ಗಣ್ಯರಿಗೆ ಡಾ.ರಾಜ್ ಭಾವೈಕ್ಯತಾ ಪ್ರಶಸ್ತಿ ಪ್ರದಾನ
ಮೈಸೂರು

ಗಣ್ಯರಿಗೆ ಡಾ.ರಾಜ್ ಭಾವೈಕ್ಯತಾ ಪ್ರಶಸ್ತಿ ಪ್ರದಾನ

April 30, 2022

ಮೈಸೂರು, ಏ.೨೯(ಜಿಎ)- ಮೈಸೂರು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಸ್ನೇಹ ಸಿಂಚನ ಟ್ರಸ್ಟ್ ಸಹಯೋಗದಲ್ಲಿ ವಿಜಯನಗರದ ಸಾಹಿತ್ಯ ಭವನದಲ್ಲಿ ಶುಕ್ರ ವಾರ ಸಂಜೆ ಡಾ.ರಾಜ್ ಭಾವೈಕ್ಯತಾ ಪ್ರಶಸ್ತಿ ಪ್ರದಾನ ಮತ್ತು ಡಾ.ರಾಜ್ ಚಲನಚಿತ್ರಗಳ ರಸಮಂಜರಿ ಕಾರ್ಯಕ್ರಮ ನಡೆಯಿತು.

ಸಮಾಜ ಸೇವಕ ಡಾ.ಕೆ.ರಘುರಾಮ್ ವಾಜಪೇಯಿ, ಬ್ರಾಹ್ಮಣ ಮಹಾಸಭಾದ ಡಾ.ಬಿ.ಆರ್.ನಟರಾಜಜೋಯಿಸ್, ಡಾ.ಕೆ.ಕೃಷ್ಣಮೂರ್ತಿ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಕೆ.ಲೀಲಾ ಪ್ರಕಾಶ್, ಕುಟುಂಬ ಸಲಹಾ ಕೇಂದ್ರದ ಅಧ್ಯಕ್ಷೆ ಡಾ.ಮಂಜುಳಾ ಉಮೇಶ್ ಮತ್ತು ಪೊಲೀಸ್ ಅಧಿಕಾರಿ ರವಿಶಂಕರ್ ಅವರಿಗೆ ಡಾ.ರಾಜ್ ಭಾವೈಕ್ಯತಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ನಂತರ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಮಾತನಾಡಿ, ಮೂಡಿಗೆರೆ ಬಳಿ ೧೯೭೧ರ ಸಮಯದಲ್ಲಿ ಬಂಗಾರದ ಮನುಷ್ಯ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಅದನ್ನು ನೋಡಲು ವಿದ್ಯಾರ್ಥಿಗಳೂ ಸಹ ನೆರೆದಿದ್ದರು. ಇದನ್ನು ಗಮನಿಸಿದ ಡಾ.ರಾಜ್ ಅವರು, ಆ ಮಕ್ಕಳನ್ನು ಕರೆದು ಶೂಟಿಂಗ್ ಅನ್ನು ನೋಡಲು ಇಲ್ಲಿಗೆ ಬರಬೇಡಿ. ಈಗ ಶಾಲೆ-ಕಾಲೇಜಿಗೆ ಹೋಗಿ ಅಭ್ಯಾಸ ಮಾಡಿ. ಕಲಿಕೆಗೆ ಗೈರಾರುವುದು ಸರಿಯಲ್ಲ. ನನ್ನೊಂದಿಗೆ ಮಾತನಾಡಬೇಕು ಎಂದರೆ, ಇನ್ನೂ ೧೫ ದಿನಗಳ ಕಾಲ ಇಲ್ಲಿಯೇ ಸಮೀಪದಲ್ಲಿರುವ ಲಾಡ್ಜ್ನಲ್ಲಿರುವೆ. ರಾತ್ರಿ ೧೨ರ ವರೆಗೆ ಆದರೂ ಪರವಾಗಿಲ್ಲ. ಅಲ್ಲಿಗೆ ಬಂದು ನನ್ನನ್ನು ಕಾಣಬಹುದು ಎಂದು ವಿದ್ಯಾರ್ಥಿಗಳಿಗೆ ಬುದ್ಧಿಮಾತು ಹೇಳಿ ಕಳುಹಿಸಿದ್ದರು. ಇದು ಅವರ ಶೈಕ್ಷಣ ಕ ಕಾಳಜಿಗೆ ಸಾಕ್ಷಿಯಾಗಿತ್ತು ಎಂದು ರಾಜ್‌ಕುಮಾರ್ ಅವರನ್ನು ಸ್ಮರಿಸಿದರು.

