ಜೆಡಿಎಸ್-ಕಾಂಗ್ರೆಸ್ ಜಗಳದಲ್ಲಿ ಬಿಜೆಪಿಗೆ ಮಹಾಲಾಭ… ಬಿಜೆಪಿ ತ್ರಿವಿಕ್ರಮ, ಕೈಗೆ ಒಂದು, ಜೆಡಿಎಸ್ ಶೂನ್ಯ
News

ಜೆಡಿಎಸ್-ಕಾಂಗ್ರೆಸ್ ಜಗಳದಲ್ಲಿ ಬಿಜೆಪಿಗೆ ಮಹಾಲಾಭ… ಬಿಜೆಪಿ ತ್ರಿವಿಕ್ರಮ, ಕೈಗೆ ಒಂದು, ಜೆಡಿಎಸ್ ಶೂನ್ಯ

June 11, 2022

ಬೆಂಗಳೂರು, ಜೂ.10(ಕೆಎಂಶಿ)- ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಬಿಜೆಪಿಯ ನಿರ್ಮಲಾ ಸೀತಾರಾಮನ್, ಜಗ್ಗೇಶ್, ಲೆಹರ್‍ಸಿಂಗ್ ಸಿರೋಯಾ ಮತ್ತು ಕಾಂಗ್ರೆಸ್‍ನ ಜೈರಾಮ್ ರಮೇಶ್ ಗೆಲುವು ಸಾಧಿಸಿ ದ್ದಾರೆ. ಇಂದು ರಾತ್ರಿ ಅಧಿಕೃತವಾಗಿ ಫಲಿತಾಂಶ ಘೋಷಿಸಿದ ಚುನಾವಣಾಧಿ ಕಾರಿ ಎಂ.ಕೆ. ವಿಶಾಲಾಕ್ಷಿ ಅವರು ವಿಜೇತ ರಿಗೆ ಪ್ರಮಾಣಪತ್ರ ವಿತರಿಸಿದರು.

ಕಾಂಗ್ರೆಸ್-ಜೆಡಿಎಸ್ ಒಣ ಪ್ರತಿಷ್ಠೆ ಯಿಂದ ರಾಜ್ಯಸಭೆಯಲ್ಲಿ ತಮಗೆ ದಕ್ಕಬಹು ದಾಗಿದ್ದ ಒಂದು ಸ್ಥಾನವನ್ನು ನಿರಾಯಾ ಸವಾಗಿ ಬಿಜೆಪಿಗೆ ಬಿಟ್ಟುಕೊಟ್ಟಿವೆ.ಜೆಡಿಎಸ್ ಅಭ್ಯರ್ಥಿ ರಾಜ್ಯಸಭೆ ಪ್ರವೇಶಿಸ ಬಾರದೆಂಬ ನಿಲುವು ತೆಗೆದುಕೊಂಡ ವಿಧಾನ ಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ, ತಮ್ಮ ಎರಡನೇ ಅಭ್ಯರ್ಥಿ ಸೋತರೂ ಸರಿ, ಕುಮಾರಸ್ವಾಮಿ ಅಭ್ಯರ್ಥಿ ಸೋತರು ಎಂದು ನಗೆಬೀರಿದ್ದಾರೆ. ವಿಧಾನಸಭೆ ಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಇಂದು ನಡೆದ ದ್ವೈವಾರ್ಷಿಕ ಚುನಾವಣೆಯಲ್ಲಿ ಬಿಜೆಪಿಯ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (46), ಚಿತ್ರನಟ ಜಗ್ಗೇಶ್ (44) ಹಾಗೂ ಉದ್ಯಮಿ ಲೆಹರ್‍ಸಿಂಗ್ ಸಿರೋಯಾ (33) ಪ್ರಥಮ ಪ್ರಾಶಸ್ತ್ಯದ ಮತ ಪಡೆದರು. ಇವರಲ್ಲಿ ನಿರ್ಮಲಾ ಸೀತಾರಾಮನ್ ಮತ್ತು ಜಗ್ಗೇಶ್ ನಿರಾಯಾಸವಾಗಿ ಗೆಲುವು ಸಾಧಿಸಿದ್ದು, ಲೆಹರ್‍ಸಿಂಗ್ ಎರಡನೇ ಪ್ರಾಶಸ್ತ್ಯದ ಮತಗಳಿಂದ ವಿಜಯದ ನಗೆ ಬೀರಿದರು. ಕಾಂಗ್ರೆಸ್‍ನ ಜೈರಾಮ್ ರಮೇಶ್ ನಿರೀಕ್ಷೆಯಂತೆ 46 ಮತ ಪಡೆದು ರಾಜ್ಯದಿಂದ ಎರಡನೇ ಬಾರಿಗೆ ರಾಜ್ಯಸಭೆ ಪ್ರವೇಶಿಸಿದ್ದರೆ, ನಾಲ್ಕನೇ ಸ್ಥಾನಕ್ಕೆ ಪೈಪೆÇೀಟಿ ನಡೆಸಿದ ಜೆಡಿಎಸ್‍ನ ಕುಪೇಂದ್ರ ರೆಡ್ಡಿ 30 ಮತ ಪಡೆದು ಸೋಲನುಭವಿಸಿದರೆ, ಕಾಂಗ್ರೆಸ್‍ನ ಮನ್ಸೂರ್ ಅಲಿ ಖಾನ್ ನಾಲ್ಕನೇ ಸ್ಥಾನಕ್ಕೆ ಸ್ಪರ್ಧಿಸಿ ಕೇವಲ 26 ಮತಗಳನ್ನು ಪಡೆದು ಜೆಡಿಎಸ್‍ನ ಗೆಲುವಿಗೆ ಅಡ್ಡಲಾಗಿದ್ದಲ್ಲದೆ, ಬಿಜೆಪಿಯ ಮೂರನೇ ಅಭ್ಯರ್ಥಿ ಆಯ್ಕೆಗೊಳ್ಳಲು ಸಹಕರಿಸಿದರು.

