ಮೈಸೂರು

ಕಡಕೊಳ ಬಳಿ ಚೆಸ್ಕಾಂನಿAದ ಮತ್ತೊಂದು ಚಾರ್ಜಿಂಗ್ ಕೇಂದ್ರ ಸ್ಥಾಪನೆ

May 5, 2022

ಮೈಸೂರಲ್ಲಿ ಸ್ಥಾಪನೆಯಾಗುತ್ತಿರುವ ಎರಡನೇ ಚಾರ್ಜಿಂಗ್ ಘಟಕವಿದು

ಮೇ ೭ರಂದು ಇಂಧನ ಸಚಿವ ಸುನೀಲ್‌ಕುಮಾರ್‌ರಿಂದ ಚಾಲನೆ

ಹಿನಕಲ್ ಬಳಿಯ ಸೆಸ್ಕ್ ಆವರಣದಲ್ಲಿ ಈಗಾಗಲೇ ಚಾರ್ಜಿಂಗ್ ಘಟಕ ಸ್ಥಾಪನೆ

 ಕುವೆಂಪುನಗರ, ಜ್ಯೋತಿನಗರ ಸೆಸ್ಕ್ ಕಚೇರಿ ಅಂಗಳದಲ್ಲೂ ಸ್ಥಾಪನೆಯಾಗಲಿದೆ ಶೀಘ್ರ ಚಾರ್ಜಿಂಗ್ ಕೇಂದ್ರ

ಎಂ.ಟಿಯೋಗೇಶ್ ಕುಮಾರ್
ಮೈಸೂರು, ಮೇ ೪- ಇಂಧನ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿರುವುದರಿಂದ ವಿದ್ಯುತ್ ಬ್ಯಾಟರಿ ಚಾಲಿತ ವಾಹನ ಬಳಕೆದಾರರ ಸಂಖ್ಯೆ ಹೆಚ್ಚಾಗುತ್ತಿದೆ. ಇಂತಹ ವಾಹನ ಮಾಲೀಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಬೇಡಿಕೆಗೆ ಅನುಗುಣವಾಗಿ ಚೆಸ್ಕಾಂ ಇವಿ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಮೈಸೂರು-ನಂಜನಗೂಡು ಮುಖ್ಯ ರಸ್ತೆ ಕಡಕೊಳದ ಕೆಇಬಿ ಇಎ ಚೆಸ್ಕಾಂನಿAದ ಆವರಣದಲ್ಲಿ ಸ್ಥಾಪಿಸುತ್ತಿದೆ. ಇದು ಎರಡನೇ ಚಾರ್ಜಿಂಗ್ ಕೇಂದ್ರವಾಗಿದೆ.

ಮೇ ೭ರಂದು ಬೆಳಗ್ಗೆ ೧೦ ಗಂಟೆಗೆ ಇಂಧನ ಸಚಿವ ವಿ.ಸುನೀಲ್ ಕುಮಾರ್ ಇದನ್ನು ಉದ್ಘಾಟಿಸಲಿದ್ದಾರೆ. ಕುವೆಂಪುನಗರ ಹಾಗೂ ಜ್ಯೋತಿನಗರದಲ್ಲಿನ ಚೆಸ್ಕಾಂ ಕಚೇರಿ ಆವರಣದಲ್ಲಿ ಮತ್ತೆರಡು ಚಾರ್ಜಿಂಗ್ ಕೇಂದ್ರ ಸ್ಥಾಪಿಸಲಾಗುತ್ತಿದ್ದು, ತಿಂಗಳೊಳಗೆ ಸಾರ್ವಜನಿಕರ ಸೇವೆಗೆ ಸಮರ್ಪಿಸಲಾಗುತ್ತದೆ. ಇದರಿಂದ ವಿದ್ಯುತ್ ಬ್ಯಾಟರಿ ಚಾಲಿತ ವಾಹನಗಳ ಬಳಕೆದಾರರಿಗೆ ತಮ್ಮ ವಾಹನಗಳ ಬ್ಯಾಟರಿ ಚಾರ್ಜ್ ಮಾಡಿಕೊಳ್ಳಲು ಅನುಕೂಲವಾಗಲಿದೆ.

