ಜನವರಿಯಿಂದ ನವೆಂಬರ್‌ವರೆಗೆ ಮೈಸೂರು ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ದರೋಡೆ, ಕಳವು ಸೇರಿ ೧೪೫ ಅಪರಾಧ ಪ್ರಕರಣ ವರದಿ
ಮೈಸೂರು

ಜನವರಿಯಿಂದ ನವೆಂಬರ್‌ವರೆಗೆ ಮೈಸೂರು ಜಿಲ್ಲೆಯಲ್ಲಿ ಕೊಲೆ, ಸುಲಿಗೆ, ದರೋಡೆ, ಕಳವು ಸೇರಿ ೧೪೫ ಅಪರಾಧ ಪ್ರಕರಣ ವರದಿ

November 24, 2021

೭೨ ಪ್ರಕರಣಗಳಲ್ಲಿ ೧.೬೩ ಕೋಟಿ ರೂ. ಮೌಲ್ಯದ ಮಾಲುಗಳ ವಶ: ವಾರಸುದಾರರ ವಶಕ್ಕೆ ಅವರವರ ವಸ್ತು

ಮೈಸೂರು, ನ. ೨೩(ಆರ್‌ಕೆ)- ಮೈಸೂರು ಜಿಲ್ಲೆಯಾ ದ್ಯಂತ ವಿವಿಧ ಠಾಣಾ ವ್ಯಾಪ್ತಿಯಲ್ಲಿ ೨೦೨೧ರ ಜನವರಿ ಯಿಂದ ನವೆಂಬರ್‌ವರೆಗೆ ಒಟ್ಟು ೧೪೫ ಅಪರಾಧ ಪ್ರಕರಣ ಗಳು ಸಂಭವಿಸಿವೆ ಎಂದು ಜಿಲ್ಲಾ ಪೊಲೀಸ್ ವರಿ ಷ್ಠಾಧಿಕಾರಿ ಆರ್. ಚೇತನ್ ತಿಳಿಸಿದ್ದಾರೆ.

ಮೈಸೂರಿನ ಜ್ಯೋತಿನಗರದಲ್ಲಿರುವ ಡಿಎಆರ್ ಕವಾ ಯತು ಮೈದಾನದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮದಲ್ಲಿ ದಕ್ಷಿಣ ವಲಯ ಐಜಿಪಿ ಪ್ರವೀಣ್ ಮಧುಕರ್ ಪವಾರ್, ವಾರಸುದಾರರಿಗೆ ಮಾಲುಗಳನ್ನು ಹಿಂದಿರುಗಿಸಿದರು.
೫ ದರೋಡೆ, ೮ ಸುಲಿಗೆ, ೧೮ ಮನೆ ಕಳ್ಳತನ, ೩೮ ದ್ವಿಚಕ್ರ ವಾಹನ ಕಳವು ಮತ್ತು ೩ ವಂಚನೆ ಪ್ರಕರಣಗಳಲ್ಲಿ ಪೊಲೀ ಸರು ಒಟ್ಟು ೧,೬೨,೭೬,೨೨೯ ರೂ. ಮೌಲ್ಯದ ಮಾಲುಗಳನ್ನು ವಶಪಡಿಸಿಕೊಂಡಿದ್ದು, ನ್ಯಾಯಾಲಯದ ಅನುಮತಿ ಪಡೆದು ವಾರಸುದಾರರಿಗೆ ಹಸ್ತಾಂತರಿಸಲಾಯಿತು. ಕಳೆದ ೧೧ ತಿಂಗಳಲ್ಲಿ ೪೨ ಹತ್ಯೆ ಪ್ರಕರಣಗಳು ಸಂಭವಿಸಿದ್ದು, ೨೩ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಲಾಗಿದೆ. ೨೨ ಚಿನ್ನದ ಅಪಹರಣ ಪ್ರಕರಣಗಳಲ್ಲಿ ೩೨,೯೯,೦೦೦ ರೂ. ಮೌಲ್ಯದ ಆಭರಣ ಕಳವಾಗಿದ್ದು, ಪತ್ತೆಯಾದ ೧೩ ಪ್ರಕರಣ ಗಳಲ್ಲಿ ೧೬,೭೨,೦೦೦ ರೂ. ಮೌಲ್ಯದ ಚಿನ್ನದ ಸರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ಚೇತನ್ ತಿಳಿಸಿದರು.

