ರಾಜ್ಯದಲ್ಲಿ ಸಾವಿರದ ಗಡಿಗೆ ಕೊರೊನಾ ಸೋಂಕಿತರ ಸಂಖ್ಯೆ
ಮೈಸೂರು

ರಾಜ್ಯದಲ್ಲಿ ಸಾವಿರದ ಗಡಿಗೆ ಕೊರೊನಾ ಸೋಂಕಿತರ ಸಂಖ್ಯೆ

May 15, 2020

ಬೆಂಗಳೂರು, ಮೇ 14(ಕೆಎಂಶಿ)- ರಾಜ್ಯದಲ್ಲಿ ಸಾವಿರ ಗಡಿಗೆ (987) ಕೊರೊನಾ ಸೋಂಕು ತಲುಪಿದೆ. ಮುಂಬೈ, ಅಹಮದಾಬಾದ್, ದೆಹಲಿ ಹಾಗೂ ಅಜ್ಮೀರ್‍ನಿಂದ ಬಂದವರಿಂದ ಸೋಂಕು ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಬೆಳೆಯುತ್ತಿದೆ.

ವಿದೇಶಿಗರು ಹಾಗೂ ತಬ್ಲಿಘಿಗಳಿಗೆ ಸೀಮಿತವಾಗಿದ್ದ ಸೋಂಕು ಈಗ ಲಾಕ್‍ಡೌನ್ ಸಡಿಲಿಕೆಯ ನಂತರ ಈ ಪಟ್ಟಣಗಳಿಂದ ರಾಜ್ಯಕ್ಕೆ ಬಂದವರಿಗೆ ತಗುಲಿದೆ. ಅದರಲ್ಲಿ ಮಹಾರಾಷ್ಟ್ರ ಗಡಿ ಭಾಗದ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹರಡಿ, ಸಾವಿರ ಗಡಿ ತಲುಪುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಂದೆಡೆ ಮೈಸೂರಿನಲ್ಲಿ ಕೊರೊನಾ ಸೋಂಕು ತಡೆಯುವ ಪ್ರಯತ್ನದಲ್ಲಿ ಯಶಸ್ವಿ ಹಾದಿ ತುಳಿದಿದ್ದರೆ, ನೆರೆಯ ಮಂಡ್ಯ ಜಿಲ್ಲೆಗೆ ಮುಂಬೈನಿಂದ ಬಂದವರಿಗೆ ಸೋಂಕು ತಗುಲಿದೆ.

Translate »