ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಸುತ್ತಲಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರತಿಪಾದನೆ
ಮೈಸೂರು

ಪಾಂಡವಪುರ ತಾಲೂಕಿನ ಬೇಬಿ ಬೆಟ್ಟದ ಸುತ್ತಲಿನ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಪ್ರತಿಪಾದನೆ

July 27, 2022

ಮೈಸೂರು,ಜು.26(ಆರ್‍ಕೆ)- ‘ಟ್ರಯಲ್ ಬ್ಲಾಸ್ಟ್’ ಮಾಡಬೇಕೆಂದು ಹೇಳುತ್ತಿರುವ ಮಂಡ್ಯ ಜಿಲ್ಲೆ, ಪಾಂಡವಪುರ ತಾಲೂ ಕಿನ ಬೇಬಿ ಬೆಟ್ಟದ ಸುತ್ತಲಿನ 1,623 ಎಕರೆ ಪ್ರದೇಶವು ನಮ್ಮ ಖಾಸಗಿ ಆಸ್ತಿ ಎಂದು ಮೈಸೂರು ರಾಜವಂಶಸ್ಥೆ ಪ್ರಮೋದಾ ದೇವಿ ಒಡೆಯರ್ ಪ್ರತಿಪಾದಿಸಿದ್ದಾರೆ.

ಬೇಬಿ ಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್ ನಡೆಸುವ ಕುರಿತಂತೆ ಉಂಟಾಗಿರುವ ಪರ-ವಿರೋಧದ ಹಿನ್ನೆಲೆಯಲ್ಲಿ ಇಂದು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿರುವ ಅವರು, ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡ ಬೇಕೆಂದಾಗ ಸರ್ಕಾರದವರು ನಮ್ಮ ಅನುಮತಿ ಪಡೆಯಬೇಕಿತ್ತು ಎಂದರು.

ಈ ಬಗ್ಗೆ ಸೋಮವಾರವೇ ವಕೀಲರ ಮೂಲಕ ಮಂಡ್ಯ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಟ್ರಯಲ್ ಬ್ಲಾಸ್ಟ್‍ಗೆ ಆಕ್ಷೇಪ ವ್ಯಕ್ತಪಡಿಸಿದ್ದೇವೆ. ಬೇಬಿ ಬೆಟ್ಟದಲ್ಲೇ ಟ್ರಯಲ್ ಬ್ಲಾಸ್ಟ್ ಮಾಡಬೇಕೆಂದೇನಿಲ್ಲ, ಇನ್ನೂ ದೂರದಲ್ಲಿ ಪ್ರಯೋಗ ನಡೆಸಬಹುದು. ವಿಜ್ಞಾನಿಗಳಾದ ಅವರಿಗೆ ಆ ತಿಳಿವಳಿಕೆ ಇದ್ದೇ ಇರುತ್ತದೆ ಎಂದು ತಿಳಿಸಿದರು.

ನಮ್ಮ ಕುಟುಂಬಕ್ಕೆ ಸರ್ಕಾರ ಏಕೆ ಹೀಗೆ ಹಿಂಸೆ ಕೊಡುತ್ತಿದೆಯೋ ಗೊತ್ತಿಲ್ಲ. ಈ ಹಿಂದೆ 1950ರಲ್ಲಿ ಭಾರತ ಸರ್ಕಾರ ಮತ್ತು ರಾಜ ಮನೆತನದವರ ನಡುವೆ ಒಪ್ಪಂದ ಮಾಡಿಕೊಳ್ಳಲಾಗಿತ್ತು.

ರಾಜಮನೆತನಕ್ಕೆ ಒಂದಷ್ಟು ಖಾಸಗಿ ಆಸ್ತಿಗಳನ್ನು ಪಟ್ಟಿ ಮಾಡಿ ಉಳಿದಿದ್ದನ್ನು ದೇಶ ದೊಂದಿಗೆ ವಿಲೀನ ಮಾಡಿದ್ದಾರೆ. ಅದರ ಮುಂದುವರಿದ ಭಾಗವಾಗಿ 1951ರಲ್ಲಿ ಖಾಸಗಿ ಆಸ್ತಿಗಳ ಪಟ್ಟಿಯನ್ನು ಸರ್ಕಾರಿ ಆಸ್ತಿಗಳ ಪಟ್ಟಿಯನ್ನು, ಸರ್ಕಾರಿ ಆದೇ ಶದ ಮೂಲಕ ಖಚಿತಪಡಿಸಲಾಗಿದೆ ಎಂದ ಪ್ರಮೋದಾದೇವಿ ಒಡೆಯರ್, ಯಾವುದು ನಮ್ಮ ಆಸ್ತಿ, ಯಾವುದು ಸರ್ಕಾರಿ ಆಸ್ತಿ ಎಂಬುದು ಅಲ್ಲಿಂದ ಇಲ್ಲಿವರೆಗೆ ಅಧಿಕಾರ ನಡೆಸುವ ಎಲ್ಲರಿಗೂ ಗೊತ್ತಿದೆ ಎಂದು ಮಾರ್ಮಿಕವಾಗಿ ನುಡಿದರು.

