ಮೃಗಾಲಯದಲ್ಲಿ ಸ್ಲಾತ್ ಕರಡಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ
ಮೈಸೂರು

ಮೃಗಾಲಯದಲ್ಲಿ ಸ್ಲಾತ್ ಕರಡಿ ಮನೆ ನಿರ್ಮಾಣಕ್ಕೆ ಶಂಕುಸ್ಥಾಪನೆ

May 5, 2022

ಮೈಸೂರು, ಮೇ ೪- ಮೈಸೂರಿನ ಚಾಮರಾಜೇಂದ್ರ ಮೃಗಾಲಯದಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೆöÊವೇಟ್ ಲಿಮಿಟೆಡ್ ವತಿ ಯಿಂದ ಅವರ ಸಿಎಸ್‌ಆರ್ ನಿಧಿಯಲ್ಲಿ ನಿರ್ಮಿಸಲು ಉದ್ದೇಶಿಸಿರುವ ಸ್ಲಾತ್ ಕರಡಿ ಮನೆಯ ಶಂಕುಸ್ಥಾಪನೆ ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಎಲ್.ಆರ್. ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ನಡೆಯಿತು.

ನಂತರ ಮಾತನಾಡಿದ ಅವರು, ಮೈಸೂರು ಮೃಗಾಲಯಕ್ಕೆ ಸಿಎಸ್‌ಆರ್ ನಿಧಿ ಯಿಂದ ಸಾಕಷ್ಟು ಕಂಪನಿಗಳು ಸಹಾಯ ಮಾಡುತ್ತಿರುವುದು ಸಂತೋಷದ ವಿಚಾರ. ಮುಂದಿನ ದಿನಗಳಲ್ಲಿ ಸಮಾಜದ ಪ್ರತಿಷ್ಠಿತ ಕಂಪನಿಗಳು ತಮ್ಮ ಸಿಎಸ್‌ಆರ್ ನಿಧಿ ಯಲ್ಲಿ ಮೃಗಾಲಯಕ್ಕೆ ಸಹಾಯ ಮಾಡಿ ದರೆ, ಎಲ್ಲಾ ಮೃಗಾಲಯಗಳೂ ಜಗತ್ತಿ ನಾದ್ಯಂತ ಹೆಚ್ಚಿನ ಹೆಸರು ಮಾಡುತ್ತದೆ ಎಂದು ತಿಳಿಸಿದರು.

ಭಾರತೀಯ ರಿಸರ್ವ್ ಬ್ಯಾಂಕ್ ನೋಟ್ ಮುದ್ರಣ ಪ್ರೆöÊವೇಟ್ ಲಿಮಿಟೆಡ್ ಜನರಲ್ ಮ್ಯಾನೇಜರ್ ಡಾ.ಎನ್.ಕೃಷ್ಣಸ್ವಾಮಿ ಮಾತ ನಾಡಿ, ಮೃಗಾಲಯಕ್ಕೆ ಈಗಾಗಲೇ ತಮ್ಮ ಕಂಪನಿ ಸಿಎಸ್‌ಆರ್ ನಿಧಿಯಿಂದ ಒರಾಂ ಗುಟನ್ ಮನೆ ನಿರ್ಮಿಸಿ ಕೊಟ್ಟಿರುತ್ತೇವೆ, ಈಗ ಸ್ಲಾಥ್ ಕರಡಿ ಮನೆಯನ್ನು ಕೊಡು ತ್ತಿರುವುದಕ್ಕೆ ನಮಗೆ ಸಂತೋಷವಾಗು ತ್ತಿದೆ. ಮುಂದಿನ ದಿನಗಳಲ್ಲಿ ಮೃಗಾಲಯಕ್ಕೆ ಅಗತ್ಯವಿರುವ ರಿಂಗ್ ಟೈಲ್ಡ್ ಲೆಮುರ್ ಮನೆ ನಿರ್ಮಿಸಿಕೊಡುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಎನ್.ಜಿ.ಮುರುಳಿ, ಎನ್.ಎ.ರೆಡ್ಡಿ, ಮೃಗಾಲಯದ ಕಾರ್ಯ ನಿರ್ವಾಹಕ ನಿರ್ದೇಶಕ ಅಜಿತ್ ಕುಲಕಣ ð, ಮೃಗಾಲಯ ಪ್ರಾಧಿಕಾರದ ಸದಸ್ಯರಾದ ಗೋಕುಲ್ ಗೋವರ್ಧನ್, ಜ್ಯೋತಿ ರೇಚಣ್ಣ, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಹೇಮಂತ್‌ಕುಮಾರ್, ಪುಸ್ತಕ ಪ್ರಾಧಿ ಕಾರದ ಅಧ್ಯಕ್ಷ ನಂದೀಶ್ ಅಂಚೆ ಮತ್ತಿತರರು ಉಪಸ್ಥಿತರಿದ್ದರು.

Translate »