ಜಿಲ್ಲೆಯಾದ್ಯಂತ ೯ ದರೋಡೆ ಪ್ರಕರಣಗಳು ಸಂಭವಿ ಸಿದ್ದು, ಆ ಪೈಕಿ ೭ ಪತ್ತೆಯಾಗಿವೆ. ೫೨ ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ. ೧೧ ವಂಚನೆ ಪ್ರಕರಣ, ೬೫ ಅಪಹರಣ ಪ್ರಕರಣಗಳಲ್ಲಿ ೩೧ ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.
ಹುಣಸೂರು ಉಪವಿಭಾಗ: ಹುಣಸೂರು ಪಟ್ಟಣ ಠಾಣೆಯ ೧ ವಂಚನೆ ಹಾಗೂ ೧ ದರೋಡೆ ಪ್ರಕರಣದಲ್ಲಿ ಆರೋಪಿ ಗಳಾದ ಇಮ್ರಾನ್, ಮಿರ್ಜಾ ತನ್ವೀರ್ ಬೇಗ್, ಮೋಸಿನ್ ಬೇಗ್, ಅಫ್ರಿನ್, ಆಸಿಫ್ ಹುಸೇನ್, ಮಹಮದ್ ಅಜರುದ್ದೀನ್, ಶಿವರಾಮು ಅವರನ್ನು ಬಂಧಿಸಿ, ಅವರಿಂದ ೩೪ ಲಕ್ಷ ರೂ. ನಗದು, ೫೦೦ ಗ್ರಾಂ ಚಿನ್ನದ ಆಭರಣ ಹಾಗೂ ಒಂದು ಡಿಬಿಬಿಎಲ್ ಬಂದೂಕನ್ನು ವಶಪಡಿಸಿಕೊಳ್ಳಲಾಗಿದೆ.

ಹುಣಸೂರು ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ೧ ಕೊಲೆ ಮತ್ತು ೨ ದರೋಡೆ ಪ್ರಕರಣದ ಆರೋಪಿಗಳಾದ ಜವರಯ್ಯ, ಸುಭಾಷ್, ಕೈರೂಲ್ ಭಷರ್, ಸಿದ್ಧಾರ್ಥ, ಆದಿತ್ಯ, ನಿಖಿಲ್‌ರಾವ್, ಕಿಶೋರ್, ತೇಜಸ್, ರಾಹುಲ್ ಅವರನ್ನು ಬಂಧಿಸಿ ೧೨ ಲಕ್ಷ ರೂ. ಮೌಲ್ಯದ ಇನ್ನೋವಾ ಕಾರು, ೩.೫ ಲಕ್ಷ ರೂ. ಮೌಲ್ಯದ ಮಾರುತಿ ಸ್ವಿಫ್ಟ್ ಕಾರು ಹಾಗೂ ೨೪,೦೨,೫೦೦ ರೂ. ನಗದನ್ನು ವಶಪಡಿಸಿ ಕೊಳ್ಳಲಾಗಿದೆ. ಪಿರಿಯಾಪಟ್ಟಣ ಠಾಣಾ ಸರಹದ್ದಿನಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ನವೀನ್‌ಕುಮಾರ್, ಸುಮನ್, ಭರತ್, ಸುನಿಲ್, ಅನುರಾಜ್ ಹಾಗೂ ಮಂಜು ಎಂಬುವರನ್ನು ಬಂಧಿಸಿ ೧.೪೮ ಲಕ್ಷ ರೂ. ಬೆಲೆ ಬಾಳುವ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಮೈಸೂರು ಗ್ರಾಮಾಂತರ ಉಪ ವಿಭಾಗ: ಮೈಸೂರು ದಕ್ಷಿಣ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದ್ದ ದರೋಡೆ ಮತ್ತು ಕಳವು ಪ್ರಕರಣದಲ್ಲಿ ಆರೋಪಿಗಳಾದ ಉಮೇಶ್, ವಿಜಯ್, ನವೀನ್, ಪ್ರದೀಪ್‌ರನ್ನು ಬಂಧಿಸಲಾಗಿದ್ದು, ಅವರಿಂದ ೩.೨೫ ಲಕ್ಷ ರೂ. ಮೌಲ್ಯದ ೨ ಆಟೋ, ೩ ಮೊಬೈಲ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಲವಾಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಸುಲಿಗೆ ಪ್ರಕ ರಣದಲ್ಲಿ ನಂಜನಗೂಡಿನ ಗಿರೀಶ ಎಂಬುವನನ್ನು ಬಂಧಿಸಿ ೫,೮೮,೦೦೦ ರೂ. ಬೆಲೆಬಾಳುವ ೧೪೭ ಗ್ರಾಂ ಚಿನ್ನಾಭರಣ ವನ್ನು ವಶಪಡಿಸಿಕೊಳ್ಳಲಾಗಿದೆ. ಜಯಪುರ ಠಾಣಾ ವ್ಯಾಪ್ತಿಯ ಮನೆಗಳವು ಪ್ರಕರಣದಲ್ಲಿ ಪ್ರವೀಣ್ ಎಂಬಾತನನ್ನು ಬಂಧಿಸಿ ೧.೦೫ ಲಕ್ಷ ರೂ. ಮೌಲ್ಯದ ಆಭರಣಗಳನ್ನು ವಶಪಡಿ ಸಿಕೊಳ್ಳಲಾಗಿದೆ ಎಂದು ಎಸ್ಪಿ ಚೇತನ್ ತಿಳಿಸಿದ್ದಾರೆ.

