ಜಿ.ಟಿ.ದಿನೇಶ್‌ಕುಮಾರ್ ಮತ್ತೆ ಮುಡಾ ಆಯುಕ್ತರಾಗಿ ಅಧಿಕಾರ
ಮೈಸೂರು

ಜಿ.ಟಿ.ದಿನೇಶ್‌ಕುಮಾರ್ ಮತ್ತೆ ಮುಡಾ ಆಯುಕ್ತರಾಗಿ ಅಧಿಕಾರ

May 5, 2022

ಮೈಸೂರು, ಮೇ ೪(ಆರ್‌ಕೆ)- ಮೈಸೂರು ನಗರಾ ಭಿವೃದ್ಧಿ ಪ್ರಾಧಿಕಾರ(ಮುಡಾ)ದ ಆಯುಕ್ತರಾಗಿ, ಹಿರಿಯ ಕೆಎಎಸ್ ಅಧಿಕಾರಿ ಜಿ.ಟಿ.ದಿನೇಶ್‌ಕುಮಾರ್ ಬುಧವಾರ ಮತ್ತೆ ಅಧಿಕಾರ ವಹಿಸಿಕೊಂಡರು.

ಎರಡು ವರ್ಷಗಳ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಆದೇಶ ಹಾಗೂ ಸರ್ಕಾರದ ನಿರ್ದೇ ಶನದ ಮೇರೆಗೆ ಡಾ.ಡಿ.ಬಿ.ನಟೇಶ್ ಅವರು ದಿನೇಶ್ ಕುಮಾರ್ ಅವರಿಗೆ ಅಧಿಕಾರ ಹಸ್ತಾಂತರಿಸಿ, ಹೂ ಗುಚ್ಛ ನೀಡಿ ಶುಭ ಕೋರಿದರು. ಈ ವೇಳೆ ಮುಡಾ ಕಾರ್ಯ ದರ್ಶಿ ವೆಂಕಟರಾಜು, ನಗರ ಯೋಜಕ ಸದಸ್ಯ ಜಯಸಿಂಹ, ಸೂಪರಿಂಟೆAಡಿAಗ್ ಇಂಜಿನಿಯರ್ ಶಂಕರ್ ಇದ್ದರು.

ನಂತರ ನಿರ್ಗಮಿತ ಆಯುಕ್ತ ಡಾ.ನಟೇಶ್ ಅವರನ್ನು ಪ್ರಾಧಿಕಾರದ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಅಭಿನಂದಿಸಿ ಆತ್ಮೀಯವಾಗಿ ಬೀಳ್ಕೊಟ್ಟರು. ಈ ಹಿಂದೆ ಡಾ.ನಟೇಶ್ ವರ್ಗವಾಗಿದ್ದ ಚೆಸ್ಕಾಂ ಪ್ರಧಾನ ವ್ಯವಸ್ಥಾಪಕ ಸ್ಥಾನಕ್ಕೆ ಸರ್ಕಾರ ಬೇರೆಯವರನ್ನು ನೇಮಿಸಿರುವುದರಿಂದ ತಾವು ಬೆಂಗಳೂರಿನ ಕೇಂದ್ರ ಕಚೇರಿ(ಆPಖ)ಯಲ್ಲಿ ವರದಿ ಮಾಡಿಕೊಳ್ಳುವುದಾಗಿ ಡಾ. ಡಿ.ಬಿ.ನಟೇಶ್ ತಿಳಿಸಿದರು.

ಡಾ.ನಟೇಶ್ ಅವರನ್ನು ಈ ಹಿಂದೆ ಚೆಸ್ಕಾಂ ಜನರಲ್ ಮ್ಯಾನೇಜರ್ ಆಗಿ ವರ್ಗಾವಣೆ ಮಾಡಲಾಗಿತ್ತು. ದಿನೇಶ್ ಕುಮಾರ್ ಕಳೆದ ಜನವರಿ-ಫೆಬ್ರವರಿಯಲ್ಲಿ ೧೫ ದಿನಗಳ ಕಾಲ ಮುಡಾ ಆಯುಕ್ತರಾಗಿ ಸೇವೆ ಸಲ್ಲಿಸಿದ್ದರು. ಅವಧಿಗೂ ಮುನ್ನ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಡಾ.ನಟೇಶ್ ಕೆಎಟಿ ಮೊರೆ ಹೋಗಿದ್ದರು. ಅವರ ಅರ್ಜಿಯ ವಿಚಾರಣೆ ನಡೆಸಿದ ಕೆಎಟಿ ವರ್ಗಾವಣೆ ಆದೇಶಕ್ಕೆ ತಡೆಯಾಜ್ಞೆ ನೀಡಿ ತ್ತಲ್ಲದೆ, ೨೦೨೨ರ ಮೇ ೪ರವರೆಗೆ ಮುಡಾ ಆಯುಕ್ತರಾಗಿ ಮುಂದುವರಿಸುವAತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಅದರನ್ವಯ ಡಾ.ಡಿ.ಬಿ.ನಟೇಶ್ ಆಯುಕ್ತರಾಗಿ ಫೆಬ್ರವರಿ ಯಿಂದ ಕರ್ತವ್ಯ ಮುಂದುವರಿಸಿದ್ದರು. ಅವಧಿ ಪೂರ್ಣ ಗೊಂಡ ಹಿನ್ನೆಲೆಯಲ್ಲಿ ಡಾ.ನಟೇಶ್ ಸರ್ಕಾರದ ಆದೇಶ ದನ್ವಯ ಬುಧವಾರ ದಿನೇಶ್‌ಕುಮಾರ್‌ಗೆ ಅಧಿಕಾರ ವಹಿಸಿ ಕೊಟ್ಟು ನಿರ್ಗಮಿಸಿದರು. ಈ ಸಂದರ್ಭ ಸುದ್ದಿಗಾರರೊಂ ದಿಗೆ ಮಾತನಾಡಿದ ಮುಡಾ ನೂತನ ಆಯುಕ್ತ ದಿನೇಶ್ ಕುಮಾರ್, ಈವರೆಗೆ ಸಿದ್ಧಪಡಿಸಿರುವ ಯೋಜನೆಗಳ ಪೈಕಿ ಪ್ರಾಧಿಕಾರದ ಹಣಕಾಸು ಪರಿಸ್ಥಿತಿಗನುಸಾರ ಆದ್ಯತೆ ಮೇರೆಗೆ ಅನುಷ್ಠಾನ ಗೊಳಿಸಲಾಗುವುದು ಎಂದರು.

೨೦೨೩ರ ಆಯವ್ಯಯದಲ್ಲಿ ಪ್ರಸ್ತಾಪಿಸಿರುವ ಹೊಸ ಯೋಜನೆಗಳನ್ನು ಜಾರಿಗೆ ತರುವ ನಿಟ್ಟಿನಲ್ಲಿ ಸದಸ್ಯರು ಅಧಿಕಾರಿಗಳ ಸಹಕಾರದಿಂದ ಪ್ರಯತ್ನಿಸುತ್ತೇನೆ. ಉಪ ಸಮಿತಿ ವರದಿ ಆಧರಿಸಿ ಸಿಎ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಆರಂಭಿಸುವ ಜೊತೆಗೆ ಸರ್ಕಾರದ ಅನುಮೋದನೆ ಬಂದ ನಂತರ ಗುಂಪು ಮನೆ ವಸತಿ ಯೋಜನೆಯನ್ನು ಕೈಗೆತ್ತಿಕೊಳ್ಳುವುದಾಗಿ ದಿನೇಶ್‌ಕುಮಾರ್ ತಿಳಿಸಿದರು.

Translate »