ಬೇಬಿ ಬೆಟ್ಟದ ಸುತ್ತಲಿನ 1,623 ಎಕರೆ ನಮ್ಮ ಆಸ್ತಿಯಾಗಿದ್ದು, ಅಲ್ಲಿರುವ ಹಳೇ ಈಶ್ವರ ದೇವಸ್ಥಾನದಲ್ಲಿ ಪ್ರತೀ ವರ್ಷ ನಾವು ಗ್ರಾಮಸ್ಥರೊಡಗೂಡಿ ವಿಶೇಷ ಪೂಜೆ ಸಲ್ಲಿಸಿ ಹಬ್ಬ ಮಾಡುತ್ತೇವೆ. ಅಧಿಕಾರಿಗಳು ಅದನ್ನು ‘ಬಿ’ ಖರಾಬು ಎಂದು ಘೋಷಿಸಿ ದ್ದಾರೆ. ಅದರ ಪರಿಣಾಮ ಅಲ್ಲಿ ಗಣಿಗಾರಿಕೆ ಚಟುವಟಿಕೆಗಳು ನಡೆಯುತ್ತಿದ್ದವು. ಈಗ ಅದೇ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡಲು ಹೊರಟಿದ್ದಾರೆ. ನಮ್ಮ ಜಾಗದಲ್ಲಿ ಟ್ರಯಲ್ ಬ್ಲಾಸ್ಟ್ ಮಾಡುವಾಗ ಕನಿಷ್ಠ ನಮ್ಮ ಅನುಮತಿ ಪಡೆಯಬೇಕಿತ್ತು. ಎಲ್ಲಾ ಗೊತ್ತಿದ್ದೂ ಉದ್ದೇಶಪೂರ್ವಕವಾಗಿ ಗೊಂದಲ ಸೃಷ್ಟಿ ಸುತ್ತಿದ್ದಾರೆ ಎಂದು ನುಡಿದರು.ಎಲ್ಲಿ ಬ್ಲಾಸ್ಟ್ ಮಾಡಿದರೆ ಎಷ್ಟು ದೂರದವರೆಗೆ ಅದರ ಪರಿಣಾಮ ಉಂಟಾಗು ತ್ತದೆ ಎಂಬುದು ವಿಜ್ಞಾನಿಗಳಿಗೆ ಗೊತ್ತಿರುತ್ತದೆ. ಒಂದು ವೇಳೆ ಪ್ರಯೋಗ ಮಾಡಲೇ ಬೇಕೆಂದಾದರೆ ಬೇರೆ ಸರ್ಕಾರಿ ಜಾಗದಲ್ಲಿ ಮಾಡಿ ಎಂದು ಮಂಡ್ಯ ಜಿಲ್ಲಾಧಿಕಾರಿ ಗಳಿಗೆ ಪತ್ರ ಮುಖೇನ ತಿಳಿಸಿದ್ದೇನೆ ಎಂದು ತಿಳಿಸಿದರು. ಬೇಬಿ ಬೆಟ್ಟದಲ್ಲೇ ಟ್ರಯಲ್ ಬ್ಲಾಸ್ಟ್ ಮಾಡಬೇಕೆಂದೇನೂ ಇಲ್ಲ. ವಿಜ್ಞಾನ ಎಲ್ಲಾ ಕಡೆಗೂ ಒಂದೇ. ಆದ್ದರಿಂದ ಬೇರೆ ಪ್ರದೇಶದಲ್ಲೂ ಪ್ರಯೋಗ ನಡೆಸಬಹುದು. ನಾನು ಪರ ಅಥವಾ ವಿರೋಧ ಎಂದು ಹೇಳುತ್ತಿಲ್ಲ. ಬೇಬಿ ಬೆಟ್ಟ ನಮ್ಮ ಖಾಸಗಿ ಆಸ್ತಿ ಎಂಬುದಷ್ಟೇ ನಮ್ಮ ವಾದ ಎಂದ ಅವರು, ಮುಂದೆ ಅದನ್ನು ನಮ್ಮ ಹೆಸ ರಿಗೆ ಖಾತೆ ಮಾಡಿಕೊಟ್ಟರೆ ಗಣಿಗಾರಿಕೆ ನಡೆಯುವ ಪ್ರಶ್ನೆಯೇ ಬರುವುದಿಲ್ಲ. ಗಣಿಗಾರಿಕೆ ಮಾಡಲು ಅಲ್ಲಿ ಈಗ ಏನೂ ಉಳಿದಿಲ್ಲ ಎಂದು ನುಡಿದರು. ಟ್ರಯಲ್ ಬ್ಲಾಸ್ಟ್‍ಗೆ ಹಲವರು ವಿರೋ ಧಿಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ನಾನು ಹೋಗುವುದಿಲ್ಲ. ನಾನು ಮಧ್ಯಕ್ಕೆ ಹೋಗು ವುದರಿಂದ ಏನೇನೋ ಆಗ ಬಹುದು. ಅದ್ಯಾವುದೂ ನನಗೆ ಬೇಕಾ ಗಿಲ್ಲ. ಸರ್ಕಾರ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ವಹಿಸಬೇಕು ಎಂದು ರಾಜವಂಶಸ್ಥೆ ಪ್ರಮೋದಾ ಒಡೆಯರ್ ನುಡಿದರು.

Translate »