ಚಾಮುಂಡಿಬೆಟ್ಟ ಒತ್ತುವರಿ ತಡೆಗೆ ಸುತ್ತಲೂ ಬೇಲಿ ಹಾಕಲು ಸಂಸದ ಪ್ರತಾಪ್‌ಸಿಂಹ ಸೂಚನೆ
ಮೈಸೂರು

ಚಾಮುಂಡಿಬೆಟ್ಟ ಒತ್ತುವರಿ ತಡೆಗೆ ಸುತ್ತಲೂ ಬೇಲಿ ಹಾಕಲು ಸಂಸದ ಪ್ರತಾಪ್‌ಸಿಂಹ ಸೂಚನೆ

February 26, 2022

ಮೈಸೂರು, ಫೆ.೨೫(ಆರ್‌ಕೆಬಿ)- ಚಾಮುಂಡಿ ಬೆಟ್ಟದ ಒತ್ತುವರಿ ತೆರವು, ಬೆಟ್ಟದ ಮೆಟ್ಟಿಲುಗಳ ಅಭಿವೃದ್ಧಿ, ಜನೌಷಧ ಕೇಂದ್ರ ತೆರೆಯುವುದು, ಕಸ ಹಾಕುವವರಿಗೆ ದಂಡ ವಿಧಿಸುವುದು, ಜಲಜೀವನ್ ಮಿಷನ್ ಯೋಜನೆ ಸೇರಿದಂತೆ ವಿವಿಧ ವಿಷಯಗಳ ಕುರಿತು ಶುಕ್ರವಾರ ಸಂಸದ ಪ್ರತಾಪ್‌ಸಿಂಹ ಅಧ್ಯಕ್ಷತೆಯಲ್ಲಿ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ೨೦೨೧-೨೨ನೇ ಸಾಲಿನ ತ್ರೆöÊಮಾಸಿಕ ಜಿಲ್ಲಾ ಅಭಿವೃದ್ಧಿ ಸಮನ್ವಯ ಹಾಗೂ ಉಸ್ತುವಾರಿ ಸಮಿತಿ (ದಿಶಾ ಸಮಿತಿ) ಸಭೆಯಲ್ಲಿ ಚರ್ಚಿಸಲಾಯಿತು.

ಈ ವೇಳೆ ಮಾತನಾಡಿದ ಸಂಸದರು, ಚಾಮುಂಡಿ ಬೆಟ್ಟದ ಒತ್ತುವರಿ ತಡೆಗೆ ಬೆಟ್ಟದ ಸುತ್ತಲೂ ಬೇಲಿ ಹಾಕುವ ಬಗ್ಗೆ ಸರ್ವೆ ನಡೆಸಿ, ಹದ್ದು ಬಸ್ತು ಮಾಡ ಬೇಕು. ಎಂ-ನರೇಗಾ ಯೋಜನೆಯಡಿ ಜಲ ಮರುಪೂರಣ ಕೆಲಸ ಕೈಗೊಳ್ಳುವಂತೆ ಅಧಿಕಾರಿ ಗಳಿಗೆ ಸೂಚನೆ ನೀಡಿದರು. ಈ ವೇಳೆ ಡಿಸಿಎಫ್ ಕಮಲಾ ಕರಿಕಾಳನ್ ಪ್ರತಿಕ್ರಿಯೆ ನೀಡಿ, ಈಗಾಗಲೇ ಬೆಟ್ಟದ ಕೆಲವೆಡೆ ಇಂಗುಗುAಡಿ ನಿರ್ಮಾಣ ಮಾಡಲಾಗಿದ್ದು, ಮುಂದೆ ಯೋಜನೆ ಸಿದ್ದಪಡಿಸಿ ಮತ್ತಷ್ಟು ನಿರ್ಮಿಸಲಾಗುವುದು ಎಂದು ಹೇಳಿದರು.

ಆಗ ಮಧ್ಯ ಪ್ರವೇಶಿಸಿದ ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್, ಸಾಮೂಹಿಕವಾಗಿ ಇಂಗುಗುAಡಿ ಮಾಡುವ ಬದಲಿಗೆ ಸಣ್ಣ ನೀರಾವರಿ ಇಲಾಖೆ, ಕೃಷಿ ಇಲಾಖೆ ಹಾಗೂ ನರೇಗಾ ಅಧಿಕಾರಿಗಳ ಸಲಹೆ ಪಡೆದು ವೈಜ್ಞಾನಿಕ ರೀತಿಯಲ್ಲಿ ನಿರ್ಮಿಸಿದರೆ ಹೆಚ್ಚು ಅನುಕೂಲವಾಗಲಿದೆ ಎಂದು ಸಲಹೆ ನೀಡಿದರು.

ಫ್ಲೆಕ್ಸ್ ಹಾವಳಿ ವಿರುದ್ಧ ಸಂಸದ ಕಿಡಿ: ಮೈಸೂರಿ ನಲ್ಲಿ ಫ್ಲೆಕ್ಸ್ ಹಾವಳಿ ಕುರಿತು ಪ್ರಸ್ತಾಪಿಸಿದ ಪ್ರತಾಪ್ ಸಿಂಹ, ಫ್ಲೆಕ್ಸ್ ಹಾವಳಿ ಮತ್ತೆ ಶುರುವಾಗಿದ್ದು, ರಿಂಗ್ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಈ ಕೆಟ್ಟ ಸಂಸ್ಕೃತಿ ರಾರಾಜಿಸುತ್ತಿದೆ. ರಾಜಕಾರಣ ಗಳೇ ಇಂತಹ ಫ್ಲೆಕ್ಸ್ಗಳನ್ನು ಹಾಕಿಸುತ್ತಿದ್ದಾರೆ. ಈ ವಿಷಯದಲ್ಲಿ ಅಧಿಕಾರಿಗಳು ಮುಲಾಜಿಲ್ಲದೆ ಬಿಜೆಪಿ ಸೇರಿದಂತೆ ಯಾವುದೇ ರಾಜರಾಕರಣ ಗಳ ವಿರುದ್ಧ ಕ್ರಮ ಜರುಗಿ ಸಲು ಹಿಂಜರಿಯಬಾರದು. ಬಿಜೆಪಿಯವರೇ ಫ್ಲೆಕ್ಸ್ ಹಾಕಿದ್ದರೂ ಅವರಿಗೇ ಮೊದಲು ನೋಟಿಸ್ ನೀಡಿ, ದಂಡ ವಿಧಿಸಿ ಎಂದು ನಗರಪಾಲಿಕೆಗೆ ಸೂಚನೆ ನೀಡಿದರು. ಮೈಸೂರು ನಗರದಲ್ಲಿ ಸಿಕ್ಕ ಸಿಕ್ಕಲ್ಲಿ ಕಸ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ನಗರದ ಸುತ್ತಲಿನ ಪಟ್ಟಣ ಪಂಚಾಯಿತಿ, ನಗರಸಭೆ ಮತ್ತು ಗ್ರಾಮ ಪಂಚಾಯಿತಿಯಿAದ ಸಂಗ್ರಹಿಸಿದ ತ್ಯಾಜ್ಯವನ್ನು ವಿದ್ಯಾರಣ್ಯಪುರಂನ ಸೂಯೇಜ್ ಫಾರ ಂನಲ್ಲಿ ವಿಲೇವಾರಿ ಮಾಡಲು ಅವಕಾಶ ನೀಡಬೇಕು ಎಂದು ಪಾಲಿಕೆ ಅಧಿಕಾರಿಗೆ ಸೂಚಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಲಕ್ಷಿ÷್ಮÃ ಕಾಂತ್ ರೆಡ್ಡಿ, ಈಗಾಗಲೇ ಶುಲ್ಕ ಕಟ್ಟಿಸಿಕೊಂಡು ಕಸ ವಿಲೇವಾರಿಗೆ ಅವಕಾಶ ನೀಡಲಾಗಿದೆ. ಕೆಸರೆ ಮತ್ತು ರಾಯನಕೆರೆ ತ್ಯಾಜ್ಯ ನಿರ್ವಹಣಾ ಘಟಕದ ನಿರ್ಮಾಣ ಕಾರ್ಯಪೂರ್ಣಗೊಂಡ ಬಳಿಕ ಇಲ್ಲಿಯೂ ಕಸ ಹಾಕಬಹುದು ಎಂದು ತಿಳಿಸಿದರು.
ಮೈಸೂರು ನಗರದಲ್ಲಿ ಗ್ಯಾಸ್ ಪೈಪ್‌ಲೈನ್ ಕಾಮಗಾರಿಗೆ ಗುತ್ತಿಗೆ ಕರೆದು ಕೆಲಸ ನಿಗದಿ ಪಡಿಸಲಾಗಿದ್ದು, ಈ ಬಗ್ಗೆ ಪಾಲಿಕೆ ಬಜೆಟ್ ಸ¨ sೆಯಲ್ಲಿ ಈ ಕೆಲಸಕ್ಕೆ ಅನುಮೋದನೆ ನೀಡುವಂತೆ ಆಯುಕ್ತರಿಗೆ ಸೂಚನೆ ನೀಡಿದರು.