ಇತ್ತೀಚಿನ ದಿನಗಳಲ್ಲಿ ಪರಿಸರ ಮಾಲಿನ್ಯ ತಡೆಗೆ ಜನರೇ ಸ್ವಯಂ ಮುಂದಾಗುತ್ತಿದ್ದಾರೆ. ಅಲ್ಲದೆ ದಿನೇ ದಿನೆ ಇಂಧನ ಬೆಲೆ ಹೆಚ್ಚಾಗುತ್ತಿರುವುದರಿಂದ ಕಂಗೆಟ್ಟಿ ರುವ ಜನರು ಈಗ `ಬ್ಯಾಟರಿ ಚಾಲಿತ ವಾಹನ’ಗಳತ್ತ ಮುಖ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮೈಸೂರು ವಿಭಾಗದಲ್ಲಿ ೧೫೫ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರ ವನ್ನು `ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ’ (ಸೆಸ್ಕ್) ಸ್ಥಾಪಿಸಲು ಸಿದ್ಧತೆ ಮಾಡಿಕೊಂಡಿದೆ.

ಅದರ ಮೊದಲ ಭಾಗವಾಗಿ ಕಳೆದ ವರ್ಷ ಮೈಸೂರು-ಹುಣಸೂರು ಮುಖ್ಯರಸ್ತೆಗೆ ಹೊಂದಿ ಕೊಂಡAತೆ ಹಿನಕಲ್ ಬಳಿಯಿರುವ `ಸೆಸ್ಕ್’ ಕಚೇರಿ ಆವರಣದಲ್ಲಿ ಮೊದಲ ಚಾರ್ಜಿಂಗ್ ಕೇಂದ್ರ ಸ್ಥಾಪಿಸ ಲಾಗಿತ್ತು. ಕೇವಲ ೪ ಚಕ್ರದ ವಾಹನಗಳಿಗೆ ಇಲ್ಲಿ ಚಾರ್ಜಿಂಗ್ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ ಕಡ ಕೊಳ ಬಳಿ ಸ್ಥಾಪಿಸಿ ರುವ ಚಾರ್ಜಿಂಗ್ ಕೇಂದ್ರದಲ್ಲಿ ದ್ವಿಚಕ್ರ, ತ್ರಿಚಕ್ರ ಹಾಗೂ ೪ ಚಕ್ರದ ವಾಹನಗಳನ್ನು ಚಾರ್ಜ್ ಮಾಡಲು ಅವಕಾಶ ಕಲ್ಪಿಸಲಾಗಿದೆ. ಇಂಧನ ಇಲಾಖೆ ವತಿಯಿಂದಲೇ ಈ ಘಟಕ ನಿರ್ಮಿಸ ಲಾಗಿದೆ. ಕರ್ನಾಟಕ ಎಲೆಕ್ಟಿçಸಿಟಿ ರೆಗ್ಯುಲೇಟರಿ ಕಮಿ ಷನ್ (ಕೆಇಆರ್‌ಸಿ) ವಿದ್ಯುತ್ ಚಾಲಿತ ವಾಹನಗಳ ಚಾರ್ಜಿಂಗ್‌ಗೆ ದರ ನಿಗದಿ ಮಾಡಲಿದೆ.

