ಶ್ರೀನಿವಾಸಗೌಡಗೆ ಮಾನ-ಮರ್ಯಾದೆ  ಇದ್ರೆ ರಾಜೀನಾಮೆ ಕೊಡ್ಲಿ
News

ಶ್ರೀನಿವಾಸಗೌಡಗೆ ಮಾನ-ಮರ್ಯಾದೆ ಇದ್ರೆ ರಾಜೀನಾಮೆ ಕೊಡ್ಲಿ

June 11, 2022

ಬೆಂಗಳೂರು, ಜೂ.10- ಶ್ರೀನಿವಾಸಗೌಡಗೆ ಮಾನ ಮರ್ಯಾದೆ ಇದ್ದರೆ ತಕ್ಷಣವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ತೊಲಗಲಿ ಎಂದು ರಾಜ್ಯಸಭೆ ಚುನಾ ವಣೆಯಲ್ಲಿ ಅಡ್ಡ ಮತದಾನ ಮಾಡಿದ ಜೆಡಿಎಸ್‍ನ ಕೋಲಾರ ಶಾಸಕ ಶ್ರೀನಿವಾಸಗೌಡ ವಿರುದ್ಧ ಜೆಡಿಎಸ್ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕೆಂಡಾಮಂಡಲರಾಗಿದ್ದಾರೆ.

ಕೋಲಾರ ಶಾಸಕ ಶ್ರೀನಿವಾಸಗೌಡ ಅವರು ಅಡ್ಡ ಮತದಾನ ಮಾಡಿದ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಹೆಚ್.ಡಿ. ಕುಮಾರಸ್ವಾಮಿ, ಮಾನ ಮರ್ಯಾದೆ ಇದ್ದರೆ ಪಕ್ಷ ಬಿಟ್ಟು ಹೋಗಲಿ, ಇಂಥವರಿಗೆ ಪಕ್ಷದಿಂದ ಶಿಸ್ತು ಕ್ರಮದ ಅಗತ್ಯವಿಲ್ಲ, ಅದರಿಂದ ಪ್ರಯೋಜನವೂ ಇಲ್ಲ. ಜೆಡಿಎಸ್‍ನಲ್ಲಿದ್ದುಕೊಂಡು ಶಾಸಕರಾಗಿ ಇಂದು ವಿರುದ್ಧವಾಗಿ ನಡೆದುಕೊಂಡು ಜನರ ಮುಂದೆ ಹೋಗುತ್ತಾರೆ. ಪ್ರಜಾಪ್ರಭುತ್ವದಲ್ಲಿ ಜನ ಉಳಿಸುತ್ತಾರಾ, ಕಾಂಗ್ರೆಸ್‍ನವರಿಗೆ ಶ್ರೀನಿವಾಸಗೌಡರ ಮತದಿಂದ ಏನು ಸಿಕ್ಕಿತು, ನೀವು ಬಿಜೆಪಿ ಗೆಲ್ಲಿಸಿಕೊಂಡು ಜನರ ಮುಂದೆ ಹೇಗೆ ಹೋಗ್ತೀರಿ ಎಂದು ಕಿಡಿಕಾರಿದರು. ಇವತ್ತು ಬಿಜೆಪಿ ಗೆದ್ದರೆ ಅದು ಕಾಂಗ್ರೆಸ್‍ನಿಂದ. ಕಾಂಗ್ರೆಸ್‍ನವರು ಇನ್ನೂ ಮತ ಹಾಕುವು ದಕ್ಕೆ ಬಂದಿಲ್ಲ. ಬಿಜೆಪಿಯವರಿಗೆ ಮತ ಹಾಕಲು ಕಾದು ಕುಳಿತಿದ್ದಾರೆ ಎಂದರು.

ಕಾಂಗ್ರೆಸ್‍ನವರಿಗೆ ನಾಚಿಕೆ, ಮಾನ-ಮರ್ಯಾದೆ ಇದೆಯಾ?: ನಿಮಗೆ ನಾಚಿಕೆ, ಮಾನ, ಮರ್ಯಾದೆ ಇದೆಯಾ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು. ಶ್ರೀನಿವಾಸ ಗೌಡ ಮತ ಹಾಕಿಸಿಕೊಂಡು ಕಾಂಗ್ರೆಸ್ಸಿಗರೇ ಗೆದ್ಬಿಟ್ರಾ, ಕೀಳುಮಟ್ಟದ ರಾಜಕಾರಣ ಮಾಡಿದವರನ್ನು ಶಾಸಕರು ಅಂತಾರಾ?
ಸಂಜೆ ಆ ಇಬ್ಬರು ಶಾಸಕರ ಬಣ್ಣ ಬಯಲಾಗುತ್ತೆ, ಖಾಲಿ ಬ್ಯಾಲೆಟ್ ಪೇಪರ್ ಮತಪೆಟ್ಟಿಗೆಗೆ ಹಾಕಿ ಬರ್ತಾರೆ. ಹೊರಗೆ ಬಂದು ನಾನು ಜೆಡಿಎಸ್‍ಗೆ ಮತ ಹಾಕಿದ್ದೀನಿ ಅಂತಾರೆ, ಅವರನ್ನು ಮಂತ್ರಿ ಮಾಡಿದ್ದೇ ದೊಡ್ಡ ಅನ್ಯಾಯ ಎಂದು ಗುಬ್ಬಿ ಶ್ರೀನಿವಾಸ್ ಮೇಲೆ ಹೆಚ್‍ಡಿಕೆ ವಾಗ್ದಾಳಿ ನಡೆಸಿದ್ದಾರೆ. ಈ ಇಬ್ಬರು ಶಾಸಕರಿಗೆ ಜನರೇ ಬುದ್ಧಿ ಕಲಿಸ್ತಾರೆ, ಆಗ 8 ಜನರ ಕ್ರಾಸ್ ವೋಟ್ ಮಾಡಿಸಿ ಗೆಲ್ಲಿಸಿಕೊಂಡ್ರಲ್ಲಾ, ಇವತ್ತು ರಾಮಮೂರ್ತಿ ನಿಮ್ಮ ಜೊತೆ ಇದ್ದಾರಾ ಇವತ್ತು ಬಿಜೆಪಿ ಗೆದ್ದರೆ ಕಾಂಗ್ರೆಸ್‍ನಿಂದಲೇ, ನಮ್ಮನ್ನು ಬಿಜೆಪಿ ಬಿ-ಟೀಮ್ ಎಂದ ನಿಮ್ಮ ಬಣ್ಣ ಬಯಲಾಗಿದೆ. ಶ್ರೀನಿವಾಸ್ ಗೌಡಗೆ ಮಾನ ಮರ್ಯಾದೆ ಇದ್ರೆ ರಿಸೈನ್ ಮಾಡ್ಲಿ, ಶಾಸಕರ ಹೈಜಾಕ್ ಮಾಡೋ ಸಿದ್ದು ನಿಮಗೆ ನೈತಿಕತೆ ಇದೆಯಾ ಎಂದು ಸಿದ್ದರಾಮಯ್ಯ ವಿರುದ್ಧ ಕೂಡ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದರು.

Translate »