ದೇಶದ ನಾನಾ ಕಡೆ ಹಿಂಸಾಚಾರ ರಾಜ್ಯದಲ್ಲಿ ಭಾರೀ ಮುನ್ನೆಚ್ಚರಿಕಾಕ್ರಮ
ಮೈಸೂರು

ದೇಶದ ನಾನಾ ಕಡೆ ಹಿಂಸಾಚಾರ ರಾಜ್ಯದಲ್ಲಿ ಭಾರೀ ಮುನ್ನೆಚ್ಚರಿಕಾಕ್ರಮ

June 12, 2022

ಸೂಕ್ಷö್ಮ ಪ್ರದೇಶಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ
ಕೋಮು ಸೌಹಾರ್ದತಾ ಸಭೆ ನಡೆಸಲು ಸಲಹೆ
ಬೆಂಗಳೂರು, ಜೂ.೧೧(ಕೆಎಂಶಿ)- ಪ್ರವಾದಿ ಮೊಹಮ್ಮದ್ ಪೈಗಂಬರ್Àಕುರಿತು ಬಿಜೆಪಿ ಮುಖಂಡರ ವಿವಾದಾತ್ಮಕ ಹೇಳಿಕೆ ಹಿನ್ನೆಲೆಯಲ್ಲಿರಾಜ್ಯದಲ್ಲೂ ಮುನ್ನೆಚ್ಚರಿಕಾಕ್ರಮ ಕೈಗೊಳ್ಳಲು ಪೊಲೀಸರು ಮುಂದಾಗಿದ್ದಾರೆ.

ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಅವರ ಸೂಚನೆಯಂತೆ ಹಿರಿಯ ಅಧಿಕಾರಿಗಳು ಸಭೆ ನಡೆಸಿ, ರಾಜ್ಯದ ಸೂಕ್ಷ÷್ಮ ಪ್ರದೇಶಗಳಲ್ಲಿ ಕಟ್ಟೆಚ್ಚರ ಮತ್ತು ಬಿಗಿ ಬಂದೋಬಸ್ತ್ ಮಾಡಲುತೀರ್ಮಾನಕೈಗೊಂಡಿದ್ದಾರೆ.

ನಗರ ಪೊಲೀಸ್‌ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿ ಷ್ಠರುಆಯಾ ಪ್ರದೇಶದಲ್ಲಿ ಕೋಮು ಸೌಹಾರ್ದತೆ ಸಭೆ ನಡೆಸ ಬೇಕು ಹಾಗೂ ಮುನ್ನೆಚ್ಚರಿಕೆಯಾಗಿ ಗೂಂಡಾಗಳನ್ನು ವಶಕ್ಕೆ ತೆಗೆದುಕೊಳ್ಳು ವಂತೆ ಸೂಚಿಸಿದ್ದಾರೆ.

ಕೋಮು ಗಲಭೆ ನಡೆಯುವ ಪ್ರದೇಶಗಳಲ್ಲಿ ದಿನವಿಡೀ ಬಂದೋ ಬಸ್ತ್ ವಹಿಸಬೇಕು ಹಾಗೂ ಮುನ್ನೆಚ್ಚರಿಕೆಯಾಗಿ ಕಿಡಿಗೇಡಿಗಳ ಮೇಲೆ ಕಣ ್ಣಡುವಂತೆ ಸ್ಥಳೀಯ ಠಾಣೆಗಳಿಗೆ ಆದೇಶ ನೀಡಿರುವುದಲ್ಲದೆ, ಗುಪ್ತಚರ ವಿಭಾಗ ಪರಿಸ್ಥಿತಿಯ ಬಗ್ಗೆ ಜಿಲ್ಲಾಡ ಳಿತಕ್ಕೆ ಆಗಿಂದಾಗ್ಗೆ ಮಾಹಿತಿ ನೀಡು ವಂತೆ ಹೇಳಲಾಗಿದೆ. ಪೈಗಂಬರ್‌ಕುರಿತು ವಿವಾದಾತ್ಮಕ ಹೇಳಿಕೆ ನೀಡಿ, ಈಗಾ ಗಲೇ ಬಿಜೆಪಿಯಲ್ಲಿಅಮಾನತುಗೊಂಡಿರುವ ನೂಪುರ್ ಶರ್ಮಾ ಹಾಗೂ ನವೀನ್‌ಜಿಂದಾಲ್‌ಅವರನ್ನು ಬಂಧಿಸುವAತೆ ಒತ್ತಾಯಿಸಿ ಹೊಸ ದೆಹಲಿ, ಉತ್ತರ ಪ್ರದೇಶ, ಕೊಲ್ಕತ್ತಾ, ಪಂಜಾಬ್, ಜಾರ್ಖಂಡ್, ತೆಲಂಗಾಣ ಸೇರಿದಂತೆದೇಶದ ಹಲವೆಡೆ ಮುಸ್ಲಿಮರು ಪ್ರತಿಭಟನೆ, ಮತ್ತೆ ಕೆಲವೆಡೆಇಂತಹ ಪ್ರತಿಭಟನೆ ಹಿಂಸಾಚಾರಕ್ಕೆತಿರುಗಿ, ಕಲ್ಲುತೂರಾಟ ನಡೆದಿದೆ.

