ಫೆ.14, ಕೊಡೋದಿಲ್ಲ? ಬಿಡೋದಿಲ್ಲ? ನಾಟಕ
ಮೈಸೂರು

ಫೆ.14, ಕೊಡೋದಿಲ್ಲ? ಬಿಡೋದಿಲ್ಲ? ನಾಟಕ

February 11, 2021

ಮೈಸೂರು,ಫೆ.10-ಮೂಲತಃ ಇಟಲಿಯ ದಾರಿಯೋ ಫೋ ಬರೆದ ಇಂಗ್ಲಿಷ್ ನಾಟಕ ಅoಟಿ’ಣ Pಚಿಥಿ, Woಟಿ’ಣ Pಚಿಥಿಯನ್ನು ಕೃಷ್ಣ ಹೆಬ್ಬಾಲೆ ಕೊಡೋ ದಿಲ್ಲ? ಬಿಡೋದಿಲ್ಲ? ಎಂದು ಕನ್ನಡಕ್ಕೆ ಅನು ವಾದಿಸಿದ್ದು, ಈ ನಾಟಕ ಪ್ರದರ್ಶನವನ್ನು ಫೆ.14 ರಂದು ಏರ್ಪಡಿಸಲಾಗಿದೆ. ಅಂದು ಸಂಜೆ 6.30ಕ್ಕೆ ಕಲಾಮಂದಿರದ ಭೂಮಿಗೀತದಲ್ಲಿ ನಾಟಕ ಪ್ರದರ್ಶನಗೊಳ್ಳಲಿದ್ದು, ರಾಷ್ಟ್ರೀಯ ನಾಟಕ ಶಾಲೆ ಪದವೀಧರೆ ಭಾರತೀಯ ರಂಗ ಶಿಕ್ಷಣ ಕೇಂದ್ರದ ಶಿಕ್ಷಕಿ ಅಪೂರ್ವ ಆನಗಳ್ಳಿ ನಾಟಕವನ್ನು ನಿರ್ದೇಶಿಸಿದ್ದಾರೆ. ಈ ನಾಟಕವು ನಿತ್ಯ ಬಳಕೆಯ ವಸ್ತುಗಳ ಬೆಲೆ ಹೆಚ್ಚಳದ ವಿರುದ್ಧ ಗ್ರಾಹಕರು ದಂಗೆ ಏಳುವ ಕಥೆ ಹೊಂದಿದೆ. ಇಬ್ಬರು ಹೆಂಗಸರು ಸ್ಥಳೀಯ ಸೂಪರ್ ಮಾರ್ಕೆಟ್‍ನಲ್ಲಿ ಹೆಚ್ಚುತ್ತಿರುವ ಬೆಲೆಗಳ ವಿರುದ್ಧ ಪ್ರತಿಭಟನೆಗಿಳಿದು, ನಂತರ ಲೂಟಿ ಮಾಡುತ್ತಾರೆ. ಈ ವಿಷಯ ತಮ್ಮ ಗಂಡಂದಿರಿಗೆ ಹಾಗೂ ಪೊಲೀಸರಿಗೆ ತಿಳಿಯದಂತೆ ನಿಭಾಯಿಸಲು ಹೋಗಿ ಹೇಗೆ ವಿಪತ್ತಿಗೆ ಸಿಲುಕುತ್ತಾರೆ ಎಂಬು ದನ್ನು `ಕೊಡೋದಿಲ್ಲ? ಬಿಡೋದಿಲ್ಲ?’ ಪ್ರಹಸನ ಕಟ್ಟಿಕೊಡುತ್ತದೆ. ಕಾರ್ಯಕ್ರಮ ದಲ್ಲಿ ರಂಗನಟಿ ರಾಮೇಶ್ವರಿ ವರ್ಮಾ, ಅನುವಾದಕ ಕೃಷ್ಣ ಹೆಬ್ಬಾಲೆ, ರಂಗಾ ಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಭಾಗವಹಿಸಲಿದ್ದಾರೆ.

Translate »