ನಂಜನಗೂಡು ಉಪ ವಿಭಾಗ: ಬನ್ನೂರು ಠಾಣಾ ವ್ಯಾಪ್ತಿ ಯಲ್ಲಿ ನಡೆದಿದ್ದ ೨ ಮನೆ ಕಳವು ಪ್ರಕರಣಗಳ ಆರೋಪಿ ಗಳಾದ ದಿಲೀಪ್‌ಕುಮಾರ್, ಜಗದೀಶ್, ತ್ಯಾಗರಾಜು ಹಾಗೂ ನಾಗೇಂದ್ರ ಎಂಬುವರನ್ನು ಬಂಧಿಸಿ ಅವರಿಂದ ೪.೩೯ ಲಕ್ಷ ರೂ. ಬೆಲೆಬಾಳುವ ಚಿನ್ನಾಭರಣ ಹಾಗೂ ೧೫,೦೦೦ ರೂ. ನಗದನ್ನು ವಶಪಡಿಸಿಕೊಳ್ಳಲಾಗಿದೆ.

ನಂಜನಗೂಡು ಗ್ರಾಮಾಂತರ ಠಾಣಾ ವ್ಯಾಪ್ತಿಯ ಸುಲಿಗೆ ಪ್ರಕರಣದಲ್ಲಿ ಚಂದನ ಹಾಗೂ ಸುಧಾರಾಣ ಅವರನ್ನು ಬಂಧಿಸಿ ಅವರಿಂದ ೨.೯೬ ಲಕ್ಷ ರೂ. ಮೌಲ್ಯದ ಆಭರಣ ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಅದರಂತೆ ಬಿಳಿಗೆರೆ ಠಾಣಾ ವ್ಯಾಪ್ತಿಯ ಕೊಲೆ ಪ್ರಕರಣ ಭೇದಿಸಿ ಆರೋಪಿ ಸುಜಯ್ ಕುಮಾರ್ ಎಂಬುವನನ್ನು ಬಂಧಿಸಿ ೧೬,೦೦೦ ರೂ. ಬೆಲೆ ಬಾಳುವ ಚಿನ್ನಾಭರಣವನ್ನು ವಶಪಡಿಸಿಕೊಳ್ಳಲಾಗಿದೆ. ಅಡಿಷ ನಲ್ ಎಸ್ಪಿ ಆರ್.ಶಿವಕುಮಾರ್, ಡಿವೈಎಸ್ಪಿಗಳಾದ ಸುಮಿತ್, ಗೋವಿಂದರಾಜು, ರವಿಪ್ರಸಾದ್, ಇನ್ಸ್ ಪೆಕ್ಟರ್‌ಗಳಾದ ರವಿಕುಮಾರ್, ಚಿಕ್ಕಸ್ವಾಮಿ, ಪಿ.ಜಗದೀಶ್, ಶಶಿಕುಮಾರ್, ಚಿಕ್ಕರಾಜಶೆಟ್ಟಿ, ಶಿವನಂಜಶೆಟ್ಟಿ, ಸಬ್ ಇನ್ಸ್ಪೆಕ್ಟರ್‌ಗಳಾದ ಆರತಿ, ರಾಮಕುಮಾರ್, ಚಂದ್ರು, ಕುಸುಮ, ಮೋಹನ್ ಕುಮಾರ್, ನಿಖಿತ, ಕೆಂಪಣ್ಣ, ತಿರುಮಲ್ಲೇಶ್, ಸದಾಶಿವ, ರಾಧ, ಲತೇಶ್‌ಕುಮಾರ್ ಹಾಗೂ ಇತರ ಪೊಲೀಸ್ ಅಧಿಕಾರಿಗಳು ಇಂದಿನ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

