ಎಪಿಎಂಸಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಸಂಪುಟ ಅಸ್ತು: ರೈತರು ತಮ್ಮ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಲು ಅವಕಾಶ
ಮೈಸೂರು

ಎಪಿಎಂಸಿ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ ಸಂಪುಟ ಅಸ್ತು: ರೈತರು ತಮ್ಮ ಉತ್ಪನ್ನವನ್ನು ನೇರವಾಗಿ ಮಾರಾಟ ಮಾಡಲು ಅವಕಾಶ

May 15, 2020

ಬೆಂಗಳೂರು,ಮೇ 14-ವಿವಾದಿತ ಎಪಿಎಂಸಿ (ತಿದ್ದುಪಡಿ) ಕಾಯ್ದೆಗೆ ಸುಗ್ರೀವಾಜ್ಞೆ 2020ಕ್ಕೆ ಸಂಪುಟ ಅನುಮೋದನೆ ನೀಡಿದೆ. ರಾಜ್ಯಪಾಲರು ಈ ಸುಗ್ರೀವಾಜ್ಞೆಗೆ ಸಂಪುಟ ಒಪ್ಪಿಗೆ ಬಳಿಕ ಕಳುಹಿಸಿಕೊಡುವಂತೆ ವಾಪಸು ಕಳುಹಿಸಿ ದ್ದರು. ಇಂದು ಸಂಪುಟ ಸಭೆ ಎಪಿಎಂಸಿ (ತಿದ್ದುಪಡಿ) ಕಾಯ್ದೆ ಸುಗ್ರೀವಾಜ್ಞೆಗೆ ಒಪ್ಪಿಗೆ ನೀಡಿದೆ. ಸಂಪುಟ ಸಭೆ ಬಳಿಕ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾನೂನು ಸಚಿವ ಮಾಧುಸ್ವಾಮಿ, ಈ ಸುಗ್ರೀವಾಜ್ಞೆ ಮೂಲಕ ಎರಡು ಸೆಕ್ಷನ್‍ಗಳಿಗೆ ತಿದ್ದುಪಡಿ ಮಾಡ ಲಾಗಿದೆ. ಅದರಂತೆ ಮಾರುಕಟ್ಟೆ ಸಮಿತಿಗೆ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಅಧಿಕಾರ ಇತ್ತು. ಈಗ ರೈತರು ತಾವು ಇಚ್ಛಿಸುವ ಖಾಸಗಿಯವರಿಗೆ ತಮ್ಮ ಉತ್ಪನ್ನವನ್ನು ನೇರವಾಗಿ ಮಾರಬಹುದಾಗಿದೆ. ಹೀಗಾಗಿ ಮಾರುಕಟ್ಟೆ ಸಮಿತಿಗೆ ಮಾರುಕಟ್ಟೆ ಒಳಗೆ ಅಧಿಕಾರ ಇರುತ್ತದೆ. ಹೊರಗೆ ಇರುವುದಿಲ್ಲ. ಆದರೆ ರಾಜ್ಯ ಮಾರುಕಟ್ಟೆ ಸಮಿತಿಯ ಅಧಿಕಾರ ಮೊಟಕಾಗಿಲ್ಲ ಎಂದು ಸ್ಪಷ್ಟಪ ಡಿಸಿದರು. ಇದರಿಂದ ಮಧ್ಯವರ್ತಿ ಹಾವಳಿ ಕಡಿಮೆಯಾಗಲಿದೆ. ಆದರೆ ಈ ಬಗ್ಗೆ ಬಹಳ ಕೆಟ್ಟದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ರೈತರು ಯಾರಿಗೆ ಬೇಕಾದರು ಮಾರಬಹುದು. ಈ ಸಂಬಂಧ ಅನೇಕ ವರ್ಷಗಳ ಹಿಂದೆ ಕಾನೂನು ಇತ್ತು ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು.

Translate »