ಉಕ್ರೇನ್ ರಾಜಧಾನಿ ಬಹುತೇಕ ರಷ್ಯಾ ವಶಕ್ಕೆ
ಮೈಸೂರು

ಉಕ್ರೇನ್ ರಾಜಧಾನಿ ಬಹುತೇಕ ರಷ್ಯಾ ವಶಕ್ಕೆ

February 26, 2022

ಕೀವ್(ಉಕ್ರೇನ್), ಫೆ.೨೫-ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾ, ಉಕ್ರೇನ್‌ನ ರಾಜಧಾನಿ ಕೀವ್‌ನ ಬಹುತೇಕ ಪ್ರದೇಶಗಳನ್ನು ವಶಪಡಿಸಿ ಕೊಳ್ಳುವಲ್ಲಿ ಯಶಸ್ವಿಯಾಗಿದೆ. ಆದರೆ ರಷ್ಯಾ ಪಡೆಗಳಿಗೆ ಉಕ್ರೇನ್ ಸೇನೆ ತೀವ್ರ ಪ್ರತಿರೋಧ ಒಡ್ಡುತ್ತಿದೆ. ಈ ಮಧ್ಯೆ ರಷ್ಯಾ ಪಡೆಗಳು ನಾಗರಿಕರ ಮೇಲೆಯೂ ದಾಳಿ ನಡೆಸುತ್ತಿವೆ.

