ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ಪ್ರಕರಣ
News

ಬೆಂಗಳೂರಿನಲ್ಲಿ ಮತ್ತೊಂದು ಆಸಿಡ್ ಪ್ರಕರಣ

June 11, 2022

ಬೆಂಗಳೂರು, ಜೂ.10- ಬೆಂಗಳೂರಿ ನಲ್ಲಿ ಮತ್ತೊಂದು ಆಸಿಡ್ ದಾಳಿ ಪ್ರಕರಣ ವರದಿಯಾಗಿದ್ದು, ಮದುವೆಯಾಗಲು ನಿರಾ ಕರಿಸಿದ ಮಹಿಳೆ ಮೇಲೆ ವ್ಯಕ್ತಿ ಆ್ಯಸಿಡ್ ಎರಚಿದ್ದಾನೆ.

ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‍ನ ಸಾರಕ್ಕಿ ಬಳಿ ಈ ಘಟನೆ ನಡೆದಿದ್ದು, ಮಹಿಳೆ ಯೊಬ್ಬರ ಮೇಲೆ ಆಸಿಡ್ ಎರಚಿ ವ್ಯಕ್ತಿ ಪರಾರಿಯಾಗಿದ್ದಾನೆ. ಪರಿಚಯಸ್ಥನೇ ಕೃತ್ಯ ಎಸಗಿರುವ ಶಂಕೆ ಇದೆ. ಮೂಲಗಳ ಪ್ರಕಾರ ಮದುವೆಯಾಗುವಂತೆ ಒತ್ತಾಯಿ ಸುತ್ತಿದ್ದ ವ್ಯಕ್ತಿ ಆಕೆ ನಿರಾಕರಿಸಿದ್ದರಿಂದ ಆಕ್ರೋಶ ಗೊಂಡು ಸ್ಥಳದಲ್ಲೇ ಆಸಿಡ್ ಎರಚಿದ್ದಾನೆ ಎಂದು ತಿಳಿದುಬಂದಿದೆ. ಕುಮಾರಸ್ವಾಮಿ ಲೇಔಟ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದ್ದು, ಗಾಯಾಳು ಮಹಿಳೆಯನ್ನು ಆಸ್ಪತ್ರೆಗೆ ದಾಖ ಲಿಸಲಾಗಿದೆ. ‘ಮಹಿಳೆ ಜೊತೆ ವೈಮನಸ್ಸು ಹೊಂದಿದ್ದ ಅಹ್ಮದ್ ಎಂಬಾತ, ಆಸಿಡ್ ಎರಚಿರುವ ಮಾಹಿತಿ ಇದೆ. ಸದ್ಯ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರತ್ಯಕ್ಷದರ್ಶಿಗಳು ಹಾಗೂ ಮಹಿಳೆ ಹೇಳಿಕೆ ಪಡೆದು ಮುಂದಿನ ಕ್ರಮ ಜರುಗಿಸಲಾಗು ವುದು’ ಎಂದು ಪೆÇಲೀಸರು ತಿಳಿಸಿದ್ದಾರೆ.
ಇಲ್ಯಾಸ್ ನಗರದ ನಿವಾಸಿಯಾಗಿರುವ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅಲ್ಲಿಂದ ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ. ಘಟನೆ ನಡೆದ ಕೆಲವೇ ಗಂಟೆ ಗಳಲ್ಲಿ ಪೆÇಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಇಬ್ಬರೂ ವಿಚ್ಛೇದಿತರು: ಇನ್ನು ಆಸಿಡ್ ದಾಳಿಗೆ ತುತ್ತಾದ 32 ವರ್ಷದ ಮಹಿಳೆ ಮತ್ತು ದಾಳಿ ಮಾಡಿದ ವ್ಯಕ್ತಿ ಇಬ್ಬರೂ ವಿಚ್ಛೇದಿತರಾಗಿದ್ದು, ಮಹಿಳೆಗೆ ಮೂರು ಮಕ್ಕಳಿದ್ದರು. ಸಂತ್ರಸ್ಥೆ ಮತ್ತು ಆರೋಪಿ ಇಬ್ಬರು ಅಗರಬತ್ತಿ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ಒಂದೂವರೆ ವರ್ಷಗಳಿಂದ ಸಂಬಂಧ ಹೊಂದಿದ್ದರು ಎಂದು ಪೆÇಲೀಸರು ತಿಳಿಸಿದ್ದಾರೆ. ಆರೋಪಿಯು ಮದುವೆಯಾಗಿ ಮಕ್ಕಳನ್ನೂ ಹೊಂದಿದ್ದು, ಎರಡನೇ ಹೆಂಡತಿಯನ್ನು ಹೊಂದಲು ಬಯಸಿದ್ದ. ಹೀಗಾಗಿ ಮಹಿಳೆಯನ್ನು ಮದುವೆಯಾಗುವಂತೆ ಒತ್ತಾಯಿಸುತ್ತಿದ್ದ. ಆದರೆ, ಸಂತ್ರಸ್ತೆ ತನಗೆ ಮಕ್ಕಳಿದ್ದು, ವಿಚ್ಛೇದನ ಪಡೆದಿಲ್ಲ ಎಂದು ನಿರಾಕರಿಸಿದ್ದಾಳೆ. ಈ ವಿಚಾರವಾಗಿ ಅವರು ಹಲವು ಬಾರಿ ಜಗಳವಾಡಿದ್ದರು.

