ಕೊರೊನಾ ವಿಚಾರದಲ್ಲಿ ಎಚ್ಚರ ವಹಿಸಲು ಜನತೆಗೆ ಮಾಜಿ ಪ್ರಧಾನಿ ದೇವೇಗೌಡರ ಮನವಿ
ಮೈಸೂರು

ಕೊರೊನಾ ವಿಚಾರದಲ್ಲಿ ಎಚ್ಚರ ವಹಿಸಲು ಜನತೆಗೆ ಮಾಜಿ ಪ್ರಧಾನಿ ದೇವೇಗೌಡರ ಮನವಿ

August 5, 2020

ಬೆಂಗಳೂರು, ಆ.4 (ಕೆಎಂಶಿ)-ಮಹಾಮಾರಿ ಕೊರೊನಾ ವೈರಸ್ ಭೀಕರವಾಗಿ ಹರಡುತ್ತಿರುವ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ರಾಜ್ಯದ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಎಲ್ಲರೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಮನೆಯಿಂದ ಹೊರಬರಬೇಕಾದರೆ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಆಗಾಗ ಕೈಯ್ಯನ್ನು ಸ್ಯಾನಿಟೈಸರ್‍ನಿಂದ ಸ್ವಚ್ಛಗೊಳಿಸಿ, ಹೊರಗಡೆ ಯಿಂದ ಮನೆಗೆ ಬಂದ ತಕ್ಷಣ ಕೈ ಮತ್ತು ಕಾಲುಗಳನ್ನು ಸಾಬೂನಿನಿಂದ ಸ್ವಚ್ಛಗೊಳಿಸಿ, ಕೆಲಸವಿಲ್ಲದ ಸಮಯದಲ್ಲಿ ಆದಷ್ಟು ಮನೆಯಲ್ಲೇ ಇರಲು ಆದ್ಯತೆ ಕೊಡಿ ಎಂದರು.

ಮಾರುಕಟ್ಟೆಗಳಲ್ಲಿ, ಬ್ಯಾಂಕ್‍ಗಳಲ್ಲಿ ಹಾಗೂ ಇನ್ನಿತರ ಜನ ದಟ್ಟಣೆ ಪ್ರದೇಶಗಳಲ್ಲಿ ಕೆಲವರು ಸಾಮಾಜಿಕ ಅಂತರವನ್ನೇ ಪಾಲಿಸುತ್ತಿಲ್ಲ ಎಂಬುದನ್ನು ನಾನು ಮಾಧ್ಯಮಗಳ ಮುಖೇನ ಗಮನಿಸುತ್ತಿದ್ದೀನಿ. ದಯವಿಟ್ಟು, ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ ಎಂದು ಮನವಿ ಮಾಡಿಕೊಳ್ಳುತ್ತೀನಿ ಎಂದರು. ನಾನು ಮಾಧ್ಯಮ ಮಿತ್ರರಲ್ಲೂ ಮನವಿ ಮಾಡುತ್ತೇನೆ. ತಾವುಗಳು ಸಹ ಹಗಲು ರಾತ್ರಿ ಎನ್ನದೇ ದಿನದ 24 ಗಂಟೆ ನಾಡಿನ ಸಮಸ್ತ ಜನತೆಗೆ ಮಾಹಿತಿಗಳನ್ನು ತಲುಪಿಸಲು ವಾರಿಯರ್ಸ್‍ಗಳಂತೆ ಕಾರ್ಯವನ್ನು ಬಹಳ ಅಚ್ಚುಕಟ್ಟಾಗಿ ನಿರ್ವ ಹಿಸುತ್ತಿದ್ದೀರಾ. ದಯವಿಟ್ಟು, ತಾವುಗಳು ಸಹ ತಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನಹರಿಸಿ ಎಂದು ಈ ಮೂಲಕ ವಿನಂತಿಸಿಕೊಳ್ಳುತ್ತೇನೆ ಎಂದರು.