ಕೀವ್ ಸಮೀಪದಲ್ಲಿರುವ ಅಣು ಸ್ಥಾವ ರನ್ನು ರಷ್ಯಾ ಪಡೆಗಳು ಸುತ್ತುವರೆದಿದ್ದು, ಅಣು ಸ್ಥಾವರದಿಂದ ಅಣು ವಿಕಿರಣಗಳು ಸಣ್ಣ ಪ್ರಮಾಣದಲ್ಲಿ ಸೋರಿಕೆಯಾಗುತ್ತಿದೆ ಎಂದು ಅಣು ಸ್ಥಾವರದ ಅಧಿಕಾರಿಗಳು ತಿಳಿಸಿದ್ದು, ಉಕ್ರೇನ್ ಅಣು ಶಸ್ತಾçಸ್ತçಗಳನ್ನು ಹೊಂದಿದೆ ಎಂದು ರಷ್ಯಾ ಆರೋಪಿಸುತ್ತಿದೆ. ರಷ್ಯಾ ಪಡೆ ಗಳು ಅಣು ಸ್ಥಾವರದ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದ್ದು, ಸ್ಥಾವರದಿಂದ ವಿದ್ಯುತ್ ಸರಬರಾಜು ಕಡಿತಗೊಂಡಿದೆ. ಕೀವ್‌ನ ರಸ್ತೆ ಗಳಲ್ಲಿ ರಷ್ಯಾದ ಟ್ಯಾಂಕರ್‌ಗಳು ಲೀಲಾಜಾಲ ವಾಗಿ ಸಂಚರಿಸುತ್ತಿದ್ದು,
ಪ್ರತಿರೋಧ ಒಡ್ಡುವ ಉಕ್ರೇನ್ ಸೈನಿಕರ ಮೇಲೆ ದಾಳಿ ನಡೆಸುತ್ತಿವೆ. ಜೊತೆಗೆ ಪ್ರಮುಖ ಕಟ್ಟಡಗಳನ್ನು ಧ್ವಂಸ ಮಾಡುತ್ತಿವೆ ಎಂದು ವರದಿಗಳು ತಿಳಿಸಿವೆ. ರಷ್ಯಾದ ಇನ್ನಷ್ಟು ಟ್ಯಾಂಕರ್‌ಗಳು ಕೀವ್ ನಗರವನ್ನು ಪ್ರವೇಶಿಸದಂತೆ ಉಕ್ರೇನ್ ಸೈನಿಕರು ತಮ್ಮದೇ ದೇಶದ ಸೇತುವೆಯೊಂದನ್ನು ಧ್ವಂಸಗೊಳಿಸಿದ್ದು, ಕೀವ್ ಪ್ರವೇಶಿಸಲಾಗದೇ ರಷ್ಯಾದ ೧೦೦ಕ್ಕೂ ಹೆಚ್ಚು ಟ್ಯಾಂಕರ್‌ಗಳು ರಸ್ತೆಯಲ್ಲಿ ಸಾಲುಗಟ್ಟಿ ನಿಂತಿವೆ. ಈಗಾಗಲೇ ಕೀವ್ ನಗರವನ್ನು ಪ್ರವೇಶಿಸಿರುವ ಟ್ಯಾಂಕರ್‌ಗಳ ಮೇಲೆ ಉಕ್ರೇನ್ ಸೈನಿಕರು ದಾಳಿ ನಡೆಸುತ್ತಿದ್ದು, ಈ ಟ್ಯಾಂಕರ್‌ಗಳ ರಕ್ಷಣೆಗಾಗಿ ರಷ್ಯಾದ ವಾಯುಸೇನೆಯ ಯುದ್ಧ ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ನಡೆಸುತ್ತಿವೆ. ಕೀವ್‌ನ ಜನವಸತಿ ಪ್ರದೇಶದಲ್ಲೂ ರಷ್ಯಾ ಯುದ್ಧ ವಿಮಾನಗಳು ಮಿಸೈಲ್ ದಾಳಿ ನಡೆಸುತ್ತಿದ್ದು, ನಾಗರಿಕರು ತಲ್ಲಣಗೊಂಡಿದ್ದಾರೆ. ಹಲವಾರು ಅಪಾರ್ಟ್ಮೆಂಟ್‌ಗಳ ಮೇಲೆ ರಾಕೆಟ್ ದಾಳಿ ನಡೆದಿದೆ. ಅಲ್ಲಿನ ನಾಗರಿಕರು ರಕ್ಷಣೆಗಾಗಿ ಮೆಟ್ರೋ ಸುರಂಗಗಳನ್ನು ಆಶ್ರಯಿ ಸುತ್ತಿ ದ್ದಾರೆ ಎಂದು ವರದಿಗಳು ತಿಳಿಸಿವೆ. ಕೀವ್ ನಗರದಲ್ಲಿ ನೂರಾರು ಉಕ್ರೇನ್ ಸೈನಿಕರು ಹಾಗೂ ನಾಗರಿಕರು ಹತರಾಗಿದ್ದು, ಹಲವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಗೊಂಡವರಿಗೆ ಆಸ್ಪತ್ರೆಯಲ್ಲಿ ಸಮರ್ಪಕವಾದ ಚಿಕಿತ್ಸೆಯೂ ದೊರೆಯುತ್ತಿಲ್ಲ. ನೀರು ಮತ್ತು ಗ್ಯಾಸ್ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ. ಇದರಿಂದಾಗಿ ಆಹಾರ ತಯಾರಿಸಲು ಹಾಗೂ ಸ್ನಾನ ಮಾಡಲು ಸಾಧ್ಯವಾಗದೆ ನಾಗರಿಕರು ತೀವ್ರ ತೊಂದರೆಗೊಳಗಾಗಿದ್ದಾರೆ. ಇಲ್ಲಿ ನಲ್ಲಿಯಲ್ಲಿ ಬರುವ ನೀರು ಕುಡಿಯಲು ಯೋಗ್ಯವಲ್ಲದ ಕಾರಣ ನಾಗರಿಕರು ಶುದ್ಧೀಕರಿಸಿದ ನೀರನ್ನು ಖರೀದಿಸಿ ಕುಡಿಯುವುದು ವಾಡಿಕೆ. ಯುದ್ಧದ ಕಾರ್ಮೋಡದಿಂದಾಗಿ ಕುಡಿಯುವ ನೀರು ಖರೀದಿಸಲೂ ಕೂಡ ಸಾಧ್ಯವಾ ಗದಂತಹ ಪರಿಸ್ಥಿತಿಯನ್ನು ನಾಗರಿಕರು ಎದುರಿಸುತ್ತಿದ್ದಾರೆ. ಕೀವ್ ಸೇರಿದಂತೆ ರಷ್ಯಾ ಪಡೆಗಳು ದಾಳಿ ನಡೆಸಿರುವ ಪ್ರಮುಖ ನಗರಗಳಲ್ಲಿ ಕರ್ಫ್ಯೂ ಘೋಷಿಸಲಾಗಿದೆ. ಯಾರೂ ಮನೆ ಬಿಟ್ಟು ಹೊರ ಬಾರದಂತೆ ಉಕ್ರೇನ್ ಸರ್ಕಾರ ಸೂಚನೆ ನೀಡಿದೆ. ರಷ್ಯಾ ಮತ್ತು ಉಕ್ರೇನ್ ನಡುವೆ ಭೀಕರ ಯುದ್ಧ ನಡೆಯುತ್ತಿದೆ ಎಂದು ಪ್ರಕಟಿಸಿರುವ ಉಕ್ರೇನ್ ಸರ್ಕಾರ, ಸೈರನ್ ಮೊಳಗಿದಾಗ ಸುರಕ್ಷಿತ ಪ್ರದೇಶದಲ್ಲಿ ಆಶ್ರಯ ಪಡೆದುಕೊಳ್ಳುವಂತೆ ನಾಗರಿಕರಿಗೆ ಸೂಚನೆ ನೀಡಿದೆ. ರಷ್ಯಾ ಪಡೆಗಳು ಜನರು ವಾಸಿಸುವ ಅಪಾರ್ಟ್ಮೆಂಟ್ ಗಳ ಮೇಲೂ ದಾಳಿ ನಡೆಸಿ ಧ್ವಂಸಗೊಳಿಸುತ್ತಿರುವುದರಿAದ ರಸ್ತೆ ಪಾಲಾಗಿರುವ ಜನರು ಸೈರನ್ ಮೊಳಗುತ್ತಿದ್ದಂತೆಯೇ ದಿಕ್ಕಾಪಾಲಾಗಿ ಓಡುವ ದೃಶ್ಯಗಳು ಸರ್ವೇಸಾಮಾನ್ಯವಾಗಿದೆ.
ರಷ್ಯಾ ಸೇನೆಗಳು ಉಕ್ರೇನ್‌ನ ಉತ್ತರ, ಪೂರ್ವ, ದಕ್ಷಿಣದ ಗಡಿಯುದ್ದಕ್ಕೂ ದಾಳಿ ನಡೆಸುತ್ತಿದ್ದು, ಉಕ್ರೇನ್ ಸೇನೆಯ ಟ್ಯಾಂಕರ್‌ಗಳೂ ಸೇರಿದಂತೆ ಮಿಲಿಟರಿ ಸೌಲಭ್ಯಗಳನ್ನು ನಾಶಪಡಿಸುತ್ತಿದೆ. ರಷ್ಯಾ ದಾಳಿ ಆರಂಭಿಸಿದಾಗಿನಿAದ ಈವರೆಗೆ ಸೈನಿಕರು, ನಾಗರಿಕರು ಸೇರಿದಂತೆ ೧೩೭ ಮಂದಿ ಸಾವನ್ನಪ್ಪಿದ್ದು, ನೂರಾರು ಮಂದಿ ಗಾಯಗೊಂಡಿರುವುದಾಗಿ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ಶುಕ್ರವಾರ ಮುಂಜಾನೆ ವೀಡಿಯೋ ಭಾಷಣದಲ್ಲಿ ತಿಳಿಸಿದ್ದಾರೆ. ಇಂದು ಮುಂಜಾನೆ ಉಕ್ರೇನ್ ರಾಜಧಾನಿ ಕೀವ್‌ನ ವಿವಿಧ ಕಡೆ ಭಾರೀ ಪ್ರಮಾಣದ ಬಾಂಬ್ ದಾಳಿ ನಡೆದಿದೆ. ಈ ಕಠಿಣ ಪರಿಸ್ಥಿತಿಯಲ್ಲಿ ಕೆಲಸಕ್ಕೆ ಹೋಗಲು ಸಾಧ್ಯವಾಗದೇ ನಾಗರಿಕರು ಮನೆಗಳ ಒಳಗಡೆಯೇ ಸೇರಿಕೊಂಡಿದ್ದಾರೆ. ಹೆಚ್ಚಿನ ಜನರು ಮೆಟ್ರೋ ನಿಲ್ದಾಣದ ಸುರಂಗ ಪ್ರದೇಶದಲ್ಲಿ ಆಶ್ರಯ ಪಡೆದಿದ್ದಾರೆ. ಪ್ರತಿಯೊಬ್ಬರೂ ತಮ್ಮ ಬ್ಯಾಗ್‌ನಲ್ಲಿ ಔಷಧ ಮತ್ತು ದಾಖಲೆಗಳಂತಹ ಅಗತ್ಯತೆಗಳನ್ನು ಇಟ್ಟುಕೊಳ್ಳುವಂತೆ ಕೀವ್‌ನ ಮೇಯರ್ ಬಿಟಲಿ ಕ್ಲಿಟ್ಸ್ ಕೋ ತಿಳಿಸಿದ್ದಾರೆ.