ಡಾ.ರಾಜ್ ಚಿತ್ರಗಳಿಂದ ಅನೇಕ ವ್ಯಕ್ತಿಗಳ ಜೀವನ ಶೈಲಿ ಬದಲಾಗಿದೆ. ಕಸ್ತೂರಿ ನಿವಾಸ, ಬಂಗಾರ ಮನುಷ್ಯ ಇನ್ನಿತರ ಚಿತ್ರಗಳು ಜನಸಾಮಾನ್ಯರ ಮೇಲೆ ಹೆಚ್ಚಿನ ಪರಿಣಾಮ ಬೀರಿದ್ದವು. ಅವರು ಕೇವಲ ಅಭಿನಯಕ್ಕೆ ಅಷ್ಟೇ ಸೀಮಿತವಾದವರಲ್ಲ. ನಾಡು-ನುಡಿ-ನೆಲ-ಜಲದ ಹಿತಾಸಕ್ತಿ ಕಾಪಾಡಲು ಬೀದಿಗಿಳಿದು ಹೋರಾಟದ ಮೇರು ಕಲಾವಿದರು. ಈ ರೀತಿಯ ಮತ್ತೊಮ್ಮೆ ನಟ ಎಲ್ಲೂ ಸಿಗುವುದಿಲ್ಲ ಎಂದರು.

ಡಾ.ರಾಜ್‌ಕುಮಾರ್ ಹೆಸರಿನಲ್ಲಿ ಅಂದಾಜು ೧,೨೮೦ ಸಂಘಗಳಿವೆ. ೧೫೦ ಕೃತಿಗಳು ಬಂದಿವೆ. ಅವರಿಗೆ ನಾಲ್ಕು ವಿಶ್ವವಿದ್ಯಾ ಲಯಗಳು ಗೌರವ ಡಾಕ್ಟರೇಟ್ ಕೊಟ್ಟಿವೆ. ಇದು ನಿಜಕ್ಕೂ ದಾಖಲೆಯೇ ಸರಿ. ದೇಶದ ಯಾವುದೇ ಕಲಾವಿದನಿಗೂ ಸಿಗದಷ್ಟು ಸನ್ಮಾನ, ಗೌರವ ಇವರಿಗೆ ದೊರೆತಿರುವುದಕ್ಕೆ ಇದು ನಿದರ್ಶನ. ನೇತ್ರದಾನ ಮಾಡಿ ಬಹಳಷ್ಟು ಜನರಿಗೆ ಸ್ಫೂರ್ತಿಯಾದರು. ಇದರ ಫಲವಾಗಿ ಅಂದಾಜು ಸಾವಿರಾರು ರಾಜ್ ಅವರ ಅಭಿಮಾನಿಗಳು ನೇತ್ರದಾನ ಮಾಡಿ ಅಂಧರ ಬಾಳಿಗೆ ಬೆಳಕಾಗಿದ್ದಾರೆ ಎಂದರು.

ಇದಕ್ಕೂ ಮುನ್ನ ವಿದುಷಿ ಆರ್.ಸಿ. ರಾಜಲಕ್ಷಿö್ಮ ಅವರು ಪ್ರಾರ್ಥಿಸಿದರಲ್ಲದೆ, ಸುಮಧುರ ಗೀತೆಗಳನ್ನು ಹಾಡಿ ಎಲ್ಲರ ಗಮನ ಸೆಳೆದರು. ವಿದ್ಯಾರ್ಥಿನಿ ಸುಶ್ಮಿತಾ ಸುಖೀಭವ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ರಾಜ್ ಚಲನಚಿತ್ರಗಳ ರಸ ಮಂಜರಿ ನಡೆಯಿತು. ದೀಪಕ್‌ಗೌಡ, ಶ್ರೀನಿವಾಸ್(ಸೀನು), ರಾಜೇಶ್ವರಿ, ಸಿಂಚನ, ಅನಂತ್ ದೀಕ್ಷಿತ್, ಸಿz್ದೆÃಶ್, ಮಂಜೇಶ್ ನಂಜನಗೂಡು, ರೇಣುಕಾ, ಪ್ರಭಾ ಇನ್ನಿತ ರರು ಮಧುರ ಗೀತೆಗಳನ್ನು ಹಾಡಿ ನೆರೆದ ವರನ್ನು ರಂಜಿಸಿದರು. ಲೇಖಕಿ ಡಾ.ಪುಷ್ಪಾ ಅಯ್ಯಂಗಾರ್, ಟ್ರಸ್ಟ್ನ ಅಧ್ಯಕ್ಷೆ ಮ.ನ. ಲತಾ ಮೋಹನ್ ಇನ್ನಿತರರು ಪಾಲ್ಗೊಂಡಿದ್ದರು.

Translate »