ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ
ಮೈಸೂರು

ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿ ಆಹ್ವಾನ

June 14, 2018

ಮೈಸೂರು:  2018-19ನೇ ಸಾಲಿನ ಎರಡನೇ ವರ್ಷದ ಡಿಪ್ಲೊಮಾ ಪ್ರವೇಶಕ್ಕೆ ಅರ್ಜಿಗಳನ್ನು ಕರೆಯಲಾಗಿದೆ. 2 ವರ್ಷದ ಐಟಿಐ ಉತ್ತೀರ್ಣರಾದ ಸಾಮಾನ್ಯ ಅಭ್ಯರ್ಥಿಗಳನ್ನು ಹಾಗೂ ಇತರೆ ವರ್ಗ ರೂ. 100ಗಳ ಹಾಗೂ ಎಸ್‍ಟಿ, ಎಸ್‍ಸಿ, ಕ್ಯಾಟಗೇರಿ-1 ಅಭ್ಯರ್ಥಿಗಳು ರೂ. 50ಗಳ ಶುಲ್ಕವನ್ನು ಆಯಾ ಸಂಸ್ಥೆಗಳಲ್ಲೇ ಪಾವತಿಸಿ, ಅದರ ರಶೀದಿಯ ಪ್ರತಿಯನ್ನು ಅರ್ಜಿಯ ಜೊತೆ ಲಗತ್ತಿಸತಕ್ಕದ್ದು. ಅರ್ಜಿಯನ್ನು www.dte.kar.nic.in ವೆಬ್‍ಸೈಟ್‍ನಿಂದ download ಮಾಡಿಕೊಳ್ಳಬಹುದಾಗಿದೆ. ಭರ್ತಿ ಮಾಡಿದ ಅರ್ಜಿಗಳನ್ನು ಜೂ.26ರೊಳಗೆ ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು, ಪೋಷಕರು www.dte.kar.nic.in ಹಾಗೂ ಸಂಸ್ಥೆಯ ಸೂಚನಾ ಫಲಕದಿಂದ ಅಥವಾ ಕಚೇರಿಯಿಂದ ಕಚೇರಿ ವೇಳೆಯಲ್ಲಿ ಪಡೆಯಬಹುದಾಗಿದೆ.

Translate »