ಕುಡಿಯಲು ಹಣ ಕೊಡಲಿಲ್ಲವೆಂದು ತೂಕದ ಬಟ್ಟಿನಿಂದ ಜಜ್ಜಿ ತಂಗಿ ಮಗು ಕೊಂದ ನಿರ್ದಯಿ
ಮೈಸೂರು

ಕುಡಿಯಲು ಹಣ ಕೊಡಲಿಲ್ಲವೆಂದು ತೂಕದ ಬಟ್ಟಿನಿಂದ ಜಜ್ಜಿ ತಂಗಿ ಮಗು ಕೊಂದ ನಿರ್ದಯಿ

April 30, 2022

ಮೈಸೂರಿನ ಕನಕಗಿರಿಯಲ್ಲಿ ಅಮಾನುಷ ಕೃತ್ಯ, ಆರೋಪಿ ಪರಾರಿ
ಮೈಸೂರು, ಏ.೨೯(ಆರ್‌ಕೆ)- ವಿಕೃತ ಮನಸ್ಸಿನ ವ್ಯಕ್ತಿಯೊಬ್ಬ ಕುಡಿಯಲು ಹಣ ಕೊಡಲಿಲ್ಲವೆಂದು, ಕೋಪದಿಂದ ಮಲಗಿದ್ದ ತನ್ನ ತಂಗಿಯ ೮ ತಿಂಗಳ ಮಗುವನ್ನು ತೂಕದ ಬಟ್ಟಿನಿಂದ ಜಜ್ಜಿ ಕೊಲೆ ಮಾಡಿರುವ ಅಮಾನುಷ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೈಸೂರಿನ ಕನಕಗಿರಿಯ ಸರ್ಕಾರಿ ಶಾಲೆ ಸಮೀಪದ ನಿವಾಸಿ ರಾಜು(೩೩), ೮ ತಿಂಗಳ ಹೆಣ್ಣುಮಗುವನ್ನು ಕಬ್ಬಿಣದ ತೂಕದ ಬಟ್ಟಿನಿಂದ ಜಜ್ಜಿ ಕೊಲೆ ಮಾಡಿದ ಪಾಪಿ. ತರಕಾರಿ ಮಾರಿಕೊಂಡಿದ್ದ ಆತ ಕುಡಿತದ ಚಟಕ್ಕೆ ಬಲಿಯಾಗಿದ್ದು, ಅದಕ್ಕಾಗಿ ಹಣಕ್ಕೆ ತಂದೆ-ತಾಯಿಯನ್ನು ಪೀಡಿಸುತ್ತಿದ್ದ. ಹಣ ಕೊಡದಿದ್ದಾಗ ಹಲವು ಬಾರಿ ಮನೆಯವರ ಮೇಲೂ ಹಲ್ಲೆ ನಡೆಸಿದ್ದಲ್ಲದೇ ಇದೇ ವಿಷಯಕ್ಕೆ ಪ್ರತೀದಿನ ರಂಪಾಟ ಮಾಡುತ್ತಿದ್ದ.
ಇಂದು ಮಧ್ಯಾಹ್ನ ಮನೆಗೆ ಬಂದ ರಾಜು ಜಗಳ ತೆಗೆದು ಹಣಕ್ಕೆ ಒತ್ತಾಯಿಸಿ ಮತ್ತದೇ ರೌದ್ರಾವತಾರ ತಾಳಿದ್ದರಿಂದ ಹೆದರಿ ತಂಗಿ ರಮ್ಯ ಹಾಗೂ ಮನೆಯವರೆಲ್ಲರೂ ಹೊರಗೆ ಬಂದಿದ್ದಾರೆ. ರೋಷದಿಂದ ಕುದಿಯುತ್ತಿದ್ದ ಆತ ಹಣ ಸಿಗದಿದ್ದಾಗ ತೂಕದ ಬಟ್ಟಿನಿಂದ ಕೊಠಡಿಯಲ್ಲಿ ಮಲಗಿದ್ದ ಕಂದಮ್ಮನ ಹಣೆ ಭಾಗಕ್ಕೆ ಜಜ್ಜಿ ಪರಾರಿಯಾಗಿದ್ದಾನೆ
ಮಗು ಸ್ಥಳದಲ್ಲೇ ಅಸುನೀಗಿದೆ. ಕಂದಮ್ಮ ಸಾವನ್ನಪ್ಪಿದ್ದನ್ನು ಕಂಡ ತಾಯಿ ರಮ್ಯ, ಅಜ್ಜಿ, ತಾತನ ರೋಧನೆ ಮುಗಿಲುಮುಟ್ಟಿತ್ತು. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ವಿದ್ಯಾರಣ್ಯಪುರಂ ಠಾಣೆ ಇನ್ಸ್ಪೆಕ್ಟರ್ ರಾಜು ಹಾಗೂ ಸಿಬ್ಬಂದಿ ಮಹಜರು ನಡೆಸಿ ಪ್ರಕರಣ ದಾಖಲಿಸಿಕೊಂಡು ತಲೆಮರೆಸಿಕೊಂಡಿರುವ ರಾಜುಗೆ ಶೋಧ ನಡೆಸುತ್ತಿದ್ದಾರೆ.

ಮಗು ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ತಂದೆ ನಾಗೇಂದ್ರ, ಸಂಬAಧಿಗಳು, ನೆÀರೆಹೊರೆಯವರೆಲ್ಲರೂ ಹಸುಗೂಸಿನ ಶವ ಕಂಡು ಮಮ್ಮಲ ಮರುಗಿ, ಕಣ ್ಣÃರು ಸುರಿಸಿದರು. ಕಳೆದ ಒಂದೂವರೆ ವರ್ಷದ ಹಿಂದಷ್ಟೇ ರಮ್ಯರನ್ನು ಮಂಡ್ಯ ತಾಲೂಕು ಸಾತನೂರಿನ ನಾಗೇಂದ್ರ ಎಂಬುವರಿಗೆ ಕೊಟ್ಟು ಮದುವೆ ಮಾಡಲಾಗಿತ್ತು.

ಬಾಣಂತನಕ್ಕೆAದು ರಮ್ಯ ತಾಯಿ ಮನೆಗೆ ಬಂದಿದ್ದರು. ಪಾಪಿ ಸೋದರನೇ ತನ್ನ ಕಂದನನ್ನು ಕೊಂದಿದ್ದರಿAದ ಆಘಾತಕ್ಕೀಡಾಗಿ ಆಕೆಯ ರೋಧನೆ ಮುಗಿಲು ಮುಟ್ಟಿತ್ತು.

Translate »