೨ ವಿಧದ ಚಾರ್ಜ್: ಈ ಚಾರ್ಜಿಂಗ್ ಕೇಂದ್ರದಲ್ಲಿ ಎಸಿ ಹಾಗೂ ಡಿಸಿ ವಿಧಾನದಲ್ಲಿ ಚಾರ್ಜಿಂಗ್ ಮಾಡ ಲಾಗುತ್ತದೆ. ಎಸಿ ವಿಭಾಗದಲ್ಲಿ ಚಾರ್ಜ್ ಮಾಡುವಾಗ ಹೆಚ್ಚು ಸಮಯ ಹಿಡಿಯಲಿದೆ. ಈಗ ತಯಾರಾಗು ತ್ತಿರುವ ವಾಹನಗಳಿಗೆ ಡಿಸಿ ವಿಧಾನದ ಚಾರ್ಜಿಂಗ್ ವ್ಯವಸ್ಥೆ ಅಳವಡಿಸಲಾಗುತ್ತಿದೆ. ಈ ವಿಧಾನದಲ್ಲಿ ನೇರ ವಾಗಿ ಬ್ಯಾಟರಿಯನ್ನೇ ಚಾರ್ಜ್ ಮಾಡಲಾಗುತ್ತದೆ. ಹೆಚ್ಚಿನ ಪ್ರಮಾಣದÀ ವಿದ್ಯುತ್ ಹರಿಯುವ ಈ ವ್ಯವಸ್ಥೆ ಯಲ್ಲಿ ೬೦ರಿಂದ ೮೦ ನಿಮಿಷದೊಳಗೆ ೧ ಕಾರು ಪೂರ್ಣ ಚಾರ್ಜ್ ಮಾಡಬಹುದಾಗಿದೆ. ಎಸಿ ವಿಧಾನ ದಲ್ಲಿ ೨ ಗಂಟೆಗಿAತ ಹೆಚ್ಚು ಸಮಯ ಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಚಾರ್ಜಿಂಗ್ ಕೇಂದ್ರದಲ್ಲಿ ಎಸಿ ಹಾಗೂ ಡಿಸಿ ವಿಧಾನದ ಫ್ಲಗ್ ಅಳವಡಿಸಲಾಗಿರುತ್ತದೆ.

ಸರ್ಕಾರದ ಪ್ರೋತ್ಸಾಹ: ಮುಂಬರುವ ದಿನಗಳಲ್ಲಿ ಪರಿಸರ ಮಾಲಿನ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬ್ಯಾಟರಿ ಚಾಲಿತ ವಾಹನಗಳ ಬಳಕೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿವೆ. ಇದಕ್ಕಾಗಿ ಸಬ್ಸಿಡಿಯನ್ನು ನೀಡುತ್ತಿರು ವುದರಿಂದ ಇನ್ನು ಮುಂದೆ ಬ್ಯಾಟರಿ ಚಾಲಿತ ವಾಹನಗಳ ಸಂಖ್ಯೆ ಸಹಜವಾಗಿ ಹೆಚ್ಚಾಗಲಿದೆ. ಅದಕ್ಕನುಸಾರ ರಾಜ್ಯದ ವಿವಿಧೆಡೆ ಒಂದು ಸಾವಿರ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ರಾಜ್ಯ ಸರ್ಕಾರ ಉದ್ದೇಶಿಸಿದೆ. ಅದರ ಭಾಗವಾಗಿ `ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ’ವು ಮೈಸೂರು, ಮಂಡ್ಯ, ಚಾಮರಾಜನಗರ, ಹಾಸನ ಸೇರಿದಂತೆ ವಿವಿಧೆಡೆ ಒಟ್ಟು ೧೫೫ ಚಾರ್ಜಿಂಗ್ ಪಾಯಿಂಟ್ ಸ್ಥಾಪಿಸಲು ಕ್ರಮ ಕೈಗೊಂಡಿದೆ.

ಅದರಲ್ಲೂ ಮೈಸೂರು-ಬೆಂಗಳೂರು ದಶಪಥ ರಸ್ತೆಯಲ್ಲಿ ಮದ್ದೂರಿನಿಂದ ಮೈಸೂರುವರೆಗೆ ೮-೧೦ ಸ್ಥಳಗಳಲ್ಲಿ ಚಾರ್ಜಿಂಗ್ ಕೇಂದ್ರ ಸ್ಥಾಪಿಸಲು ಉದ್ದೇ ಶಿಸಲಾಗಿದೆ. ಇದರಿಂದ ರಾಜ್ಯ ಹಾಗೂ ಅಂತರ ರಾಜ್ಯದಿಂದ ಮೈಸೂರು ಹಾಗೂ ಸುತ್ತಮುತ್ತಲಿನ ಪ್ರವಾಸಿ ತಾಣಗಳಿಗೆ ಬ್ಯಾಟರಿ ಚಾಲಿತ ವಾಹನದಲ್ಲಿ ಬರುವ ಪ್ರವಾಸಿಗರಿಗೆ ವಾಹನಗಳ ಬ್ಯಾಟರಿ ಚಾರ್ಜ್ ಮಾಡಿಕೊಳ್ಳುವ ಭದ್ರತೆಯನ್ನು ಸೆಸ್ಕ್ ನೀಡಲಿದೆ.

Translate »