ವಿಧಾನಸಭೆಯಲ್ಲಿ ಜೆಡಿಎಸ್ 32 ಸದಸ್ಯ ಬಲ ಹೊಂದಿತ್ತು. ಆ ಪಕ್ಷದ ಕೋಲಾರ ಕ್ಷೇತ್ರದ ಶಾಸಕ ಶ್ರೀನಿವಾಸಗೌಡ ವ್ಹಿಪ್ ಉಲ್ಲಂಘಿಸಿ ಕಾಂಗ್ರೆಸ್ ಅಭ್ಯರ್ಥಿಗೆ ಮತ ನೀಡಿದರು. ಆದರೆ ಜೆಡಿಎಸ್‍ನ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ. ದೇವೇಗೌಡ, ಅರಸೀಕೆರೆ ಕ್ಷೇತ್ರದ ಶಾಸಕ ಶಿವಲಿಂಗೇಗೌಡ ಹಾಗೂ ಗುಬ್ಬಿ ಕ್ಷೇತ್ರದ ಶಾಸಕ ಶ್ರೀನಿವಾಸ್ ತಮ್ಮ ನಾಯಕರ ಬಗ್ಗೆ ಅಸಮಾಧಾನವಿದ್ದರೂ ಪಕ್ಷದ ಅಭ್ಯರ್ಥಿಗೆ ಮತ ಚಲಾಯಿಸಿದರು. ಜೆಡಿಎಸ್ ಶಾಸಕರು ಚಲಾಯಿಸಿರುವ ಮತಗಳ ಪೈಕಿ 1 ಮತ ಕುಲಗೆಟ್ಟದ್ದಾಗಿದ್ದು, ಇದನ್ನು ಗುಬ್ಬಿ ಶ್ರೀನಿವಾಸ್ ಅವರೇ ಚಲಾಯಿಸಿದ್ದಾರೆ ಎಂಬ ಅನುಮಾನ ವ್ಯಕ್ತವಾಗಿದೆ.

