ಡಿಎಫ್‍ಆರ್‌ಎಲ್‍ನಲ್ಲಿ ಆಹಾರ ವಿಶ್ಲೇಷಣೆ, ಗುಣಮಟ್ಟ ಖಾತರಿ ಸ್ನಾತಕೋತ್ರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ
ಮೈಸೂರು

ಡಿಎಫ್‍ಆರ್‌ಎಲ್‍ನಲ್ಲಿ ಆಹಾರ ವಿಶ್ಲೇಷಣೆ, ಗುಣಮಟ್ಟ ಖಾತರಿ ಸ್ನಾತಕೋತ್ರ ಡಿಪ್ಲೊಮಾ ಕೋರ್ಸ್‍ಗೆ ಅರ್ಜಿ

July 24, 2018

ಮೈಸೂರು:  ಮೈಸೂರಿನ ಸಿದ್ದಾರ್ಥನಗರದ ರಕ್ಷಣಾ ಆಹಾರ ಸಂಶೋಧಕರ ಪ್ರಯೋಗಾಲಯ (ಡಿಎಫ್‍ಆರ್‌ಎಲ್)ನಲ್ಲಿ ಆಹಾರ ವಿಶ್ಲೇಷಣೆ ಮತ್ತು ಗುಣಮಟ್ಟ ಖಾತರಿ (Post Graduate Diploma in Food Analysis & Quality Assurance) ಸ್ನಾತಕೋತ್ತರ ಡಿಪ್ಲೊಮ ಕೋರ್ಸ್‍ಗೆ ಅರ್ಜಿ ಆಹ್ವಾನಿಸಿದೆ.

ಮೈಸೂರು ವಿವಿಯಿಂದ ಮಾನ್ಯತೆ ಪಡೆದಿರುವ ಈ 10 ತಿಂಗಳ ಅವಧಿಯ ಕೋರ್ಸ್‍ಗೆ ಪ್ರವೇಶ ಪಡೆಯಲು ಅಭ್ಯರ್ಥಿಯು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದ ವಿಜ್ಞಾನ ಪದವೀಧರ, ರಸಾಯನ ಶಾಸ್ತ್ರ, ಜೀವ ರಸಾಯನ ಶಾಸ್ತ್ರ ವ್ಯಾಸಂಗ ಮಾಡಿರಬೇಕು. ಕೃಷಿ, ಪಶು ವಿಜ್ಞಾನದಲ್ಲಿ ಬಿಎಸ್‍ಸಿ ಪದವೀಧರ ನಾಗಿರಬೇಕು. ಗೃಹ ವಿಜ್ಞಾನ, ಪೋಷಣೆ ಮತ್ತು ಡಯಟೆಟಿಕ್ಸ್ ವಿಷಯದಲ್ಲಿ ಬಿಎಸ್‍ಸಿ ಪದವೀಧರರಾಗಿದ್ದು, ಕನಿಷ್ಟ ಶೇ.50 ಅಂಕ ಪಡೆದಿರಬೇಕು. 25 ಸೀಟು ಲಭ್ಯವಿದ್ದು, ಲಿಖಿತ ಮತ್ತು ಮೌಖಿಕ ಪರೀಕ್ಷೆ ಆಧಾರದಲ್ಲಿ ಆಯ್ಕೆ ನಡೆಯಲಿದೆ. ರಸಾಯನ ಶಾಸ್ತ್ರ, ಜೀವರಸಾಯನ ಶಾಸ್ತ್ರ, ಕೃಷಿ, ಪಶು ವಿಜ್ಞಾನ, ಗೃಹ ವಿಜ್ಞಾನ, ಪೋಷಣೆ ಮತ್ತು ಡಯಟೆಟಿಕ್ಸ್, ಆಹಾರ ಮತ್ತು ಪೋಷಣೆ, ಆಹಾರ ವಿಜ್ಞಾನ ಮತ್ತು ಪೋಷಣೆ ಈ ವಿಷಯಗಳ ಮೇಲೆ ಲಿಖಿತ ಪರೀಕ್ಷೆ ನಡೆಸಲಾಗುವುದು.

ಡಿಎಫ್‍ಆರ್‌ಎಲ್‍ನಲ್ಲಿ ಖುದ್ದಾಗಿ ಅರ್ಜಿ ಪಡೆದು ಡೈರೆಕ್ಟರ್, ಡಿಎಫ್‍ಆರ್‌ಎಲ್, ಮೈಸೂರು ಹೆಸರಿನಲ್ಲಿ ರೂ.100ರ ಡಿಮಾಂಡ್ ಟ್ರಾಪ್ಟ್ ಸಹಿತ ಆ.23ರೊಳಗೆ ಅರ್ಜಿ ಸಲ್ಲಿಸಬೇಕು. ಅರ್ಹ ಅಭ್ಯರ್ಥಿಗಳಿಗೆ ಆ.28ರಂದು ಬೆಳಿಗ್ಗೆ 10.30 ಗಂಟೆಗೆ ಡಿಎಫ್‍ಆರ್‌ಎಲ್‍ನ ಸಭಾಂಗಣದಲ್ಲಿ ಲಿಖಿತ ಪರೀಕ್ಷೆ ಮತ್ತು ಸಂದರ್ಶನವನ್ನು ನಡೆಸಲಾಗುತ್ತದೆ. ಸೆಪ್ಟಂಬರ್ 2018ರಿಮದ ತರಗತಿಗಳು ಪ್ರಾರಂಭವಾಗಲಿದೆ.

ಅರ್ಜಿಗಳನ್ನು www.drdo.gov.in/drdo/labs1/english/pgd-dfrl.pdf ನಲ್ಲಿಯೂ ಡೌನ್‍ಲೋಡ್ ಮಾಡಿಕೊಳ್ಳಬಹುದು. ಹೆಚ್ಚಿನ ಮಾಹಿತಿಗೆ ದೂ.0821-2579640/ 9449264414 ಸಂಪರ್ಕಿಸಬಹುದು.

Translate »