ಕೇಂದ್ರ, ರಾಜ್ಯ ಸರ್ಕಾರಗಳ ವಿಶೇಷ ಪ್ಯಾಕೇಜ್‍ಗೆ ಶ್ಲಾಘನೆ
ಮೈಸೂರು ಗ್ರಾಮಾಂತರ

ಕೇಂದ್ರ, ರಾಜ್ಯ ಸರ್ಕಾರಗಳ ವಿಶೇಷ ಪ್ಯಾಕೇಜ್‍ಗೆ ಶ್ಲಾಘನೆ

May 18, 2020

ಹುಣಸೂರು, ಮೇ17(ಕೆಕೆ)- ಕೊರೊನಾದಿಂದ ತಲ್ಲಣ ಗೊಂಡಿದ್ದ ದೇಶದ ಅರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಕೇಂದ್ರ, ರಾಜ್ಯ ಸರ್ಕಾರಗಳು ವಿಶೇಷ ಪ್ಯಾಕೇಜ್ ಪ್ರಕಟಿಸಿ ಸರ್ವರಿಗೂ ನೆಮ್ಮದಿ ಮೂಡಿಸಿವೆ ಎಂದು ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಬಿ.ಎಸ್.ಯೋಗಾನಂದ್‍ಕುಮಾರ್ ಶ್ಲಾಘಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾ ಡಿದ ಅವರು, ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪ್ಯಾಕೇಜ್ ಅನುದಾನದಲ್ಲಿ ಕಾಯಕ ಸಮುದಾಯ, ಕೃಷಿ ಸೇರಿದಂತೆ ಎಲ್ಲಾ ವರ್ಗದವರಿಗೂ ಅನುಕೂಲ ಕಲ್ಪಿಸಿದೆ. ಇದರಿಂದ ದೇಶದ ಅರ್ಥಿಕ ಸ್ಥಿತಿ ಸುಧಾರಣೆಯಾಗಲಿದೆ. ಇದಕ್ಕೆ ಪೂರಕವಾಗಿ ರಾಜ್ಯ ಸರ್ಕಾ ರವೂ 1,610 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಎಲ್ಲಾ ವರ್ಗಗಳನ್ನು ತಲುಪುವ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಬೃಹತ್ ಯೋಜನೆಗಳನ್ನು ಜಾರಿ ಗೊಳಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಪರಿಹಾರ (ಪಿಎಂ ಕೇರ್) ಖಾತೆಗೆ ತಾಲೂ ಕಿನ ಬಿಜೆಪಿ ಕಾರ್ಯಕರ್ತರು 5 ಲಕ್ಷ ರೂ. ಹಾಗೂ ಜಿಲ್ಲಾ ಕೇಂದ್ರ ದಿಂದ 60 ಲಕ್ಷ ರೂ.ದೇಣಿಗೆ ಹಣವನ್ನು ಜಮಾ ಮಾಡಲಾಗಿದೆ. ಅಲ್ಲದೆ ಹುಣಸೂರಿನ ಪೃಥ್ವಿ ಜ್ಯೂಯಲರ್ಸ್ ಮಾಲೀಕರು ಪಿಎಂ ಕೇರ್‍ಗೆ 25 ಲಕ್ಷ ರೂ.ದೇಣಿಗೆ ನೀಡಿದ್ದಾರೆ ಎಂದು ತಿಳಿಸಿದರು.

ರಾಜ್ಯ ಸರ್ಕಾರ ಜಾರಿಗೊಳಿಸಿ ರುವ ಎಪಿಎಂಸಿ ತಿದ್ದುಪಡಿ ಕಾಯ್ದೆ ರೈತರ ಪರವಾಗಿದ್ದು, ರೈತ ತಾನು ಬೆಳೆದ ಕೃಷಿ ಉತ್ಪನ್ನಗಳನ್ನು ಸ್ವತಂತ್ರವಾಗಿ ಮಾರಾಟ ಮಾಡಬಹುದು. ಇದರಿಂದ ಎಪಿಎಂಸಿ ಯಲ್ಲಿ ನಡೆಯುತ್ತಿದ್ದ ಬಿಳಿ ಚೀಟಿ ಅವ್ಯಹಾರಕ್ಕೆ ಅಂತ್ಯವಾಗಲಿದೆ ಎಂದರು. ಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ಗಣೇಶ್ ಕುಮಾರ ಸ್ವಾಮಿ, ನಗರ ಪ್ರಧಾನ ಕಾರ್ಯದರ್ಶಿ ಹರವೆ ರವಿಕುಮಾರ್ ಇದ್ದರು

Translate »