ಮೈಸೂರು ಪತ್ರಕರ್ತರ ಭವನ ಸ್ಯಾನಿಟೈಸ್, 3 ದಿನ ಬಂದ್
ಮೈಸೂರು

ಮೈಸೂರು ಪತ್ರಕರ್ತರ ಭವನ ಸ್ಯಾನಿಟೈಸ್, 3 ದಿನ ಬಂದ್

August 5, 2020

ಮೈಸೂರು, ಆ.4(ಆರ್‍ಕೆಬಿ)- ವಿಪಕ್ಷ ನಾಯಕ ಸಿದ್ದರಾಮಯ್ಯ ಅವರಿಗೆ ಕೊರೊನಾ ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಅವರು ಸಂವಾದ ನಡೆಸಿದ್ದ ಮೈಸೂರಿನ ತ್ಯಾಗ ರಾಜ ರಸ್ತೆ ಕ್ರಾಸ್‍ನಲ್ಲಿರುವ ಮೈಸೂರು ಪತ್ರಕರ್ತರ ಭವನವನ್ನು 3 ದಿನ ಬಂದ್ ಮಾಡಲಾಗಿದೆ. ಅಲ್ಲದೇ, ಇಡೀ ಕಟ್ಟಡ ವನ್ನು ಸ್ಯಾನಿಟೈಸ್ ಮಾಡಲಾಗಿದೆ.

ಜು.31ರಂದು ಪತ್ರಕರ್ತರ ಸಂಘದಿಂದ ಸಿದ್ದರಾಮಯ್ಯ ಅವರ ಸಂವಾದ ಏರ್ಪ ಡಿಸಲಾಗಿತ್ತು. ಸೋಮವಾರ ರಾತ್ರಿ ಸಿದ್ದ ರಾಮಯ್ಯ ಅವರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟ ವರದಿ ಬರುತ್ತಿ ದ್ದಂತೆಯೇ ಪತ್ರಕರ್ತರ ಸಂಘದ ಕಚೇರಿ ಯನ್ನು ಬಂದ್ ಮಾಡಿ, ಮಂಗಳವಾರಕ್ಕೆ ನಿಗದಿಯಾಗಿದ್ದ ಪತ್ರಿಕಾಗೋಷ್ಠಿಗಳನ್ನು ರದ್ದುಪಡಿಸಲಾಯಿತು.

ಅಲ್ಲದೇ, ನಗರ ಪಾಲಿಕೆ ಆರೋ ಗ್ಯಾಧಿಕಾರಿ ಡಾ.ಡಿ.ಜಿ.ನಾಗರಾಜು ನೇತೃತ್ವ ದಲ್ಲಿ ಪತ್ರಕರ್ತರ ಭವನ, ಟಿ.ಕೆ.ಬಡಾ ವಣೆಯಲ್ಲಿನ ಸಿದ್ದರಾಮಯ್ಯ ಅವರ ನಿವಾಸ ಮತ್ತು ಮೈಸೂರು ತಾಲೂಕು ಕಾಟೂರು ಗ್ರಾಮದಲ್ಲಿನ ಅವರ ತೋಟದ ಮನೆಯನ್ನು ಮಂಗಳವಾರ ಸ್ಯಾನಿಟೈಸ್ ಮಾಡಲಾಯಿತು.

ಸಿದ್ದರಾಮಯ್ಯ ಅವರ ಸಂವಾದ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಸಿ.ಕೆ.ಮಹೇಂದ್ರ, ಉಪಾ ಧ್ಯಕ್ಷ ಸುಬ್ರಹ್ಮಣ್ಯ ಮತ್ತು ಪ್ರಧಾನ ಕಾರ್ಯದರ್ಶಿ ಕೆ.ಜೆ.ಲೋಕೇಶ್‍ಬಾಬು ವೇದಿಕೆ ಹಂಚಿಕೊಂಡಿದ್ದರು. ಮೂವರೂ ಈಗ ಸ್ವಯಂ ಕ್ವಾರಂಟೇನ್ ಆಗಿದ್ದಾರೆ. ಸಂವಾದದಲ್ಲಿ ಭಾಗ ವಹಿಸಿದ್ದ ಪತ್ರಕರ್ತರಿಗೆ ಕ್ವಾರಂಟೇನ್‍ಗೆ ಒಳ ಪಡುವಂತೆ ಸೂಚಿಸ ಲಾಗಿದೆ. ಬುಧವಾರ ಬೆಳಗ್ಗೆ ಶಾರದಾ ವಿಲಾಸ ಕಾಲೇಜು ಎದುರಿನ ಮಕ್ಕಳ ಕೂಟ ಸಂಸ್ಥೆಯಲ್ಲಿ ಗಂಟಲು ದ್ರವ ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚನೆ ನೀಡ ಲಾಗಿದೆ. ಕಳೆದ ಕೆಲವು ದಿನಗಳಿಂದ ಸಿದ್ದ ರಾಮಯ್ಯ ಅವರೊಂದಿಗೆ ಸಂಪರ್ಕಕ್ಕೆ ಬಂದಿರುವ ಎಲ್ಲರಿಗೂ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದೆ.

Translate »