ರಷ್ಯಾದ ೮೦೦ ಸೈನಿಕರ ಬಲಿ ಪಡೆದ ಉಕ್ರೇನ್ ಪಡೆ
ಕೀವ್:ಬಲಿಷ್ಠ ರಷ್ಯಾ ಸೇನೆಗೆ ಉಕ್ರೇನ್ ಸೈನಿಕರು ತೀವ್ರ ಪ್ರತಿರೋಧ ವ್ಯಕ್ತಪಡಿಸುತ್ತಿ ದ್ದಾರೆ. ಈವರೆಗೆ ೮೦೦ ರಷ್ಯನ್ ಸೈನಿಕರ ಬಲಿ ಪಡೆದಿದ್ದಾರೆ ಎಂದು ಉಕ್ರೇನ್‌ನ ರಕ್ಷಣಾ ಉಪ ಮಂತ್ರಿ ಹನ್ನಾ ಮಲ್ಯಾರ್ ತಿಳಿಸಿದ್ದಾರೆ. ರಷ್ಯಾ ಸೇನೆಗೆ ಸೇರಿದ ೭ ಯುದ್ಧ ವಿಮಾನಗಳು, ೬ ಹೆಲಿಕಾಪ್ಟರ್‌ಗಳು ಹಾಗೂ ೩೦ ಯುದ್ಧ ಟ್ಯಾಂಕರ್‌ಗಳನ್ನು ಉಕ್ರೇನ್ ಸೈನಿಕರು ಧ್ವಂಸಗೊಳಿಸಿದ್ದಾರೆ. ರಷ್ಯಾ ಸೇನೆಗೆ ಸೇರಿದ ೧೩೦ ಮೊಬೈಲ್ ಮಿಸೈಲ್ ಲಾಂಚರ್‌ಗಳನ್ನು ಉಕ್ರೇನ್ ಸೇನೆ ನಾಶಪಡಿಸಿದೆ ಎಂದು ಉಕ್ರೇನ್ ರಕ್ಷಣಾ ಸಚಿವಾಲಯ ಮಾಹಿತಿ ನೀಡಿದೆ.