ಇದರ ಬೆನ್ನಲ್ಲೇಎಚ್ಚೆತ್ತರಾಜ್ಯ ಪೊಲೀಸರು ಮುನ್ನೆಚ್ಚರಿಕಾಕ್ರಮವಾಗಿಕಠಿಣ ಕ್ರಮಗಳನ್ನು ತೆಗೆದುಕೊಂಡಿದ್ದಾರೆ. ಈ ಮಧ್ಯೆ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ, ಅವಹೇಳನಕಾರಿ ಹೇಳಿಕೆ ಖಂಡಿಸಿ, ದೆಹಲಿ ಮತ್ತುಉತ್ತರಪ್ರದೇಶದಲ್ಲಿಘರ್ಷಣೆಯಾಗಿರುವ ಹಿನ್ನೆಲೆಯಲ್ಲಿರಾಜ್ಯದಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲು ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆಎಂದರು.

ಇದೇ ವೇಳೆ ಆಸಿಡ್ ದಾಳಿ ಪ್ರಕರಣಕುರಿತು ಮಾತನಾಡಿ, ರಾಜ್ಯದಲ್ಲಿ ಆಸಿಡ್ ದಾಳಿಗಳು ಹೆಚ್ಚಾಗುತ್ತಿದೆ. ಅದಕ್ಕೆ ಸಂಬAಧಿಸಿದAತೆ ಕಠಿಣ ಕಾನೂನು ರೂಪಿಸಲು ಕಾನೂನು ಸಚಿವರಿಗೆ ತಿಳಿಸಿದ್ದೇವೆ. ಬರುವ ದಿನಗಳಲ್ಲಿ ಇಂತಹ ಘಟನೆಗಳು ನಡೆಯದ ಹಾಗೇ ನೋಡಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

 

ಮೈಸೂರಲ್ಲೂಕಟ್ಟೆಚ್ಚರ ಡಾ.ZಂÀ zU್ರÀ ÄÀ ¥್ತÀ
ಮೈಸೂರು, ಜೂ. ೧೧(ಆರ್‌ಕೆ)- ಪ್ರವಾದಿ ಮೊಹಮ್ಮದ್ ಪೈಗಂಬರ್ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ನೂಪುರ್ ಶರ್ಮಾ ಮತ್ತು ನವೀನ್‌ಜಿಂದಾಲ್‌ರನ್ನು ಬಂಧಿಸುವAತೆಆಗ್ರ ಹಿಸಿ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಹಿಂಸಾಚಾರ ಭುಗಿಲೆದ್ದಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಗಾಗಿ ಮೈಸೂ ರಿನಲ್ಲಿ ಶುಕ್ರವಾರ ಸಂಜೆಯಿAದಲೇ ಭಾರೀ ಬಿಗಿ ಬಂದೋ ಬಸ್ತ್ ಮಾಡಲಾಗಿದೆ. ವಿವಾದಾತ್ಮಕ ಹೇಳಿಕೆ ಖಂಡಿಸಿ ಎಸ್‌ಡಿಪಿಐಕಾರ್ಯಕರ್ತರು ಶುಕ್ರವಾರ ಅಶೋಕ ರಸ್ತೆಯ ಮಿಲಾದ್‌ಬಾಗ್ ಪಾರ್ಕ್ ಬಳಿ ಭಾರೀ ಪ್ರತಿಭಟನೆ ನಡೆಸಿದ್ದರು. ಅಂದು ಸಂಜೆಯಿAದಲೇ ಸೂಕ್ಷö್ಮ ಪ್ರದೇಶಗಳು ಸೇರಿದಂತೆ ಮೈಸೂರು ನಗರದಾದ್ಯಂತ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಕಟ್ಟೆಚ್ಚರ ವಹಿಸಲಾಗಿದೆ.

