ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಅನುಮೋದನೆ
ಮೈಸೂರು

ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಯೋಜನೆಗೆ ಅನುಮೋದನೆ

April 30, 2022
  • ಮೇಯರ್ ಕೌನ್ಸಿಲ್ ಸಭೆ ನಡೆಸಬಹುದೇ… ಗದ್ದಲದ ನಡುವೆ
  • ವಿಪಕ್ಷ ಸದಸ್ಯರ ಭಾರೀ ಆಕ್ರೋಶ
  • ಕಾರ್ಯಸೂಚಿ ಪಾಲಿಸದ್ದಕ್ಕೆ ವಾಗ್ದಾಳಿ
  • ಅವಧಿ ಮುಗಿದರೂ ಮೇಯರ್ ಮುಂದುವರಿಕೆ; ಸಭೆ ನಡೆಸುವ ಸಂಬAಧ ಆಯುಕ್ತರ ಸ್ಪಷ್ಟನೆ

ಮೈಸೂರು, ಏ.೨೯(ಎಸ್‌ಬಿಡಿ)- ಮೇಯರ್ ಸುನಂದಾ ಪಾಲನೇತ್ರ ಅಧ್ಯಕ್ಷತೆಯ ಕೌನ್ಸಿಲ್ ಸಭೆಯ ಸಿಂಧುತ್ವದ ಗದ್ದಲದ ನಡುವೆಯೇ ಮನೆ ಮನೆಗೆ ಗ್ಯಾಸ್ ಪೈಪ್‌ಲೈನ್ ಅಳವಡಿಸುವ ಯೋಜನೆಗೆ ಅನುಮೋದನೆ ಸಿಕ್ಕಿದೆ.

ಮೈಸೂರು ನಗರ ಪಾಲಿಕೆ ನಾಲ್ವಡಿ ಕೃಷ್ಣ ರಾಜ ಒಡೆಯರ್ ಸಭಾಂಗಣದಲ್ಲಿ ಶುಕ್ರವಾರ ಮೇಯರ್ ಸುನಂದಾ ಪಾಲನೇತ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಕೌನ್ಸಿಲ್ ಸಭೆ ಆರಂಭ ದಿಂದ ಕಡೆವರೆಗೂ ಗದ್ದಲದ ಗೂಡಾಗಿತ್ತು.

Translate »