 

ಶ್ರೀರಾಮ ಮಂದಿರದಲ್ಲಿ ಕಳವು ಮಾಡಿದ್ದ ೧೦ ಪ್ರಾಚೀನ ಛಾಯಾಚಿತ್ರಗಳ ವಶ
ಮೈಸೂರು, ನ.೨೩(ಆರ್‌ಕೆ)-ಕೆ.ಆರ್.ನಗರ ತಾಲೂಕು, ಚಂದಗಾಲು ಗ್ರಾಮದ ಶ್ರೀರಾಮ ಮಂದಿರ ಹಾಗೂ ಸಾರ್ವ ಜನಿಕ ಗ್ರಂಥಾಲಯದಲ್ಲಿ ಕಳವು ಮಾಡಿದ್ದ ೧೦೦ ವರ್ಷಗಳ ಹಳೆಯದಾದ ಅಪರೂಪದ ಪ್ರಾಚೀನ ೧೦ ಛಾಯಾಚಿತ್ರ ಗಳನ್ನು ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಆ ಸಂಬAಧ ಮೈಸೂರಿನ ಇಬ್ಬರು ಡಿಸೈನರ್ (ವಿನ್ಯಾಸ ಗಾರರು)ಗಳನ್ನು ಬಂಧಿಸಿ ಅವರಿಂದ ಲಕ್ಷಾಂತರ ರೂ. ಬೆಲೆಬಾಳುವ ಚಿನ್ನದ ಕಸೂತಿ ಇರುವ ೧೦ ಛಾಯಾಚಿತ್ರ ಗಳನ್ನು ಕೆ.ಆರ್.ನಗರ ಪೊಲೀಸರು ವಶಪಡಿಸಿಕೊಂಡಿ ದ್ದಾರೆ ಎಂದು ಎಸ್ಪಿ ಆರ್.ಚೇತನ್ ತಿಳಿಸಿದ್ದಾರೆ.

ಕೆಲ ತಿಂಗಳ ಹಿಂದೆ ಚಂದಗಾಲು ಗ್ರಾಮದ ಶ್ರೀರಾಮ ಮಂದಿರ ಹಾಗೂ ಗ್ರಂಥಾಲಯದಲ್ಲಿ ಹಾಕಲಾಗಿದ್ದ ೧೦ ಅಪರೂಪದ ಆಂಟಿಕ್ ಫೋಟೋಗಳನ್ನು ಕಳವು ಮಾಡ ಲಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಕೆ.ಆರ್.ನಗರ ಠಾಣೆ ಪೊಲೀಸರು, ತನಿಖೆ ಆರಂಭಿಸಿದಾಗ ಅಪರೂಪದ ಪ್ರಾಚೀನ ಛಾಯಾಚಿತ್ರಗಳನ್ನು ೪.೫ ಲಕ್ಷ ರೂ. ಬೆಲೆ ನಿಗದಿ ಮಾಡಿ ಮಾರಾಟ ಮಾಡಲು ಆನ್‌ಲೈನ್‌ನಲ್ಲಿ ಬಿಡ್ ಮಾಡಿರುವುದು ತಿಳಿಯಿತು. ಈ ಸುಳಿವಿನ ಜಾಡು ಹಿಡಿದ ಪೊಲೀಸರು, ತಾವು ಸಹ ಬಿಡ್‌ನಲ್ಲಿ ಭಾಗವಹಿಸಿ ಖರೀದಿ ಸುವ ಸೋಗಿನಲ್ಲಿ ಮುಂದಾಗಿ ಆಸಕ್ತಿ ತೋರುತ್ತಿದ್ದಂತೆಯೇ ಬಿಡ್ ಮಾಡಿದ್ದ ವ್ಯಕ್ತಿಗಳ ಸಂಪರ್ಕ ಸಿಕ್ಕಿತು. ಅವರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದಾಗ ತಾವೇ ಛಾಯಾ ಚಿತ್ರಗಳನ್ನು ಕಳವು ಮಾಡಿ ತಂದು ಅವುಗಳಿಗೆ ಹೊಳಪು ನೀಡಿ ಮಾರಾಟಕ್ಕಿಟ್ಟಿರುವುದಾಗಿ ಇಬ್ಬರು ಡಿಸೈನರ್‌ಗಳು ಒಪ್ಪಿಕೊಂಡರು ಎಂದು ಎಸ್‌ಪಿ ಆರ್.ಚೇತನ್ ತಿಳಿಸಿದರು.

