ಹಿರಿಯ ಆಯುಷ್ ಅಧಿಕಾರಿಗಳಿಂದ ಮೈಸೂರು ಅರಮನೆ, ವಸ್ತು ಪ್ರದರ್ಶನ, ರೇಸ್ ಕೋರ್ಸ್ ಪರಿಶೀಲನೆ
ಮೈಸೂರು

ಹಿರಿಯ ಆಯುಷ್ ಅಧಿಕಾರಿಗಳಿಂದ ಮೈಸೂರು ಅರಮನೆ, ವಸ್ತು ಪ್ರದರ್ಶನ, ರೇಸ್ ಕೋರ್ಸ್ ಪರಿಶೀಲನೆ

April 30, 2022

ಮೈಸೂರು, ಏ.೨೯(ಆರ್‌ಕೆ)- ಅಂತಾ ರಾಷ್ಟಿçÃಯ ಯೋಗ ದಿನವನ್ನು ಜೂನ್ ೨೧ರಂದು ಆಚರಿಸುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವಾಲ ಯದ ಹಿರಿಯ ಅಧಿಕಾರಿಗಳು ಇಂದು ಮೈಸೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ಕೇಂದ್ರದ ಆಯುಷ್ ಸಚಿವಾಲಯದ ಕಾರ್ಯದರ್ಶಿ ವೈದೈ ರಾಜೇಶ್ ಕೋಟೆಚ್, ಜಂಟಿ ಕಾರ್ಯದರ್ಶಿ ಕವಿತಾ ಗರ್ಗ್, ರಾಜ್ಯ ಆಯುಷ್ ಇಲಾಖೆ ಆಯುಕ್ತ ರಾಮ ಚಂದ್ರ ಅವರು ಮೈಸೂರು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಮಹಾನಗರ ಪಾಲಿಕೆ ಆಯುಕ್ತ ಲಕ್ಷಿö್ಮÃಕಾಂತರೆಡ್ಡಿ, ಆಯುಷ್ ಉಪನಿರ್ದೇಶಕಿ ಡಾ.ಸೀತಾ ಲಕ್ಷಿö್ಮÃ, ಅರಮನೆ ಮಂಡಳಿ ಉಪನಿರ್ದೇ ಶಕ ಸುಬ್ರಹ್ಮಣ್ಯ ಹಾಗೂ ಇತರೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಮೈಸೂರು ಅರಮನೆ, ದೊಡ್ಡಕರೆ ಮೈದಾನದ ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಆವರಣ ಹಾಗೂ ಚಾಮುಂಡಿ ಬೆಟ್ಟ ತಪ್ಪಲಿನ ರೇಸ್‌ಕೋರ್ಸ್ ಮೈದಾನದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ಪ್ರವೇಶ ದ್ವಾರಗಳು, ಆವರಣದ ಸಾಮರ್ಥ್ಯ, ಭದ್ರತಾ ವ್ಯವಸ್ಥೆ, ರಸ್ತೆ ಸಂಪರ್ಕ, ವಾಹನ ನಿಲುಗಡೆ ಸೌಲಭ್ಯ, ವೇದಿಕೆ ನಿರ್ಮಿಸಲು ಜಾಗದ ಲಭ್ಯತೆ, ಗಣ್ಯರು, ಅತಿಥಿಗಳು ಸುರಕ್ಷಿತ ನಿರ್ಗಮನ ಮತ್ತಿತರೆ ವಿಷಯ ಗಳ ಬಗ್ಗೆ ಮೈಸೂರು ಅಧಿಕಾರಿಗಳು ಆಯುಷ್ ಸಚಿವಾಲಯದ ಅಧಿಕಾರಿಗಳಿಗೆ ಮಾಹಿತಿ ನೀಡಿದರು.

ಯೋಗ ಪ್ರದರ್ಶನಕ್ಕೆ ಲಭ್ಯವಿರುವ ಸ್ಥಳಾ ವಕಾಶ, ಸಾಮೂಹಿಕ ಯೋಗ ಪ್ರದರ್ಶನ ಶಿಷ್ಠಾಚಾರ ನಿರ್ವಹಿಸಲು ಬೇಕಾದಂತಹ ವ್ಯವಸ್ಥೆ, ಡ್ರೋಣ್ ಕ್ಯಾಮರಾದಿಂದ ವಿಡಿಯೋ ಚಿತ್ರೀಕರಣ ಮಾಡಲು ಅನುಕೂಲ, ಆಂಬು ಲೆನ್ಸ್, ಅಗ್ನಿಶಾಮಕದಳ, ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿAದ ಭದ್ರತೆಗೆ ಸಂಬAಧಿಸಿ ದಂತೆ ಅಧಿಕಾರಿಗಳು, ಸಂಬAಧಪಟ್ಟ ಇಲಾಖೆಗಳ ಸ್ಥಳೀಯ ಅಧಿಕಾರಿಗಳಿಂದ ವಿವರ ಪಡೆದರು.

