ಹಣ್ಣು, ತರಕಾರಿಗೆ ಹೆಕ್ಟೇರ್‍ಗೆ 15 ಸಾವಿರ ಪರಿಹಾರ
ಮೈಸೂರು

ಹಣ್ಣು, ತರಕಾರಿಗೆ ಹೆಕ್ಟೇರ್‍ಗೆ 15 ಸಾವಿರ ಪರಿಹಾರ

May 15, 2020

ಬೆಂಗಳೂರು: ಸಂಪುಟ ಸಭೆ 1610 ಕೋಟಿ ಇದ್ದ ವಿಶೇಷ ಪ್ಯಾಕೇಜನ್ನು 1,777 ಕೋಟಿ ರೂ.ಗೆ ಹೆಚ್ಚಳ ಮಾಡಿದೆ. ಈ ಹಿಂದೆ 1,610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಣೆ ಮಾಡಲಾಗಿತ್ತು ಎಂದರು.

ಅದರಂತೆ 7 ಹಣ್ಣು ಬೆಳೆಗಳಾದ ಬಾಳೆ, ಪಪ್ಪಾಯ, ಟೇಬಲ್ ದ್ರಾಕ್ಷಿ, ಅಂಜೂರಾ, ಅನಾನಸ್, ಕಲ್ಲಂಗಡಿ/ ಕರ್ಜೂರಾ, ಬೋರೆ/ ಬೆಣ್ಣೆ ಹಣ್ಣು ಬೆಳೆಗಳಿಗೆ ಮತ್ತು 10 ಬಗೆಯ ವಿವಿಧ ತರಕಾರಿ ಬೆಳೆಗಳಾದ ಟೊಮ್ಯಾಟೊ, ಹಸಿರು ಮೆಣಸಿನಕಾಯಿ, ಹೂ ಕೋಸು, ಎಲೆ ಕೋಸು, ಸಿಹಿ ಕುಂಬಳಕಾಯಿ, ಬೂದು ಕುಂಬಳಕಾಯಿ, ಕ್ಯಾರೆಟ್, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪುಗಳು/ಹೀರೇಕಾಯಿ/ ತೊಂಡೆಕಾಯಿಗೆ ಪ್ರತಿ ಹೆಕ್ಟೇರ್‍ಗೆ 15 ಸಾವಿರ ರೂ.ನಂತೆ ಪರಿಹಾರ ನೀಡಲಾಗುವುದು. ಆ ಮೂಲಕ ಒಟ್ಟು 137ಕೋಟಿ ರೂ. ಪ್ಯಾಕೇಜ್ ನೀಡಲಾಗಿದೆ ಎಂದರು. ಇನ್ನು 1.25 ಲಕ್ಷ ವಿದ್ಯುತ್ ಚಾಲಿತ ಘಟಕಕ್ಕೂ (ಪವರ್ ಲೂಮ್) ವಿಶೇಷ ಪ್ಯಾಕೇಜನ್ನು ವಿಸ್ತರಣೆ ಮಾಡಲಾಗಿದೆ. ಈ ಘಟಕದಲ್ಲಿ ಕೆಲಸ ಮಾಡುವ ಪ್ರತಿ ಕೂಲಿ ಕಾರ್ಮಿಕನಿಗೆ 2,000 ರೂ. ನೀಡಲಾಗುವುದು. ಆ ಮೂಲಕ 25 ಕೋಟಿ ರೂ. ವೆಚ್ಚ ತಗುಲಲಿದೆ. ಒಟ್ಟು 162 ಕೋಟಿ ರೂ. ಹೆಚ್ಚುವರಿ ಹೊರೆಯಾಗಲಿದೆ ಎಂದು ತಿಳಿಸಿದರು.

Translate »