ಸುಮಾರು ೯೦ ವರ್ಷ ಹಳೆಯದಾದ ಈ ಛಾಯಾಚಿತ್ರ ಗಳನ್ನು ಮೈಸೂರು ಮಹಾರಾಜರು ಭೇಟಿ ನೀಡಿದ್ದಾಗ ನೆನಪಿ ಗಾಗಿ ಚಂದಗಾಲು ದೇವಸ್ಥಾನಕ್ಕೆ ಉಡುಗೊರೆಯಾಗಿ ನೀಡಿದ್ದರು ಎನ್ನಲಾಗಿದೆ. ನಂತರ ಆ ಪೈಕಿ ೨ ಆಂಟಿಕ್ ಫೋಟೋಗಳನ್ನು ಪಕ್ಕದಲ್ಲೇ ಇರುವ ಸಾರ್ವಜನಿಕ ಗ್ರಂಥಾ ಲಯದಲ್ಲೂ ಇರಿಸಲಾಗಿತ್ತು ಎಂಬುದಾಗಿ ತಿಳಿದು ಬಂದಿದೆ ಎಂದು ಎಸ್ಪಿ ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸಿದರು.

ಈ ಆಂಟಿಕ್ ಫೋಟೋಗಳ ಮೌಲ್ಯ ಮತ್ತು ಪ್ರಾಮು ಖ್ಯತೆ ತಿಳಿಯದ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಗ್ರಂಥಾಲಯ ಮೇಲ್ವಿಚಾರಕರು, ಕಳವಾದಾಗ ದೂರು ನೀಡಲೂ ಆಸಕ್ತಿ ತೋರುತ್ತಿರಲಿಲ್ಲ. ಆದರೆ ನಾವೇ ಆಸಕ್ತಿ ವಹಿಸಿ ದೂರು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿ ಪತ್ತೆ ಮಾಡಿದ ಮೇಲೆ ಅವುಗಳ ಮೌಲ್ಯ ಎಷ್ಟೆಂಬುದು ತಿಳಿಯಿತು ಎಂದು ಚೇತನ್ ವಿವರಿಸಿದರು.

ಕಳವು ಮಾಡಿದ್ದ ಇಬ್ಬರೂ ಆರೋಪಿಗಳು ಸಹ ಪ್ರಾಚೀನ ಛಾಯಾಚಿತ್ರಗಳ ಬಗ್ಗೆ ಅರಿವುಳ್ಳ ಡಿಸೈನರ್‌ಗಳಾಗಿದ್ದು, ಅವುಗಳನ್ನು ಆನ್‌ಲೈನ್‌ನಲ್ಲಿ ಬಿಡ್‌ಗಿಟ್ಟು ಲಕ್ಷಾಂತರ ರೂ.ಗಳಿಗೆ ಮಾರಾಟ ಮಾಡಲು ಪ್ಲಾನ್ ಮಾಡಿದ್ದರು. ಈಗ ಅವರು ಜೈಲಿನಲ್ಲಿದ್ದಾರೆ ಎಂದು ತಿಳಿಸಿದರು.

Translate »