ಮೈಸೂರಲ್ಲಿ ಬಿಜೆಪಿ ವತಿಯಿಂದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ ಆತ್ಮೀಯ ಅಭಿನಂದನೆ ಸಲ್ಲಿಕೆ
ಮೈಸೂರು

ಮೈಸೂರಲ್ಲಿ ಬಿಜೆಪಿ ವತಿಯಿಂದ ಪಕ್ಷದ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರರಿಗೆ ಆತ್ಮೀಯ ಅಭಿನಂದನೆ ಸಲ್ಲಿಕೆ

August 18, 2020

ಮೈಸೂರು, ಆ.17(ಎಂಕೆ)- ಬಿಜೆಪಿ ರಾಜ್ಯ ಉಪಾ ಧ್ಯಕ್ಷರಾದ ಬಳಿಕ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ಬಿ.ವೈ.ವಿಜಯೇಂದ್ರ ಅವರಿಗೆ ಬಿಜೆಪಿ ಮೈಸೂರು ನಗರ, ಗ್ರಾಮಾಂತರ ಮತ್ತು ಯುವ ಮೋರ್ಚಾ ಘಟಕದ ಪದಾಧಿಕಾರಿಗಳು, ಮುಖಂಡರು, ಕಾರ್ಯಕರ್ತರು ಆತ್ಮೀಯವಾಗಿ ಅಭಿನಂದಿಸಿದರು.

ನಗರದ ಚಾಮರಾಜಪುರಂನಲ್ಲಿರುವ ಪಕ್ಷದ ಕಚೇರಿಯಲ್ಲಿ ಆಯೋಜಿಸಿದ್ದ ಅಭಿನಂದನಾ ಕಾರ್ಯ ಕ್ರಮದಲ್ಲಿ ಬಿಜೆಪಿ ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು, ಹಿರಿಯ ಮುಖಂಡರು, ಕಾರ್ಯ ಕರ್ತರು ವಿಜಯೇಂದ್ರ ಅವರಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ಅಭಿನಂದಿಸಿದರು.

ಅಭಿನಂದನೆ ಸ್ವೀಕರಿಸಿದ ಬಳಿಕ ಮಾತನಾಡಿದ ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಬಿಜೆಪಿ ಹಾಗೂ ರಾಜ್ಯದ ಮುಖ್ಯಮಂತ್ರಿಗಳಾದ ಯಡಿ ಯೂರಪ್ಪ ಅವರ ಘನತೆಗೆ ಚ್ಯುತಿಯುಂಟಾಗದಂತೆ ಪಕ್ಷ ಹಾಗೂ ರಾಜ್ಯದ ಜನರ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತೇನೆ ಎಂದು ಹೇಳಿದರು.

ರಾಜ್ಯದ ಬಿಜೆಪಿ ಹಿರಿಯ ಮುಖಂಡರು ನನ್ನ ಮೇಲೆ ಭರವಸೆ ಇಟ್ಟು ನೀಡಿರುವ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿ, ಪಕ್ಷ ಸಂಘಟನೆಗಾಗಿ ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದರು.

ಎರಡು ವರ್ಷದ ಹಿಂದೆಯಷ್ಟೇ ನಾನು ರಾಜ ಕೀಯಕ್ಕೆ ಬಂದಿದ್ದರೂ 30ಕ್ಕೂ ಹೆಚ್ಚು ವರ್ಷಗಳು ಯಡಿಯೂರಪ್ಪ ಅವರ ರಾಜಕೀಯ ಒಡನಾಟವನ್ನು ಕಂಡಿದ್ದೇನೆ. ಅವರು, ಕೇವಲ ನಗರ ಭಾಗಕ್ಕೆ ಸೀಮಿತ ವಾಗಿದ್ದ ಬಿಜೆಪಿಯನ್ನು ಸೈಕಲ್ ಜಾಥಾ ನಡೆಸಿ, ಹಳ್ಳಿ ಹಳ್ಳಿಗೂ ವಿಸ್ತರಿಸಿದ್ದಾರೆ. ಬಿಜೆಪಿ ಮುಂದುವರಿ ದವರ ಪಕ್ಷವಲ್ಲ. ಎಲ್ಲಾ ಬಗೆಯ ಜಾತಿ, ಸಮು ದಾಯದ ಜನರನ್ನು ಒಳಗೊಂಡ ಪಕ್ಷ ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಎಲ್ಲಾ ವರ್ಗದವರಿಗೂ ನ್ಯಾಯ ಒದಗಿಸುವ ಹಲವಾರು ಯೋಜನೆಗಳನ್ನು ತಂದಿ ದ್ದಾರೆ ಎಂದು ಹೇಳಿದರು.

ಎಲ್ಲರೂ ಸಮಾನರು: ಬಿಜೆಪಿ ಪಕ್ಷದ ಕೆಲವು ಚುನಾಯಿತ ಪ್ರತಿನಿಧಿಗಳು ತಾವು ಗೆದ್ದನಂತರ ತಮ್ಮ ತಮ್ಮ ಜಾತಿಗೆ ಸೀಮಿತವಾಗುತ್ತಿದ್ದಾರೆ. ಈ ರೀತಿ ಜಾತಿ ಅಥವಾ ಒಂದು ಸಮುದಾಯಕ್ಕೆ ಮಾತ್ರ ಸೀಮಿತವಾಗದೆ ಎಲ್ಲರನ್ನು ಒಂದೇ ರೀತಿ ಕಾಣ ಬೇಕು. ಜಾತಿ ಆಧಾರದ ಮೇಲೆ ಸಂಘಟನೆ ಮಾಡದೇ, ಎಲ್ಲರನ್ನೂ ಒಂದೇ ಎಂದು ಕಾಣುವ ಮೂಲಕ ಪಕ್ಷದ ಸಂಘಟನೆಯಾಗಬೇಕು ಎಂದರು.

