ಮೈಸೂರು, ಆ. 17(ಆರ್‍ಕೆ)- ಮೈಸೂರಿನ ಮಹ ದೇವಪುರ ರಸ್ತೆ ಹಾಗೂ ರಿಂಗ್ ರೋಡ್ ಜಂಕ್ಷನ್‍ನಲ್ಲಿರುವ ಸಾತ ಗಳ್ಳಿ ಬಸ್ ನಿಲ್ದಾಣ ಸಮುಚ್ಛಯ ದಲ್ಲಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿ ಎಂದು ಎನ್.ಆರ್. ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಜಿಲ್ಲಾಡಳಿತಕ್ಕೆ ಸಲಹೆ ನೀಡಿದ್ದಾರೆ.
ಈ ಕುರಿತು ‘ಮೈಸೂರು ಮಿತ್ರ’ನೊಂದಿಗೆ ಮಾತ ನಾಡಿದ ಅವರು, ಮೈಸೂರಲ್ಲಿ ಆ್ಯಂಟಿಜೆನ್ ಕಿಟ್‍ಗಳ ಮೂಲಕ ಪರೀಕ್ಷೆ ತೀವ್ರಗತಿಯಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಹೆಚ್ಚು ಪಾಸಿಟಿವ್ ಪ್ರಕರಣಗಳು ಪತ್ತೆ ಯಾಗುತ್ತಿವೆ. ಸೋಂಕಿತರಿಗೆ ಚಿಕಿತ್ಸೆ ನೀಡಲು ಮುಂಜಾ ಗ್ರತೆಯಾಗಿ ಕೋವಿಡ್ ಕೇರ್ ಸೆಂಟರ್‍ಗಳನ್ನು ವ್ಯವಸ್ಥೆ ಮಾಡಿಕೊಳ್ಳುವುದು ಅತ್ಯವಶ್ಯ ಎಂದರು.
ಈಗಾಗಲೇ ಉದಯಗಿರಿಯ ಫಾರೂಖಿಯಾ ಕಾಲೇಜು, ಆಂಡುಲನ್ಸ್ ಶಿಕ್ಷಣ ಸಂಸ್ಥೆ ಹಾಗೂ ಕ್ಯೂಬಾ ಶಾಲೆಯಲ್ಲಿ ಕೋವಿಡ್ ಕೇರ್ ಸೆಂಟರ್ ವ್ಯವಸ್ಥೆ ಮಾಡಿ, ಕೊರೊನಾ ಸೋಂಕಿತರಿಗೆ ಚಿಕಿತ್ಸೆ ನೀಡ ಲಾಗುತ್ತಿದೆ. ಅದೇ ರೀತಿ ಸಾತಗಳ್ಳಿ ಬಸ್ ನಿಲ್ದಾಣದ 5 ಮಹಡಿಯ ಸಮುಚ್ಛಯವನ್ನು ಈ ಉದ್ದೇಶಕ್ಕೆ ಬಳಸಿಕೊಳ್ಳಬಹುದೆಂದು ಹೇಳಿದ್ದೇನೆ ಎಂದರು.
2 ಲಕ್ಷ ಚದರಡಿ ಇರುವ ಈ ಸಮುಚ್ಛಯ, ಲಿಫ್ಟ್ ಸೌಕರ್ಯ, ಕುಡಿಯುವ ನೀರು, ಶೌಚಾಲಯ ಸೌಕರ್ಯ ಹೊಂದಿದ್ದು, ಹಾಸ್ಟೆಲ್‍ಗಳಿಂದ ಮಂಚ ಮತ್ತು ಹಾಸಿಗೆಗಳನ್ನು ತಂದು ಹಾಕಿದಲ್ಲಿ 1000 ಮಂದಿ ಸೋಂಕಿತರಿಗೆ ಆರೈಕೆ ಮಾಡಬಹುದು. ಆಂಬುಲೆನ್ಸ್ ಸಂಚಾರಕ್ಕೂ ಸಂಪರ್ಕ ರಸ್ತೆಗಳಿರುವು ದರಿಂದ ಕೋವಿಡ್ ಕೇರ್ ಸೆಂಟರ್‍ಗೆ ಸಾತಗಳ್ಳಿ ಬಸ್ ನಿಲ್ದಾಣ ಸಮುಚ್ಛಯ ಸೂಕ್ತವಾಗಿದೆ ಎಂದು ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ ಎಂದು ಹೇಳಿದರು.
