ಬಿಸಿಯೂಟ ಮಹಿಳೆಯರ ಬಂಧನ ಖಂಡಿಸಿ ಪ್ರತಿಭಟನೆ
ಮೈಸೂರು

ಬಿಸಿಯೂಟ ಮಹಿಳೆಯರ ಬಂಧನ ಖಂಡಿಸಿ ಪ್ರತಿಭಟನೆ

August 18, 2020

ಮೈಸೂರು, ಆ.17(ಪಿಎಂ)- ಗೌರವಧನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಲು ಮನವಿ ಸಲ್ಲಿಸಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವರ ಬೆಂಗಳೂರು ನಿವಾಸಕ್ಕೆ ತೆರಳಿದ್ದ ಅಕ್ಷರ ದಾಸೋಹ ಯೋಜನೆ ಅಡಿಯ 70 ಮಂದಿ ಮಹಿಳೆಯರನ್ನು ಪೊಲೀ ಸರು ಬಂಧಿಸಿದ್ದಾರೆ ಎಂದು ಆರೋಪಿಸಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಮೈಸೂರು ಜಿಲ್ಲಾ ಸಮಿತಿ ವತಿಯಿಂದ ಸೋಮವಾರ ಪ್ರತಿಭಟನೆ ನಡೆಸಲಾಯಿತು.

ಮೈಸೂರು ಜಿಲ್ಲಾ ಪಂಚಾಯಿತಿ ಕಾರ್ಯಾಲಯದ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಬಂಧಿ ಸಿರುವ 70 ಮಂದಿ ಬಿಸಿಯೂಟದ ಮಹಿಳೆಯರನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.

ಬೇಡಿಕೆ ಈಡೇರಿಸುವ ಸಂಬಂಧ ರಾಜ್ಯದ ಆಯಾಯ ಜಿಲ್ಲೆ ಮತ್ತು ತಾಲೂಕಿನಲ್ಲಿ ಉಪವಾಸ ಸತ್ಯಾಗ್ರಹ, ಧರಣಿ ಇತ್ಯಾದಿ ಹೋರಾಟ ಮಾಡಿ ದರೂ ಪ್ರಯೋಜನವಾಗಿಲ್ಲ. ಯಾವುದೇ ಸಕಾ ರಾತ್ಮಕ ಸ್ಪಂದನೆ ಇಲ್ಲದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ ಬೆಂಗಳೂರಿನಲ್ಲಿ ಶಿಕ್ಷಣ ಸಚಿವರನ್ನು ಭೇಟಿ ಯಾಗಲು ಅವರ ಮನೆ ಬಳಿ ಹೋಗಿದ್ದ ಬಿಸಿ ಯೂಟ ಮಹಿಳೆಯರನ್ನು ಪೊಲೀಸರು ಬಂಧಿಸಿ ದ್ದಾರೆ. ಇದು ಅತ್ಯಂತ ಖಂಡನೀಯ ಮತ್ತು ಅಸಾಂವಿಧಾನಿಕ ನಡೆ ಎಂದು ಖಂಡಿಸಿದರು.

ಸಾಮಾಜಿಕ ಅಂತರ ಕಾಯ್ದುಕೊಂಡು ಸಚಿವರ ನಿವಾಸಕ್ಕೆ ತೆರಳಿದ್ದರೂ ಬಂಧನ ಮಾಡಲಾಗಿದೆ. ಬೇಡಿಕೆ ಈಡೇರಿಸಲು ಮನವಿ ಮಾಡಿದರೆ ಬಂಧಿ ಸುವ ಸರ್ಕಾರದ ಧೋರಣೆ ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸಿಐಟಿಯು ಮುಖಂಡ ರಾದ ಜಯರಾಮ್, ಬಸವರಾಜು, ಸಂಘದ ಜಿಲ್ಲಾ ಧ್ಯಕ್ಷೆ ಕೆ.ಮಂಜುಳಾ, ಕಾರ್ಯದರ್ಶಿ ಸಾವಿತ್ರಿ ಮತ್ತಿ ತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಸಂಜೆ ವೇಳೆಗೆ ಬಿಡುಗಡೆ: ಬಿಸಿಯೂಟದ 70 ಮಂದಿ ಮಹಿಳೆಯರ ಮೇಲೂ ಪ್ರಕರಣ ದಾಖಲಿಸಿ, ಕೊನೆಗೆ ಜಾಮೀನಿನ ಮೇಲೆ ಸಂಜೆ ವೇಳೆಗೆ ಬಿಡು ಗಡೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿ ರುವ ಸಂಘದ ರಾಜ್ಯ ಗೌರವಾಧ್ಯಕ್ಷೆ ಎಸ್.ವರ ಲಕ್ಷಿ ಹಾಗೂ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತ, ನ್ಯಾಯ ಕೇಳಲು ಹೋದ ಮಹಿಳೆಯರನ್ನು ಬಂಧಿಸಿ ರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿ ದ್ದಾರೆ. ಅಕ್ಷರ ದಾಸೋಹ ಯೋಜನೆಯಡಿ ಕೇವಲ 2,600 ರೂ. ಗೌರವಧನಕ್ಕೆ ದುಡಿಯುತ್ತಿರುವ ಮಹಿಳೆ ಯರು ಗೌರವಧನ ಹೆಚ್ಚಳಕ್ಕಾಗಿ ಹೋರಾಟ ಮಾಡುತ್ತಿ ದ್ದಾರೆ. ಕೊರೊನಾ ಬಂದಾಗಿನಿಂದ ಕೆಲಸ ಹಾಗೂ ಗೌರವಧನ ಎರಡೂ ಇಲ್ಲದೇ ಸಂಕಷ್ಟದಲ್ಲಿದ್ದಾರೆ.

ಬೇಡಿಕೆ ಈಡೇರಿಸುವ ಸಂಬಂಧ ಮನವಿ ಸಲ್ಲಿಸಲು ಹೋದ ಬಿಸಿಯೂಟದ ಮಹಿಳೆಯರನ್ನು ಪೊಲೀಸರು ಬೆಳಿಗ್ಗೆ ಬಂಧಿಸಿದರು. ಬಳಿಕ ಬೆಂಗಳೂರಿನ ಮೈಸೂರು ರಸ್ತೆಯ ಪೊಲೀಸ್ ಗ್ರೌಂಡ್‍ಗೆ ಕರೆದುಕೊಂಡು ಹೋಗಿ ಎಲ್ಲರ ವಿರುದ್ಧವೂ ಬಸವೇಶ್ವರ ಪೊಲೀಸ್ ಠಾಣೆ ಯಲ್ಲಿ ಸೆಕ್ಷನ್ 341, 283, 148, 143, 153 ಸೇರಿ ಇನ್ನಿತರ ಸೆಕ್ಷನ್ ಗಳಡಿಯಲ್ಲಿ ಮೊಕದ್ದಮೆಗಳನ್ನು ದಾಖಲಿಸಿದರು. ನಂತರ ಸಂಜೆ ವೇಳೆಗೆ ಬಿಡುಗಡೆ ಮಾಡಿದ್ದಾರೆ. ಆ ಮೂಲಕ ವೇತನಕ್ಕಾಗಿ ಹೋರಾಟ ನಡೆಸುವು ದನ್ನು ಸರ್ಕಾರ ಹತ್ತಿಕ್ಕುವ ಧೋರಣೆ ಅನುಸರಿಸುತ್ತಿದೆ ಎಂದು ಅವರು ಖಂಡಿಸಿದ್ದಾರೆ.

Translate »