ಉಕ್ರೇನ್ ಅಧ್ಯಕ್ಷರಿಗೆ ಬಂಕರ್‌ನಲ್ಲಿ ಆಶ್ರಯ

ರಷ್ಯಾ ಸೇನಾ ಪಡೆಗಳು ಉಕ್ರೇನ್ ರಾಜ ಧಾನಿ ಕೀವ್‌ನ ಬಹುತೇಕ ಪ್ರದೇಶಗಳನ್ನು ವಶಪಡಿಸಿ ಕೊಂಡಿದ್ದು, ಈ ಪಡೆಗಳ ಜೊತೆ ಉಕ್ರೇನ್ ಸೈನಿಕರು ಸೆಣ ಸುತ್ತಿದ್ದು, ಇತ್ತ ಉಕ್ರೇನ್‌ನ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ಬಂಕರ್‌ವೊAದರಲ್ಲಿ ಆಶ್ರಯ ಪಡೆ ದಿದ್ದಾರೆ ಎಂದು ಹೇಳಲಾಗಿದೆ. ರಷ್ಯಾ ಪಡೆಗಳು ಉಕ್ರೇನ್ ಅಧ್ಯಕ್ಷರ ನೆಲೆ ಪತ್ತೆ ಹಚ್ಚುವ ಕಾರ್ಯದಲ್ಲೂ ತೊಡಗಿವೆ ಎಂದು ಹೇಳಲಾಗಿದ್ದು, ಒಂದು ವೇಳೆ ರಷ್ಯಾ ಪಡೆಗಳು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸಿ÷್ಕ ಅವರನ್ನು ಸೆರೆ ಹಿಡಿದರೆ ಸಂಪೂರ್ಣ ವಾಗಿ ಉಕ್ರೇನ್ ರಷ್ಯಾ ವಶವಾಗುತ್ತದೆ ಎಂಬ ಕಾರಣಕ್ಕೆ ಬಂಕರ್‌ನಲ್ಲಿ ಆಶ್ರಯ ಪಡೆದಿ ರುವ ಉಕ್ರೇನ್ ಅಧ್ಯಕ್ಷರು, ತಮ್ಮ ದೇಶದ ನೆರವಿಗಾಗಿ ಅಮೇರಿಕಾ ಸೇರಿದಂತೆ ಇತರ ಮಿತ್ರ ದೇಶಗಳ ಮೊರೆ ಹೋಗಿದ್ದಾರೆ.

Translate »