ಶುಕ್ರವಾರ ಬೆಳಿಗ್ಗೆ, ಅವರು ಕೆಲಸಕ್ಕೆ ಹೋಗುತ್ತಿರುವಾಗ ಒಬ್ಬರನ್ನೊಬ್ಬರು ಭೇಟಿಯಾಗಿದ್ದು, ಇದೇ ವೇಳೆ ಆರೋಪಿ ಮತ್ತೆ ಮದುವೆ ವಿಷಯವನ್ನು ಪ್ರಸ್ತಾಪಿಸಿದ್ದಾನೆ. ಆದರೆ ಮತ್ತೆ ಸಂತ್ರಸ್ತೆ ಅವನನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ಹೇಳಿದ್ದು, ಇದರಿಂದ ಕುಪಿತನಾದ ಆರೋಪಿ ಕೂಡಲೇ ಬಾಟಲಿ ತೆಗೆದು ಟಾಯ್ಲೆಟ್ ಕ್ಲೀನಿಂಗ್ ಲಿಕ್ವಿಡ್‍ನಲ್ಲಿ ಆಸಿಡ್ ಬೆರೆಸಿ ಆಕೆಯ ಮುಖಕ್ಕೆ ಎರಚಿ ಪರಾರಿಯಾಗಿದ್ದಾನೆ. ದಾಳಿಯಿಂದಾಗಿ ಮಹಿಳೆಯ ಬಲಗಣ್ಣಿಗೆ ಹಾನಿಯಾಗಿದ್ದು, ದೃಷ್ಟಿ ಮಂದವಾಗಿದೆ. ಕೂಡಲೇ ಅಕ್ಕಪಕ್ಕದಲ್ಲಿದ್ದವರು ಆಕೆಯನ್ನು ನೇತ್ರ ಚಿಕಿತ್ಸಾಲಯಕ್ಕೆ ಕರೆದೊಯ್ದರು, ಅಲ್ಲಿ ಕಣ್ಣಿನಲ್ಲಿರುವ ಆಸಿಡ್ ಅನ್ನು ಸ್ವಚ್ಛಗೊಳಿಸಿ ದೃಷ್ಟಿ ಪುನಃಸ್ಥಾಪಿಸಲಾಯಿತು. ಬಳಿಕ ಆಕೆಯನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಯಿತು. ಘಟನೆಯಲ್ಲಿ ಮಹಿಳೆಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಶೀಘ್ರದಲ್ಲೇ ಡಿಸ್ಚಾರ್ಜ್ ಆಗುವ ನಿರೀಕ್ಷೆಯಿದೆ ಎಂದು ಪೆÇಲೀಸರು ತಿಳಿಸಿದ್ದಾರೆ. ಘಟನೆ ನಡೆದ ಕೂಡಲೇ ಕಾರ್ಯಾಚರಣೆಗಿಳಿದ ಪೆÇಲೀಸರು ಆರೋಪಿಯನ್ನು ಪಶ್ಚಿಮ ಬೆಂಗಳೂರಿ ನಲ್ಲಿರುವ ಆತನ ಮನೆಯಲ್ಲಿ ಬಂಧಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.

Translate »