ಈ ಕುರಿತು ‘ಮೈಸೂರು ಮಿತ್ರ’ನಿಗೆ ಪ್ರತಿಕ್ರಿಯಿಸಿರುವ ನಗರ ಪೊಲೀಸ್‌ಆಯುಕ್ತಡಾ.ಚಂದ್ರಗುಪ್ತ, ಮುಂಜಾಗ್ರತಾಕ್ರಮವಾಗಿಎಲ್ಲೆಡೆ ಹೆಚ್ಚುವರಿ ಪೊಲೀಸ್ ಸಿಬ್ಬಂದಿ ನಿಯೋಜಿಸಿ ಬಂದೋಬಸ್ತ್ ಮಾಡಿದ್ದೇವೆ. ಪ್ರತಿಭಟನೆಗೆ ಪ್ರಚೋದನೆ ನೀಡದಂತೆ ಸಂಘಟನೆಗಳ ಪ್ರಮುಖರಿಗೆ ಸಲಹೆ ನೀಡುತ್ತಿದ್ದೇವೆಎಂದರು. ಧಾರ್ಮಿಕ ಸ್ಥಳಗಳು, ಸೂಕ್ಷö್ಮ ಪ್ರದೇಶಗಳಲ್ಲಿ ಗಸ್ತು ತೀವ್ರಗೊಳಿಸಿ ನಿಗಾ ವಹಿಸಲಾಗಿದೆ. ಧಾರ್ಮಿಕ ಮುಖಂಡರೊAದಿಗೆಆಯಾಠಾಣಾ ಇನ್ಸ್ಪೆಕ್ಟರ್‌ಗಳು ಸಭೆ ನಡೆಸಿ
ಶಾಂತಿ-ಸೌಹಾರ್ದತೆಕಾಪಾಡುವAತೆಕರೆ ನೀಡಿದ್ದಾರೆಎಂದು ತಿಳಿಸಿದರು.

ಇಂದು ಬೆಳಗ್ಗೆ ಗಸ್ತು ಕಾರ್ಯಾಚರಣೆ ತೀವ್ರಗೊಳಿಸಿರುವುದಲ್ಲದೆ, ದೇವಸ್ಥಾನ, ಚರ್ಚ್ ಹಾಗೂ ಮಸೀದಿಗಳ ಬಳಿ ಹೆಚ್ಚಿನರಕ್ಷಣಾ ಸಿಬ್ಬಂದಿ ನಿಯೋಜಿಸಿ ಕಟ್ಟೆಚ್ಚರ ವಹಿಸಲಾಗಿದೆ. ಸಾರ್ವಜನಿಕ ಸ್ಥಳ, ವಾಣ ಜ್ಯ ಕೇಂದ್ರಗಳು, ಲಷ್ಕರ್, ಮಂಡಿ, ಎನ್‌ಆರ್ ಮೊಹಲ್ಲಾ, ಉದಯಗಿರಿ, ರಾಜೀವ್‌ನಗರದಂತಹ ಸೂಕ್ಷö್ಮ ಪ್ರದೇಶಗಳಲ್ಲಿ ನಿಗಾ ವಹಿಸಿ ಅಹಿತಕರ ಘಟನೆಗಳು ನಡೆಯದಂತೆಕಟ್ಟೆಚ್ಚರ ವಹಿಸಲಾಗಿದೆಎಂದು ಕಾನೂನು-ಸುವ್ಯವಸ್ಥೆ ಡಿಸಿಪಿ ಪ್ರದೀಪ್‌ಗುಂಟಿ ತಿಳಿಸಿದ್ದಾರೆ. ಪ್ರತಿಭಟನೆ, ಪ್ರಚೋದನೆ, ಹಿಂಸಾಚಾರಗಳAತಹ ಘಟನೆಗಳಿಗೆ ಮುಂದಾಗಬಾರದೆAದು ವಿವಿಧ ಸಂಘಟನೆಗಳ ಕಾರ್ಯಕರ್ತರು, ಸಾರ್ವಜನಿಕರಿಗೆಜಾಗೃತಿ ಮೂಡಿಸಲಾಗುತ್ತಿದ್ದು, ಆಯಾ ಠಾಣಾಧಿಕಾರಿಗಳು ಆ ವ್ಯಾಪ್ತಿಯಲ್ಲಿ ಗಸ್ತು ಕರ್ತವ್ಯದಲ್ಲಿದ್ದು, ನಿಗಾ ವಹಿಸುತ್ತಿದ್ದಾರೆಎಂದುಡಾ.ಚAದ್ರಗುಪ್ತ ತಿಳಿಸಿದರು.

Translate »