ಲಂಚ ಕೇಳಲು ನಾಚಿಕೆಯಿಲ್ಲವೇ?: ನರ್ಮ್ ಯೋಜನೆಯಡಿ ಏಕಲವ್ಯನಗರದ ಅಲೆಮಾರಿ ಜನರಿಗೆ ನಿರ್ಮಿಸಿರುವ ಮನೆಗಳಲ್ಲಿ ಅನಧಿಕೃತವಾಗಿ ವಾಸ ಮಾಡುತ್ತಿರುವವರನ್ನು ತೆರವುಗೊಳಿಸಿ, ಅರ್ಹ ಫಲಾನುಭವಿಗಳಿಗೆ ಹಸ್ತಾಂತರ ಮಾಡುವ ಕೆಲಸ ವನ್ನು ಮಾ.೧೫ರೊಳಗೆ ಮುಗಿಸುವಂತೆ ಅಧಿಕಾರಿ ಗಳಿಗೆ ಸಂಸದ ಪ್ರತಾಪ್‌ಸಿಂಹ ಸೂಚನೆ ನೀಡಿದರು.
ಇಲ್ಲಿ ನಿರ್ಮಿಸಿರುವ ೧,೦೭೦ ಮನೆಗಳ ಪೈಕಿ ೫೮೦ ಮನೆಗಳನ್ನು ಹಂಚಿಕೆ ಮಾಡಲಾಗಿದ್ದು, ಉಳಿದ ಮನೆಗಳಿಗೆ ಫಲಾನುಭವಿಗಳನ್ನು ಆಯ್ಕೆ ಮಾಡಲಾ ಗಿದೆ. ಇನ್ನೂ ಹಂಚಿಕೆ ಮಾಡಿಲ್ಲ ಎಂದು ಕೊಳಗೇರಿ ಅಭಿವೃದ್ಧಿ ಮಂಡಳಿಯ ಅಧಿಕಾರಿ ತಿಳಿಸಿದರು. ಇದಕ್ಕೆ ಕೆರಳಿದ ಪ್ರತಾಪ್‌ಸಿಂಹ, ಬಡಪಾಯಿ ಗಳಿಂದಲೂ ಲಂಚ ಕೇಳುತ್ತೀರಿ. ನಾಚಿಕೆಯಿಲ್ಲವೇ? ಮಧ್ಯವರ್ತಿಗಳ ಸಮಸ್ಯೆ ಹೆಚ್ಚಾಗಿದೆ. ಅಂತಹವರಿಗೆ ನೀವು ಪ್ರೋತ್ಸಾಹ ನೀಡುತ್ತೀರಾ ಎಂದು ಕಿಡಿ ಕಾರಿದರು.

ಆಮ್ಲಜನಕ ಉತ್ಪಾದನಾ ಘಟಕಗಳ ಸುಸ್ಥಿತಿಯಲ್ಲಿ ಇಟ್ಟುಕೊಳ್ಳಿ: ಜಿಲ್ಲೆಯ ಪ್ರತಿಯೊಂದು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಜನೌಷಧ ಕೇಂದ್ರ ತೆರೆಯ ಬೇಕು. ಉದ್ದೇಶಿತ ೧೭ ಆಮ್ಲಜನಕ ಉತ್ಪಾದನ ಘಟಕ ಪೈಕಿ ೧೫ ಘಟಕಗಳು ಕಾರ್ಯನಿರ್ವಹಿ ಸುತ್ತಿವೆ. ಇವುಗಳ ಸಮರ್ಪಕವಾಗಿ ನಿರ್ವಹಿಸಿ ಸುಸ್ಥಿತಿಯಲ್ಲಿ ಇಟ್ಟುಕೊಳ್ಳುವಂತೆ ಡಿಎಚ್‌ಒ ಡಾ. ಪ್ರಸಾದ್ ಅವರಿಗೆ ಸೂಚಿಸಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲು ಅಗತ್ಯ ಕ್ರಮ ವಹಿಸಬೇಕು. ಈ ಸಂಬAಧ ಶಿಕ್ಷಕರು ಮತ್ತು ಬಿಇಒಗಳಿಗೆ ಗುರಿ ನಿಗದಿ ಪಡಿಸಬೇಕು. ಈ ಮೂಲಕ ಇವರ ನಡುವೆ ಆರೋಗ್ಯಕರ ಪೈಪೋಟಿ ಸೃಷ್ಟಿಸಿ ಉತ್ತೇಜನ ನೀಡುವಂತೆ ತಿಳಿಸಿದರು. ಶುಂಠಿ ಬೆಳೆಗಾಗಿ ಅಧಿಕ ರಸಗೊಬ್ಬರ ಬಳಸುವುದರಿಂದ ಭೂಫಲ ವತ್ತತೆ ಹಾಳಾಗುತ್ತಿದ್ದು, ಈಗ ಇದರ ಬೆಲೆಯು ಕುಸಿದಿದೆ. ಇದನ್ನು ಬೆಳೆಯದಂತೆ ರೈತರಲ್ಲಿ ಜಾಗೃತಿ ಮೂಡಿಸಬೇಕು. ಇದಕ್ಕೆ ಪರ್ಯಾಯವಾಗಿ ಅರಿಶಿಣ ಬೆಳೆಯಲು ಪ್ರೋತ್ಸಾಹ ನೀಡುವಂತೆ ಜಂಟಿ ಕೃಷಿ ನಿರ್ದೇಶಕ ಡಾ.ಮಹಂತೇಶಪ್ಪ ಅವರಿಗೆ ತಿಳಿಸಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್, ಜಿಪಂ ಸಿಇಓ ಬಿ.ಆರ್.ಪೂಣ ðಮಾ, ನಗರಪಾಲಿಕೆ ಆಯುಕ್ತ ಲಕ್ಷಿö್ಮಕಾಂತರೆಡ್ಡಿ ಇನ್ನಿತರೆ ಜಿಲ್ಲಾಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