ಬೀಡಿ ಕಾರ್ಮಿಕರ ಆಸ್ಪತ್ರೆಯಲ್ಲೂ 200 ಬೆಡ್ ಸಾಮಥ್ರ್ಯದ ಕೋವಿಡ್ ಆರೈಕೆ ಕೇಂದ್ರ ಸೌಲಭ್ಯ ಒದಗಿಸಲು ತಯಾರಿ ನಡೆಯುತ್ತಿದೆಯಲ್ಲದೆ, ರಿಂಗ್ ರಸ್ತೆಯಲ್ಲಿರುವ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾ ನಿಲಯ (ಗಿಖಿU)ದ ಪ್ರಾದೇಶಿಕ ಕಟ್ಟಡವನ್ನೂ ಈ ಉದ್ದೇಶಕ್ಕೆ ಬಳಸಿಕೊಳ್ಳಬಹುದಾಗಿದೆ ಎಂದು ಜಿಲ್ಲಾಡಳಿತಕ್ಕೆ ಮಾಹಿತಿ ನೀಡಿದ್ದೇನೆ. ಆದರೆ ಆ ಬಗ್ಗೆ ತಯಾರಿ ನಡೆದಂತೆ ಕಾಣುತ್ತಿಲ್ಲ ಎಂದು ಶಾಸಕ ತನ್ವೀರ್ ಸೇಠ್ ನುಡಿದರು.
ಇಂದು ಮೈಸೂರಿನ 5 ಕಡೆ ಕೊರೊನಾ ಟೆಸ್ಟ್
ಮೈಸೂರು, ಆ. 17(ಆರ್‍ಕೆ)- ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿ ರುವ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲಾಡಳಿತವು ರ್ಯಾಪಿಡ್ ಆ್ಯಂಟಿಜೆನ್ ಕಿಟ್‍ಗಳ ಮೂಲಕ ಪರೀಕ್ಷೆ ಮಾಡುತ್ತಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ನಾಳೆ (ಆ. 18) ಪುರಭವನ ಆವರಣ, ಉದಯಗಿರಿಯ ಕ್ಯೂಬಾ ಶಾಲೆ, ಹೆಬ್ಬಾಳಿನ ಸಿಐಟಿಬಿ ಕಲ್ಯಾಣ ಮಂಟಪ, ಮಾನಸ ಗಂಗೋತ್ರಿಯ ಬಯಲು ರಂಗಮಂದಿರ ಹಾಗೂ ರಾಜೀವ್‍ನಗರದ ಅಲ್ ಕರೀಂ ಶಾಲಾ ಆವರಣದಲ್ಲಿ ರ್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಶಿಬಿರ ನಡೆಯಲಿದೆ.
ಕೆಮ್ಮು, ನೆಗಡಿ, ಜ್ವರ, ಉಸಿರಾಟದ ತೊಂದರೆ ಯಂತಹ ರೋಗ ಲಕ್ಷಣಗಳು ಕಂಡುಬಂದವರು ಈ ಸ್ಥಳಗಳಿಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿ ಕೊಂಡು ಅಗತ್ಯ ಬಿದ್ದರೆ ಕೋವಿಡ್ ಟೆಸ್ಟ್‍ಗೊಳಪಡಿಸಿ ಕೊಳ್ಳಬೇಕೆಂದು ಜಿಲ್ಲಾಡಳಿತವು ತಿಳಿಸಿದೆ.
ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರು ಹಾಗೂ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಅಗತ್ಯವಿರುವವರನ್ನು ಶಿಬಿರಕ್ಕೆ ಕರೆದೊಯ್ದು ಕೊರೊನಾ ಟೆಸ್ಟ್ ಮಾಡಿಸಿ, ಆರಂಭದಲ್ಲೇ ಚಿಕಿತ್ಸೆ ಪಡೆದು ಸಾವಿನ ಸಂಖ್ಯೆ ತಗ್ಗಿಸಲು ಸಹಕರಿಸಬೇಕೆಂದು ಜಿಲ್ಲಾಧಿಕಾರಿ ಅಭಿರಾಂ ಜಿ. ಶಂಕರ್ ತಿಳಿಸಿದ್ದಾರೆ.