ಜೂ.೨೧ರಂದು ಬೆಳಗ್ಗೆ ೭ರಿಂದ ೮ಗಂಟೆ ವರೆಗೆ ಮೈಸೂರಿನಲ್ಲಿ ನಡೆಸಲು ಉದ್ದೇಶಿ ಸಿರುವ ಅಂತಾರಾಷ್ಟಿçÃಯ ಯೋಗ ದಿನಾಚರಣೆಯ ಪ್ರಧಾನ ಸಾಮೂಹಿಕ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಮೈಸೂರು ಸಂಸದ ಪ್ರತಾಪ್‌ಸಿಂಹ, ಉತ್ತರ ಕನ್ನಡ ಸಂಸದ ಅನಂತ ಕುಮಾರ್ ಹೆಗಡೆಯವರು ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಿ ರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದ ಆಯುಷ್ ಸಚಿವಾಲಯದ ಅಧಿಕಾರಿಗಳು ಇಂದು ಮೈಸೂರಿನಲ್ಲಿ ಸ್ಥಳ ಪರಿಶೀಲನೆ ನಡೆಸಿ ಅಗತ್ಯ ಮಾಹಿತಿ ಪಡೆದುಕೊಂಡರು.

ಅದಕ್ಕೂ ಮುನ್ನ ಅಧಿಕಾರಿಗಳು ಮೈಸೂರಿನ ಜಿಲ್ಲಾಧಿಕಾರಿ ಕಚೇರಿ ಸಭಾಂ ಗಣದಲ್ಲಿ ಸ್ಥಳೀಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಈ ಹಿಂದೆ ಕೊರೊನಾ ಪರಿಸ್ಥಿತಿಗೂ ಮುನ್ನ ಮೈಸೂರಿನ ರೇಸ್ ಕೋರ್ಸ್ ಮತ್ತು ಅರಮನೆ ಆವರಣದಲ್ಲಿ ನಡೆದ ಅಂತಾರಾಷ್ಟಿçÃಯ ಯೋಗ ದಿನಾಚರಣೆ ಸಾಮೂಹಿಕ ಯೋಗ ಪ್ರದರ್ಶನ, ಪಾಲ್ಗೊಂಡಿದ್ದ ಯೋಗಾ ಸಕ್ತರ ಸಂಖ್ಯೆ, ಭದ್ರತಾ ವ್ಯವಸ್ಥೆ, ಗಣ್ಯರು, ಅತೀ ಗಣ್ಯರಿಗೆ ಮಾಡಿದ್ದ ವ್ಯವಸ್ಥೆ ಮತ್ತಿತರ ವಿಷಯಗಳ ಕುರಿತು ಮೈಸೂರು ಅಧಿಕಾರಿಗಳು ಪವರ್ ಪಾಯಿಂಟ್ ಪ್ರಸೆಂಟೇಷನ್ ಮೂಲಕ ಆಯುಷ್ ಸಚಿವಾಲಯದ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿ ವಿವರಿಸಿದರು.

ನವದೆಹಲಿಯಲ್ಲಿ ಪ್ರಧಾನ ಮಂತ್ರಿಗಳ ಕಚೇರಿಯಿಂದ ನಿರ್ದೇಶನ ಬಂದ ನಂತರ ಮೈಸೂರಿನಲ್ಲಿ ಸಾಮೂಹಿಕ ಯೋಗ ಪ್ರದರ್ಶನಕ್ಕೆ ಸೂಕ್ತ ಸ್ಥಳ ನಿಗದಿ ಮಾಡ ಲಾಗುವುದು ಎಂದು ಮೂಲಗಳು ತಿಳಿಸಿವೆ.

ಒಂದು ವೇಳೆ ಪ್ರಧಾನ ಮಂತ್ರಿಗಳ ಮೈಸೂರು ಭೇಟಿ ನಿಗದಿಯಾದರೆ ಅತೀ ಹೆಚ್ಚು ಮಂದಿ ಪಾಲ್ಗೊಳ್ಳಲು ಅವಕಾಶವಿರುವ ೧೩೯.೩೦ ಎಕರೆ ವಿಸ್ತಾರದ ರೇಸ್ ಕೋರ್ಸ್ ಆವರಣವನ್ನು ಸಾಮೂಹಿಕ ಯೋಗ ಪ್ರದರ್ಶನಕ್ಕೆ ಅಂತಿಮಗೊಳಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.

Translate »