ಮೈಸೂರು: ಮೈಸೂರಿನ ಮೃಗಾಲಯದ ಆವರಣ ದಲ್ಲಿ ಬೃಹತ್ ಅಕ್ವೇರಿಯಂ ನಿರ್ಮಿ ಸುವುದಕ್ಕೆ ಸಂಬಂಧಿಸಿದಂತೆ ನ್ಯೂಜಿ ಲೆಂಡ್ ತಂತ್ರಜ್ಞರು ತಯಾರಿಸುವ ನಕ್ಷೆ ಯನ್ನು ಮೈಸೂರಿನ ಸಂಸ್ಥೆಯೊಂದು ಮೃಗಾಲಯ ಪ್ರಾಧಿಕಾರಕ್ಕೆ ಸಲ್ಲಿಸಿದೆ.
ಸಾಂಸ್ಕøತಿಕ ನಗರಿ ಮೈಸೂರಿಗೆ ಬರುವ ಪ್ರವಾಸಿಗರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕ ರ್ಷಿಸುವ ನಿಟ್ಟಿನಲ್ಲಿ ಮೈಸೂರು ನಗರ ಪಾಲಿಕೆ ಮೃಗಾಲಯ ಹಾಗೂ ಕಾರಂಜಿ ಕೆರೆ ನಡುವೆ ಬೃಹತ್ ಗಾತ್ರದ ಮತ್ಸ್ಯಾ ಗಾರ(ಅಕ್ವೇರಿಯಂ)ದ ಕಾಮಗಾರಿ ಯನ್ನು ಆರಂಭಿಸಿ ಅನುದಾನದ ಕೊರತೆ ಯಿಂದ ಅರ್ಧಕ್ಕೆ ಮೊಟಕುಗೊಳಿಸಿತ್ತು. 4.26 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸ ಲಾಗಿದ್ದ ಅಕ್ವೇರಿಯಂ ಕಟ್ಟಡ ಕಳೆದ 4 ವರ್ಷದಿಂದ ಪಾಳುಬಿದ್ದಿದ್ದರಿಂದ ಅನೈತಿಕ ಚಟುವಟಿಕೆಯ ತಾಣವಾಗಿ ಮಾರ್ಪ ಟ್ಟಿತ್ತು. ಈ ಹಿನ್ನೆಲೆಯಲ್ಲಿ ಜು.1ರಂದು ಅಕ್ವೇರಿಯಂ ಕಟ್ಟಡವನ್ನು ಪರಿಶೀಲಿಸಿದ್ದ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್, ಪಾಲಿಕೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಅಕ್ವೇರಿಯಂ ಕಟ್ಟಡದ ಉಳಿದ ಕಾಮ ಗಾರಿಯನ್ನು ಪೂರ್ಣಗೊಳಿಸುವುದ ಕ್ಕಾಗಿ ಮೃಗಾಲಯಕ್ಕೆ ಹಸ್ತಾಂತರ ಮಾಡು ವಂತೆ ಸೂಚಿಸಿದ್ದರು.
ವಶಕ್ಕೆ ಪಡೆದ ಮೃಗಾಲಯ: ಸಚಿವ ಸಾ.ರಾ.ಮಹೇಶ್ ಅವರ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ್ದ ನಗರಪಾಲಿಕೆ ಆಯುಕ್ತ ಕೆ.ಹೆಚ್.ಜಗದೀಶ್ ಅವರು 2014ರ ಡಿಸೆಂಬರ್ 29ರಂದು ಅಂದಿನ ಮೇಯರ್ ಅಧ್ಯಕ್ಷತೆಯಲ್ಲಿ ನಡೆದಿದ್ದ ಸಭೆಯ ನಡಾವಳಿಯನ್ನು ಪರಿಶೀಲಿಸಿ ಮೃಗಾಲಯಕ್ಕೆ ಅಕ್ವೇರಿಯಂ ಕಟ್ಟಡದ ದಾಖಲೆಗಳನ್ನು ನೀಡುವುದರೊಂದಿಗೆ ಕಾಮಗಾರಿ ಪೂರ್ಣ ಗೊಳಿಸುವಂತೆ ಕೋರಿದ್ದಾರೆ.
