ಬೆಂಗಳೂರಲ್ಲಿ ಶಂಕಿತ ಕಾಶ್ಮೀರಿ ಉಗ್ರನ ಬಂಧನ
News

ಬೆಂಗಳೂರಲ್ಲಿ ಶಂಕಿತ ಕಾಶ್ಮೀರಿ ಉಗ್ರನ ಬಂಧನ

June 8, 2022

ಬೆಂಗಳೂರು, ಜೂ. 7 (ಕೆಎಂಶಿ) – ಶಂಕಿತ ಉಗ್ರ ತಾಲಿಬ್ ಹುಸೇನ್ ಬಂಧನದ ಬೆನ್ನಲ್ಲೇ ರಾಜ್ಯದ ಆರ್‍ಎಸ್‍ಎಸ್ ಕಚೇರಿ ಗಳಿಗೆ ಬಿಗಿ ಭದ್ರತೆ ಒದಗಿಸಲಾಗಿದೆ.
ರಾಜ್ಯದ ಆರ್‍ಎಸ್‍ಎಸ್ ಕಚೇರಿ ಗಳ ಮೇಲೆ ದಾಳಿ ಬೆದರಿಕೆ ಸಂದೇಶ ಬಂದಿರುವ ಹಿನ್ನೆಲೆಯಲ್ಲಿ ಎಲ್ಲಾ ಕಚೇರಿ ಗಳಿಗೆ ಸೂಕ್ತ ಪೆÇಲೀಸ್ ರಕ್ಷಣೆ ಒದಗಿ ಸಲಾಗಿದೆ. ಉತ್ತರಪ್ರದೇಶದ ಎರಡು ಹಾಗೂ ಕರ್ನಾ ಟಕದ ನಾಲ್ಕು ಆರ್‍ಎಸ್‍ಎಸ್ ಕಚೇರಿಗಳನ್ನು ಧ್ವಂಸಗೊಳಿ ಸುವುದಾಗಿ ವಾಟ್ಸಪ್ ಸಂದೇಶವೊಂದನ್ನು ತಮಿಳುನಾಡಿನ ವ್ಯಕ್ತಿಯೊಬ್ಬ ಉತ್ತರಪ್ರದೇಶದ ವ್ಯಕ್ತಿಯೊಬ್ಬರಿಗೆ ಕಳುಹಿ ಸಿದ್ದು, ಇದಕ್ಕೆ ಸಂಬಂಧಿಸಿದಂತೆ ಮೊಕದ್ದಮೆ ದಾಖಲು ಮಾಡಲಾಗಿದೆ. ನಿಷೇಧಿತ ಉಗ್ರ
ಸಂಘಟನೆಯೊಂದಿಗೆ ತಾಲಿಬ್ ಹುಸೇನ್ ಸಂಪರ್ಕ ಇದೆ ಎಂಬ ಮಾಹಿತಿ ಆಧಾರದ ಮೇಲೆ ಜಮ್ಮು ಪೆÇಲೀಸರು ಮತ್ತು ಭದ್ರತಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಿ, ಕಳೆದ ಭಾನುವಾರ ವಶಕ್ಕೆ ತೆಗೆದುಕೊಂಡಿದ್ದವು. ಈತ ನಗರದಲ್ಲಿ ಲೋಡಿಂಗ್, ಅನ್‍ಲೋಡಿಂಗ್ ಕೆಲಸ ಮಾಡುತ್ತಿದ್ದಾಗಿ ಹೇಳಿಕೊಂಡಿದ್ದ. ಈತನಿಗೆ ಆಶ್ರಯ ನೀಡಿದ್ದ ಶ್ರೀರಾಮಪುರ ಮಸೀದಿ ಅಧ್ಯಕ್ಷ ಅನ್ವರ್ ಮಾವಡ ಪ್ರಕಾರ ಹುಸೇನ್ ಕಳೆದ ಹತ್ತು ವರ್ಷಗಳಿಂದ ರೈಲ್ವೆ ಸ್ಟೇಷನ್‍ನಲ್ಲಿ ಕೊರಿಯರ್ ಕೆಲಸ ಮಾಡುತ್ತಿದ್ದ. ಕೊರೊನಾ ಬಂದ ನಂತರ ಆತನಿಗೆ ಕೆಲಸವಿರಲಿಲ್ಲ. ಮಗು ಕೂಡಾ ಇತ್ತು. ಹಾಗಾಗಿ ಮಾನವೀಯತೆ ಆಧಾರದ ಮೇಲೆ ಮಸೀದಿ ಬಳಿ ಆಶ್ರಯ ಕೊಟ್ಟಿದ್ದೇವೆ. ಜಮ್ಮು ಪೆÇಲೀಸರು ಕಳೆದ ಒಂದು ವಾರದ ಹಿಂದೆಯೇ ಬಂದು ಪರಿಶೀಲನೆ ನಡೆಸಿ, ಹುಸೇನ್‍ನನ್ನು ಕರೆದುಕೊಂಡು ಹೋಗಿದ್ದಾರೆ. ಆನಂತರ ನಮಗೆ ಕಾಶ್ಮೀರದ ಕಾಲಾಕೋಟ್ ಮೂಲದವರು ಎಂದು ಗೊತ್ತಾಯಿತು. ಅವರು ಯಾವ ಸಂಘಟನೆಗೆ ಸೇರಿದವನು ಎಂಬುದರ ಬಗ್ಗೆ ನಮಗೆ ಮಾಹಿತಿ ಇಲ್ಲ. ತುಂಬಾ ಒಳ್ಳೆಯ ವ್ಯಕ್ತಿ. ಇಲ್ಲಿ ಎಂದೂ ಗಲಾಟೆ ಮಾಡಿಕೊಂಡಿರಲಿಲ್ಲ. ಹಿಂದೆ ಕಾಶ್ಮೀರದಲ್ಲಿ ಒಂದು ಮದುವೆಯಾಗಿದ್ದ, ಪತ್ನಿ ಅಸುನೀಗಿದ ನಂತರ ಬೆಂಗ ಳೂರಿಗೆ ಬಂದು ನೆಲೆಸಿ ಮತ್ತೊಂದು ಮದುವೆಯಾಗಿದ್ದ ಎಂದು ಮಾಹಿತಿ ನೀಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ನಗರದಲ್ಲಿ ನೆಲೆಸಿದ್ದ ಶಂಕಿತ ಉಗ್ರನಿಗೆ ಆಶ್ರಯ ನೀಡಿದ ವ್ಯಕ್ತಿಗಳು ಹಾಗೂ ಸಂಸ್ಥೆಯ ಬಗ್ಗೆ ನಮ್ಮ ಪೆÇಲೀಸರು ಜಮ್ಮು-ಕಾಶ್ಮೀರ್ ರಾಜ್ಯದ ಪೆÇಲೀಸರ ಜೊತೆ ಸಮನ್ವಯ ಸಾಧಿಸಿ, ತನಿಖೆ ತೀವ್ರಗೊಳಿಸಿದ್ದಾರೆ.

ಹೆಚ್ಚಿನ ವಿಚಾರಣೆಗಾಗಿ, ರಾಜ್ಯದ ಪೆÇಲೀಸರು ಜಮ್ಮು ಕಾಶ್ಮೀರದ ಪೆÇಲೀಸರೊಂದಿಗೆ ಸಂಪರ್ಕ ಹೊಂದಿದ್ದು, ತನಿಖೆ ಮುಂದುವರೆದಿದೆ. ಭಯೋತ್ಪಾದಕನಿಗೆ ಸಂಬಂಧಿಸಿ ದಂತೆ ಜಮ್ಮು ಕಾಶ್ಮೀರ ಪೆÇಲೀಸರಿಗೆ ಸರ್ಕಾರ ಅಗತ್ಯ ನೆರವು ಒದಗಿಸಲಾಗುವುದು ಎಂದರು.

Translate »