಮಾಡಿ ಇಬ್ಬರು ಬೇಟೆಗಾರರು ಸೇರಿದಂತೆ ಮೂವರನ್ನು ವಶಕ್ಕೆ ಪಡೆದು ಪರಿಶೀಲಿಸಿದಾಗ ಜಿಂಕೆ ಚರ್ಮ ಸಿಕ್ಕಿತು. ಕ್ರಾಫರ್ಡ್ ಭವನದ ಪಕ್ಕದ ರಸ್ತೆಯಲ್ಲಿ ಕುಕ್ಕರಹಳ್ಳಿ ಕೆರೆ ಸಮೀಪ ಜಿಂಕೆ ಚರ್ಮ ಮಾರಾಟ ಮಾಡಲು ಯತ್ನಿಸುತ್ತಿದ್ದಾಗ ಪ್ರಕರಣ ಪತ್ತೆಯಾಗಿದೆ.

ಆಂಧ್ರಪ್ರದೇಶದ ಶಿಕಾರಿ ಕಾಲೋನಿ ಬಳಿ ಜಿಂಕೆಯನ್ನು ಬೇಟೆ ಯಾಡಿ ಚರ್ಮ ಮಾರಾಟ ಮಾಡುತ್ತಿದ್ದಾಗಿ ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ. ಪ್ರಕರಣ ದಾಖ ಲಿಸಿಕೊಂಡಿರುವ ಅರಣ್ಯ ಸಂಚಾರಿ ದಳದ ಸಿಬ್ಬಂದಿ ಆಂಧ್ರದಿಂದ ಜಿಂಕೆ ಚರ್ಮವನ್ನು ಮೈಸೂರಿಗೆ ಹೇಗೆ ಸಾಗಿಸಿದರು ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಸಂಚಾರಿ ದಳದ ಡಿಸಿಎಫ್ ರಾಮಕೃಷ್ಣಪ್ಪ, ಎಸಿಎಫ್ ಮನೋಹರ್ ಸುವರ್ಣ ಮಾರ್ಗದರ್ಶನದಲ್ಲಿ ಆರ್‍ಎಫ್‍ಓ ವಿವೇಕ್ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿಆರ್‍ಎಫ್‍ಗಳಾದ ಪ್ರಮೋದ್, ಡಿ.ಎಂ.ವಿನೋದ್‍ಕುಮಾರ್, ನಾಗರಾಜು, ಅನಿಲ್ ಕುಮಾರ್, ಟಿ.ಸಿ.ಸ್ನೇಹ, ಕೆ.ಜೆ. ಮೇಘನ, ಅರಣ್ಯ ರಕ್ಷಕರಾದ ಮಹಾಂತೇಶ, ಕೊಟ್ರೇಶ ಪೂಜಾರ್, ಚೆನ್ನಬಸವಯ್ಯ, ವಿರೂ ಪಾಕ್ಷ, ಉದಯ್‍ಕುಮಾರ್, ಕುಮಾರ್, ಪ್ರಕಾಶ್, ದಿವಾಕರ್, ವಾಹನ ಚಾಲಕರಾದ ಮಧು, ಪುಟ್ಟಸ್ವಾಮಿ ಪಾಲ್ಗೊಂಡಿದ್ದರು.

Translate »