ಒಪ್ಪಂದದಲ್ಲಿ ಏನಿದೆ: ನಗರಪಾಲಿಕೆ ಮೃಗಾ ಲಯಕ್ಕೆ ಸೇರಿದ ಸ್ಥಳದಲ್ಲಿ 4.26 ಕೋಟಿ ರೂ. ವೆಚ್ಚದಲ್ಲಿ ಆರು ಸಾವಿರ ಚದರ ಅಡಿ ವಿಸ್ತೀರ್ಣದಲ್ಲಿ ಅಕ್ವೇರಿಯಂ ಕಟ್ಟಡ ನಿರ್ಮಿ ಸಿದೆ. 2ನೇ ಹಂತ ಕಾಮಗಾರಿ ಪೂರ್ಣ ಗೊಳಿಸಲು ಇನ್ನಷ್ಟು ಅನುದಾನದ ಅವಶ್ಯ ಕತೆಯಿದೆ. ಸುಮಾರು 28 ಕೋಟಿ ರೂ. ಗಳ ಯೋಜನೆಯಾದ ಅಕ್ವೇರಿಯಂ ಕಾಮ ಗಾರಿಯನ್ನು ಪೂರ್ಣಗೊಳಿಸಲು ಮೃಗಾ ಲಯ ಮುಂದಾಗಿದೆ. ಕಾಮಗಾರಿ ಪೂರ್ಣ ಗೊಂಡ ಬಳಿಕ ವೆಚ್ಚ ಕಳೆದು, ಮೊದಲ 5 ವರ್ಷ ಬರುವ ಆದಾಯದಲ್ಲಿ ಮೃಗಾ ಲಯಕ್ಕೆ ಶೇ.70ರಷ್ಟು ಹಾಗೂ ನಗರ ಪಾಲಿಕೆಗೆ ಶೇ.30ರಷ್ಟು ಹಂಚಿಕೆ ಮಾಡಲು ಒಪ್ಪಂದ ಮಾಡಿಕೊಳ್ಳಲಾಗಿದೆ. 5 ವರ್ಷಗಳ ನಂತರ ಅಕ್ವೇರಿಯಂನಿಂದ ಬರುವ ಆದಾಯಕ್ಕೆ ತಕ್ಕಂತೆ ಹಂಚಿಕೆ ಮಾಡುವುದಕ್ಕೆ ಒಪ್ಪಂದ ದಲ್ಲಿ ಉಲ್ಲೇಖಿಸಲಾಗಿದೆ.
ವಶಕ್ಕೆ ಪಡೆದ ಮೃಗಾಲಯ: ಮೈಸೂರು ನಗರಪಾಲಿಕೆ ದಾಖಲೆಗಳನ್ನು ಹಸ್ತಾಂತರ ಮಾಡಿದ ಬಳಿಕ ಮೃಗಾಲಯ ಪಾಳು ಕೊಂಪೆ ಯಂತಾಗಿದ್ದ ಅಕ್ವೇರಿಯಂ ಕಟ್ಟಡವನ್ನು ವಶಕ್ಕೆ ಪಡೆದಿತ್ತು. ಕಟ್ಟಡದಲ್ಲಿ ನಾಲ್ಕೈದು ವರ್ಷಗಳಿಂದ ಬಿದ್ದಿದ್ದ ಕಸ, ನಿರುಪಯುಕ್ತ ವಸ್ತುಗಳನ್ನು ತೆಗೆದು ಹಾಕಿ ಬಣ್ಣ ಬಳಿದಿತ್ತು. ಅಲ್ಲದೆ ಮೃಗಾಲಯದಿಂದ ಕಾರಂಜಿಕೆರೆಗೆ ಅಕ್ವೇರಿಯಂ ಕಟ್ಟಡದ ಮೂಲಕ ಸಂಪರ್ಕ ಮಾರ್ಗವನ್ನು ನಿರ್ಮಿಸಿದೆ. ಇದೀಗ ಅಕ್ವೇ ರಿಯಂ ಸ್ಥಾಪನೆ ಪ್ರಕ್ರಿಯೆ ಆರಂಭಿಸಲಾಗಿದೆ.
ನ್ಯೂಜಿಲ್ಯಾಂಡ್ ತಂತ್ರಜ್ಞರಿಂದ ನಕ್ಷೆ: ಮೈಸೂರಿನ ಖಾಸಗಿ ಸಂಸ್ಥೆಯೊಂದು ಅಕ್ವೇ ರಿಯಂ ನಿರ್ಮಾಣಕ್ಕೆ ನ್ಯೂಜಿಲೆಂಡ್ ಪರಿ ಣಿತರಿಂದ ನಕ್ಷೆಯೊಂದನ್ನು ತಯಾರಿಸಿ ಮೃಗಾ ಲಯದ ಪ್ರಾಧಿಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅಕ್ವೇರಿಯಂ ನಿರ್ಮಾಣಕ್ಕೆ ಟೆಂಡರ್ ಪ್ರಕ್ರಿಯೆ ನಡೆಸುವುದಕ್ಕೆ ಮೃಗಾಲಯ ಸಿದ್ಧತೆ ಮಾಡಿ ಕೊಳ್ಳುತ್ತಿದೆ. ಇದರಿಂದ ಖಾಸಗಿ ಸಂಸ್ಥೆ ಸಲ್ಲಿಸಿ ರುವ ಪ್ರಸ್ತಾವನೆಯನ್ನು ಪ್ರಾಧಿಕಾರದ ಸಭೆ ಯಲ್ಲಿಟ್ಟು ಅದರ ಸಾಧಕ-ಬಾಧಕವನ್ನು ಚರ್ಚಿಸಲಾಗುತ್ತದೆ.