ಒಗ್ಗಟ್ಟಿನ ಕೆಲಸ: ಹಳೇ ಮೈಸೂರು ಭಾಗದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿದರೆ ಮಾತ್ರ ಪಕ್ಷದ ಸಂಘಟನೆ ಜೊತೆಗೆ ಈ ಭಾಗದಲ್ಲಿ ಗೆಲುವು ಪಡೆಯಲು ಸಾಧ್ಯ. ಇದಕ್ಕೆ ಮಹಿಳಾ ಕಾರ್ಯ ಕತೆರ್Àಯರ ಸಹಕಾರ ಅತ್ಯಂತ ಮುಖ್ಯವಾಗಿದೆ ಎಂದು ವಿಜಯೇಂದ್ರ ತಿಳಿಸಿದರು.

ಅಮೆರಿಕಾ ಭಾರತದತ್ತ: ವಿಶ್ವದ ದೊಡ್ಡಣ್ಣ ಎಂದು ಕರೆಸಿಕೊಳ್ಳುವ ಅಮೆರಿಕಾ ಇಂದು ಭಾರತದತ್ತ ಮುಖ ಮಾಡಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಯವರ ಕೊಡುಗೆ ಕಾರ್ಯವೈಖರಿಯೇ ಕಾರಣ. ಮೊದಲೆಲ್ಲಾ ನಮ್ಮ ದೇಶದ ಪ್ರಧಾನಿಗಳು ಅಮೆರಿಕಾ ದೇಶಕ್ಕೆ ಹೋಗಿ ಬಂದರೆ ಸರಿಯಾಗಿ ತಿಳಿಯುತ್ತಲೂ ಇರಲಿಲ್ಲ. ಅದರಂತೆ ಗೌರವವೂ ಸಿಗುತ್ತಿರಲಿಲ್ಲ. ಆದರೆ, ಇಂದು ಅಮೆರಿಕಾವೇ ಭಾರತೀಯರ ಸಹಕಾರ ಕೇಳುತ್ತಿದೆ ಎಂದು ಹೇಳಿದರು.

ಶಾಸಕ ಎಲ್.ನಾಗೇಂದ್ರ ಮಾತನಾಡಿ, ಮುಖ್ಯ ಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಶಾಸಕರಾಗಿ ನಮ್ಮ ಜೊತೆಯಲ್ಲಿ ಕುಳಿತುಕೊಳ್ಳುವ ಅವಕಾಶವಿತ್ತು. ಆದರೂ ಮುಂದಿನ ದಿನಗಳಲ್ಲಿ ಮೈಸೂರು ಜಿಲ್ಲೆಯ ಶಾಸಕರಾಗುತ್ತಾರೆ ಎಂಬ ವಿಶ್ವಾಸವಿದೆ ಎಂದು ಮೆಚ್ಚುಗೆ ಮಾತುಗಳ ನ್ನಾಡಿದರು. ಕಾರ್ಯಕ್ರಮದಲ್ಲಿ ಶಾಸಕ ಪ್ರೀತಂಗೌಡ, ಮಾಜಿ ಸಚಿವರಾದ ಸಿ.ಹೆಚ್.ವಿಜಯಶಂಕರ್, ಕೋಟೆ ಶಿವಣ್ಣ, ಮಾಜಿ ಶಾಸಕ ಡಾ.ಭಾರತೀ ಶಂಕರ್, ಮೈಮುಲ್ ನಿರ್ದೇಶಕ ಸಿ.ಅಶೋಕ್, ಬಿಜೆಪಿ ರಾಜ್ಯ ಉಪಾಧ್ಯಕ್ಷ ರಾಜೇಂದ್ರ, ವಿಭಾಗ ಸಂಘಟನಾ ಕಾರ್ಯದರ್ಶಿ ಸುರೇಶ್‍ಬಾಬು, ವಿಭಾಗ ಪ್ರಭಾರಿ ಮೈವಿ ರವಿಶಂಕರ್, ನಗರಾಧ್ಯಕ್ಷ ಶ್ರೀವತ್ಸ, ನಗರ ಪ್ರಧಾನ ಕಾರ್ಯದರ್ಶಿಗಳಾದ ಗಿರಿಧರ್, ವಾಣೀಶ್, ಮುಖಂಡರಾದ, ಹೆಚ್.ವಿ.ರಾಜೀವ್, ರಘು ಕೌಟಿಲ್ಯ, ಜಯಪ್ರಕಾಶ್, ಮಾಜಿ ತಾಲೂಕು ಪಂಚಾಯಿತಿ ಅಧ್ಯಕ್ಷ ಎಲ್.ಆರ್.ಮಹದೇವಸ್ವಾಮಿ, ಗ್ರಾಮಾಂತರ ಘಟಕದ ಕಾರ್ಯದರ್ಶಿ ಮಹೇಶ್, ನಗರ ಯುವ ಮೋರ್ಚಾ ಅಧ್ಯಕ್ಷ ಎಂ.ಜೆ.ಕಿರಣ್ ಗೌಡ, ಜಯಶಂಕರ್, ಹೇಮಾ ನಂದೀಶ್ ಸೇರಿ ದಂತೆ ಮತ್ತಿತರರು ಉಪಸ್ಥಿತರಿದ್ದರು.

 

Translate »