ಚಾಮುಂಡಿಬೆಟ್ಟದ ಮೆಟ್ಟಿಲುಗಳ ಎರಡು ಬದಿ ತಡೆಗೋಡೆ ನಿರ್ಮಾಣ
ಚಾಮುಂಡಿಬೆಟ್ಟದ ಮೆಟ್ಟಿಲುಗಳ ಎರಡೂ ಬದಿ ಕಂಬಿ ತಡೆಗೋಡೆ (ರೈಲಿಂಗ್) ಅಳವಡಿಸಲಾ ಗುವುದು. ಮೆಟ್ಟಿಲು ಮಾರ್ಗ ಬೆಟ್ಟ ಹತ್ತುವವರಿಗೆ ಅನು ಕೂಲವಾಗಲೆಂದು ಎರಡೂ ಬದಿಯಲ್ಲಿ ರೈಲಿಂಗ್ ಅಳವಡಿಸುವ ಕಾಮಗಾರಿಯನ್ನು ಕೇಂದ್ರ ಸರ್ಕಾರದ ಪುನಶ್ಚೇತನ ಮತ್ತು ಆಧ್ಯಾತ್ಮ, ಪಾರಂಪರಿಕ ವರ್ಧನೆಯ ಯೋಜನೆ (ಪ್ರಸಾದ್) ಅಡಿಯಲ್ಲಿ ಕೈಗೆತ್ತಿಕೊಳ್ಳಲಾಗು ವುದು. ಈ ಬಾರಿ ಯಾವುದೇ ವಿರೋಧ ವ್ಯಕ್ತವಾ ದರೂ ಅದಕ್ಕೆ ಜಗ್ಗುವುದಿಲ್ಲ ಎಂದು ಹೇಳಿದರು.
ಒಮ್ಮೆಯೂ ಚಾಮುಂಡಿಬೆಟ್ಟದ ದೇವಸ್ಥಾನಕ್ಕೆ ಹೋಗ ದವರು ಚಾಮುಂಡಿಬೆಟ್ಟ ಕುರಿತು ಅಪಪ್ರಚಾರ ಮಾಡು ತ್ತಾರೆ. ಯಾರದೋ ಚಿತಾವಣೆಯಿಂದ ಮಾಧ್ಯಮದ ವರು ಸಹ ಸುದ್ದಿ ಮಾಡುತ್ತಾರೆ. ಇರ‍್ಯಾರಿಗೂ ಬೆಟ್ಟ ಕುರಿತು ಕಾಳಜಿ ಇಲ್ಲ. ಎಲ್ಲೋ ಒಂದು ಕಡೆ ಭೂ ಕುಸಿತ ವಾದರೆ, ಇಡೀ ಚಾಮುಂಡಿಬೆಟ್ಟವೇ ಕುಸಿದು ಬಿಟ್ಟಿತು ಎಂಬAತೆ ಬೊಬ್ಬೆ ಹೊಡೆದು ಕೊಳ್ಳುತ್ತಾರೆ. ಇವರೆಲ್ಲ ಒಮ್ಮೆಯೂ ಬೆಟ್ಟ-ಗುಡ್ಡವನ್ನು ನೋಡಿಲ್ಲ. ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಸಂಭವಿಸುವ ಭೂಕುಸಿತವನ್ನು ಒಮ್ಮೆ ಅವರಿಗೆ ತೋರಿಸಬೇಕು. ಆಗ ಇವರಿಗೆ ಗೊತ್ತಾಗುತ್ತದೆ ಎಂದು ಪರಿಸರವಾದಿಗಳ ವಿರುದ್ಧ ಸಂಸದ ಕಿಡಿಕಾರಿದರು.

 

 

Translate »