ಮೈಸೂರಿನ ಛಾಯಾದೇವಿ ಆಶ್ರಮದ ವೃದ್ಧರು, ಮಕ್ಕಳೊಂದಿಗೆ ಸಂಘದ ವಾರ್ಷಿಕೋತ್ಸವ ಆಚರಣೆ
ಮೈಸೂರು

ಮೈಸೂರಿನ ಛಾಯಾದೇವಿ ಆಶ್ರಮದ ವೃದ್ಧರು, ಮಕ್ಕಳೊಂದಿಗೆ ಸಂಘದ ವಾರ್ಷಿಕೋತ್ಸವ ಆಚರಣೆ

February 11, 2021

ಮೈಸೂರು,ಫೆ.10-ಮೈಸೂರಿನ ಕೃಷ್ಣರಾಜ ಕ್ಷೇತ್ರ ಭಾವಸಾರ ಕ್ಷತ್ರಿಯ ಸೇವಾ ಸಮಿತಿಯ ಮೊದಲ ವಾರ್ಷಿಕೋತ್ಸವವನ್ನು ಮೈಸೂರಿನ ಜಯನಗರದಲ್ಲಿರುವ ಛಾಯಾದೇವಿ ಆಶ್ರಮ ದಲ್ಲಿ ವೃದ್ಧರು ಮತ್ತು ಮಕ್ಕಳಿಗೆ ಊಟದ ವ್ಯವಸ್ಥೆ ಕಲ್ಪಿಸುವ ಮೂಲಕ ವಿಶಿಷ್ಟವಾಗಿ ಆಚರಿಸಿದರು. ಮಕ್ಕಳಿಗೆ ಪುಸ್ತಕ, ಪೆನ್, ಹಣ್ಣು ಹಂಪಲು ವಿತರಿಸಿದರು. ಇದೇ ವೇಳೆ ಕೊರೊನಾ ವಾರಿಯರ್ಸ್ ಪೊಲೀಸ್ ಇಲಾಖೆಯ ಪಿ.ಜೆ.ರಾಜು ಪತಂಗೆ, ಕೃಷ್ಣೋಜಿರಾವ್, ಮುಖಂಡರಾದ ಲೋಕೇಶ್ ಸಿಂತ್ರೆ, ಗಣೇಶ್ ಸಿಂತ್ರೆ, ದಿನೇಶ್ ಕಮಿತ್ಕರ್ ಅವರನ್ನು ಸನ್ಮಾ ನಿಸಿದರು. ಈ ಸಂದರ್ಭದಲ್ಲಿ ಭಾವಸಾರ ಕ್ಷತ್ರಿಯ ಮಂಡಳಿಯ ಜಯರಾಮರಾವ್ ಲಾಳಿಗೆ, ರಾಕೇಶ್ ನಾಯಕ್, ಸುಭಾಷ್ ಪತಂಗೆ, ಸಮಿತಿಯ ಪದಾಧಿಕಾರಿಗಳಾದ ಶಾಂತಾರಾಂ ಸಿಂತ್ರೆ, ಗೋಪಿನಾಥ್ ಬಗರೆ, ಯಶವಂತ್ ಬೆಳಂಕರ್, ಸುಧೀಂದ್ರ ಹಲಾಲೆ, ಪ್ರಶಾಂತ್ ಕಾಂಗೋಕರ್, ಭರತ್ ಕುತ್ನೀಕರ್, ಸುಮಿತ್ರಾ ಘನಾತೆ, ರವಿಕುತ್ನೀಕರ್, ದರ್ಶನ್ ಮತ್ತು ದೇವರಾಜ್ ಹಲಾಲೆ, ಆಶ್ರಮದ ವ್ಯವಸ್ಥಾಪಕ ಶಿವಪ್ರಸಾದ್ ಇತರರಿದ್ದರು.

 

Translate »