ತಂಬಾಕು ಬೆಳೆ ಪರವಾನಗಿ ನವೀಕರಣ ಶುಲ್ಕ ಕಡಿಮೆ ಮಾಡಿ ಆದೇಶ; ಸಂಸದ ಪ್ರತಾಪ್‌ಸಿಂಹ
ಮೈಸೂರು

ತಂಬಾಕು ಬೆಳೆ ಪರವಾನಗಿ ನವೀಕರಣ ಶುಲ್ಕ ಕಡಿಮೆ ಮಾಡಿ ಆದೇಶ; ಸಂಸದ ಪ್ರತಾಪ್‌ಸಿಂಹ

May 5, 2022

ಮೈಸೂರು,ಮೇ೪ (ಆರ್‌ಕೆಬಿ)-ಮೈಸೂರು ಭಾಗದ ಪ್ರಮುಖ ವಾಣ ಜ್ಯ ಬೆಳೆಯಾದ ತಂಬಾಕಿಗೆ ಪ್ರತಿ ಬ್ಯಾರೆನ್‌ಗೆ ನಿಗ ದಿತ ಕೋಟಾದ ಶೇ.೨೫ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೨,೫೦೦ ರೂ. ಮತ್ತು ಶೇ.೫೦ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೧,೫೦೦ ರೂ. ದಂಡ ಶುಲ್ಕವನ್ನು ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದ್ದು, ರೈತರು ಆದಷ್ಟು ಬೇಗ ತಂಬಾಕು ಮಂಡಳಿಯಲ್ಲಿ ಪರವಾನಗಿಯನ್ನು ನವೀಕರಿಸಿಕೊಳ್ಳುವಂತೆ ಮೈಸೂರು-ಚಾಮರಾಜನಗರ ಸಂಸದ ಪ್ರತಾಪ್‌ಸಿಂಹ ಮನವಿ ಮಾಡಿದ್ದಾರೆ.

ತಂಬಾಕು ಮೈಸೂರು ಭಾಗದ ಪ್ರಮುಖ ವಾಣ ಜ್ಯ ಬೆಳೆಯಾ ಗಿದ್ದು, ರೈತರು ತಮ್ಮ ಜೀವನೋಪಾಯಕ್ಕೆ ತಂಬಾಕು ಬೆಳೆಯನ್ನೇ ಅವಲಂಬಿಸಿದ್ದಾರೆ. ರೈತರು ಎಲ್ಲಾ ರೀತಿಯ ಹವಾಮಾನ ವೈಪ ರಿತ್ಯಗಳನ್ನು ಎದುರಿಸಿ ತಂಬಾಕು ಬೆಳೆ ಬೆಳೆಯುತ್ತಿದ್ದಾರೆ. ತಂಬಾಕು ಮಳೆಯಾಶ್ರಿತ ಬೆಳೆಯಾಗಿರುವ ಕಾರಣ ಹವಾಮಾನಕ್ಕೆ ಅನು ಗುಣವಾಗಿ ಬೆಳೆಯ ಇಳುವರಿಯಲ್ಲಿ ವ್ಯತ್ಯಾಸವಾಗುತ್ತದೆ ಮತ್ತು ನಿಖರವಾಗಿ ಅಂದಾಜಿಸಲು ಸಾಧ್ಯವಾಗುವುದಿಲ್ಲ.

ತಂಬಾಕು ಮಂಡಳಿಯಲ್ಲಿ ನಿಗದಿತ ಪ್ರಮಾಣದ ಅರ್ಧಕ್ಕಿಂ ತಲೂ ಕಡಿಮೆ ಮಾರಾಟ ಮಾಡಿದ ರೈತರ ಪರವಾನಗಿಯನ್ನು ನವೀಕರಿಸಲು ೨೦೨೨-೨೩ನೇ ಬೆಳೆ ಸಾಲಿನಲ್ಲಿ ಹೆಚ್ಚಿನ ದಂಡವನ್ನು ವಸೂಲಿ ಮಾಡುತ್ತಿದ್ದರು. ಕಳೆದ ವರ್ಷ ಹವಾಮಾನದ ವೈಪರೀತ್ಯದಿಂದ ಇಳುವರಿಯಲ್ಲಿ ವ್ಯತ್ಯಾಸದಿಂದ ೬೮ ಒ. ಏg ತಂಬಾಕು ಬೆಳೆಯಲು ಸಾಧ್ಯವಾಯಿತು. ೨೦೨೨- ೨೩ ನೇ ಬೆಳೆ ಸಾಲಿಗೆ ಅಧಿಕೃತ ಕೋಟಾವನ್ನು ೧೦೦ ಒ ಞg ನಿಗದಿಪಡಿಸಿ ಹೆಚ್ಚಿನ ಬೆಳೆ ಬೆಳೆಯಲು ಉತ್ತೇಜನ ನೀಡುತ್ತಿದ್ದಾರೆ ಎಂದು ಪ್ರತಾಪ್ ಸಿಂಹ ಹೇಳಿದ್ದಾರೆ.

ಈ ನಿಟ್ಟಿನಲ್ಲಿ ತಂಬಾಕು ಮಂಡಳಿ ಅಧ್ಯಕ್ಷ ಹಾಗೂ ತಂಬಾಕು ಮಂಡಳಿ ಇಡಿ ಬಿ.ವಿ.ಆರ್.ಸುಬ್ರಹ್ಮಣ್ಯಂ ಅವರನ್ನು ಭೇಟಿಯಾಗಿದ್ದ ಸಂಸದ ಪ್ರತಾಪ್‌ಸಿಂಹ ತಂಬಾಕು ಬೆಳೆಗಾರರಿಗೆ ಆಗುತ್ತಿರುವ ತೊಂದರೆಯ ಬಗ್ಗೆ ಮನನ ಮಾಡಿದರು. ಈಗ ವಿಧಿಸುತ್ತಿರುವ ದಂಡ ಅಂದರೆ, ನಿಗದಿಪಡಿ ಸಿದ ಪ್ರಮಾಣದಲ್ಲಿ ಶೇ.೨೫ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೫,೦೦೦ ರೂ. ಮತ್ತು ಶೇ.೫೦ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೩,೦೦೦ ರೂ. ದಂಡವನ್ನು ಇಳಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿ ಪ್ರತಿ ಬ್ಯಾರನ್‌ಗೆ ನಿಗದಿತ ಖೋಟಾದ ಶೇ.೨೫ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೨,೫೦೦ ರೂ. ಮತ್ತು ಶೇ.೫೦ಕ್ಕಿಂತ ಕಡಿಮೆ ಮಾರಾಟ ಮಾಡಿದ ರೈತರಿಗೆ ೧,೫೦೦ ರೂ.ಗೆ ದಂಡದ ಶುಲ್ಕ ವನ್ನು ಕಡಿಮೆ ಮಾಡಿ ಆದೇಶ ಹೊರಡಿಸಲಾಗಿದೆ. ರೈತರು ಆದಷ್ಟು ಬೇಗ ತಂಬಾಕು ಮಂಡಳಿಯಲ್ಲಿ ಪರವಾನಗಿಯನ್ನು ನವೀಕರಿಸಿಕೊಳ್ಳುವಂತೆ ಸಂಸದ ಪ್ರತಾಪ್ ಸಿಂಹ ತಿಳಿಸಿದ್ದಾರೆ.

 

Translate »