ವಿಧಾನಸಭೆಯಲ್ಲಿ 120 ಸದಸ್ಯ ಬಲ ಹೊಂದಿರುವ ಬಿಜೆಪಿಗೆ ಮೂವರು ಪಕ್ಷೇತರರು ಬೆಂಬಲ ನೀಡಿದ್ದರಿಂದ ಮೂರನೇ ಅಭ್ಯರ್ಥಿ ಗೆಲುವಿಗೆ ಸಹಕಾರಿಯಾಯಿತು. ಬಿಎಸ್‍ಪಿ ಎನ್. ಮಹೇಶ್, ಪಕ್ಷೇತರ ಸದಸ್ಯ ನಾಗೇಶ್ ಬಿಜೆಪಿ ಕೈ ಹಿಡಿದರೆ, ಶರತ್ ಬಚ್ಚೇಗೌಡ ಕಾಂಗ್ರೆಸ್ ಅಭ್ಯರ್ಥಿಗೆ ಮತಚಲಾಯಿಸಿದರು. ಇತ್ತೀಚೆಗಷ್ಟೇ ಶರತ್ ಬಚ್ಚೇಗೌಡ ಬಿಜೆಪಿಯ ಸಹ ಸದಸ್ಯತ್ವ ಪಡೆದಿದ್ದರು. ತಮ್ಮ ಮತವನ್ನು ಬಿಜೆಪಿಯ ಲೆಹರ್‍ಸಿಂಗ್‍ಗೆ ಚಲಾವಣೆ ಮಾಡಿದ್ದಾರೆ. ಚುನಾವಣೆಯಲ್ಲಿ ಜೆಡಿಎಸ್ ಗೆಲ್ಲದಂತೆ ನೋಡಿಕೊಳ್ಳಬೇಕು. ಆ ಮೂಲಕ ಕಾಂಗ್ರೆಸ್ ಪಕ್ಷವೇ ಬಿಜೆಪಿಗೆ ಪರ್ಯಾಯ ಶಕ್ತಿ ಎಂದು ತೋರಿಸಲು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೂಡಿದ ತಂತ್ರ ಬಿಜೆಪಿಯ ಮೂರನೇ ಅಭ್ಯರ್ಥಿ ನಿರಾಯಾಸವಾಗಿ ಗೆಲ್ಲಲು ದಾರಿ ಮಾಡಿಕೊಟ್ಟಿತು.
ಅಡ್ಡ ಮತದಾನ ಮಾಡಿದ ಜೆಡಿಎಸ್‍ನ ಶ್ರೀನಿವಾಸಗೌಡ ಹಿಂದೆ ಕಾಂಗ್ರೆಸ್‍ನಲ್ಲಿದ್ದಾಗ ಸಚಿವನಾಗಿದ್ದೆ. ಈಗಲೂ ಆ ಪಕ್ಷವನ್ನು ಪ್ರೀತಿಸುತ್ತೇನೆ. ಮತ್ತು ಇಂದು ಮತದಾನ ಮಾಡುವಾಗ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೇ ಮತ ಕೊಟ್ಟಿದ್ದೇನೆ ಎಂದು ಬಹಿರಂಗವಾಗಿ ಹೇಳಿದರು. ಇದರಿಂದ ಕುಮಾರಸ್ವಾಮಿ ಸಿಟ್ಟು ಮಾಡಿಕೊಳ್ಳುವುದಾದರೆ ಮಾಡಿಕೊಳ್ಳಲಿ, ರಾಜಕೀಯದಲ್ಲಿ ಅದು ಕಾಮನ್ ಎಂದರು. ಈ ಮಧ್ಯೆ ಪಕ್ಷದ ಅಭ್ಯರ್ಥಿಯ ವಿರುದ್ಧವಾಗಿ ಕಾಂಗ್ರೆಸ್‍ಗೆ ಮತ ನೀಡಿದ ಶಾಸಕ ಶ್ರೀನಿವಾಸ ಗೌಡ ಅವರ ಬಗ್ಗೆ ಕೆಂಡಾಮಂಡಲರಾದ ಕುಮಾರಸ್ವಾಮಿ ನಾಚಿಕೆ, ಮಾನ-ಮರ್ಯಾದೆ ಇದ್ದರೆ ಜೆಡಿಎಸ್ ಕಾರ್ಯಕರ್ತರ ಬೆಂಬಲದಿಂದ ಗೆದ್ದ ಶ್ರೀನಿವಾಸಗೌಡ, ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್ ಕಡೆ ಹೋಗಬೇಕಿತ್ತು ಎಂದರು. ನಮ್ಮ ಪಕ್ಷದ ಒಬ್ಬರ ಮತವನ್ನು ಹಾಕಿಸಿಕೊಂಡು ಕಾಂಗ್ರೆಸ್ ಪಕ್ಷಕ್ಕಾದ ಲಾಭವೇನು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕೆಂಬ ಸಿದ್ದರಾಮಯ್ಯ ಅವರ ಉದ್ದೇಶ ಇಡೀ ನಾಡಿಗೆ ಅರಿವಾಗಿದೆ ಎಂದರು.

Translate »