ಮೈಸೂರು ಸ್ವಚ್ಛ ನಗರಿಯಲ್ಲ; ಕೊಚ್ಚೆ, ಗುಂಡಿಗಳ ನಗರಿ…!
ಮೈಸೂರು

ಮೈಸೂರು ಸ್ವಚ್ಛ ನಗರಿಯಲ್ಲ; ಕೊಚ್ಚೆ, ಗುಂಡಿಗಳ ನಗರಿ…!

November 24, 2021

ಮೈಸೂರು, ನ.೨೩(ಜಿಎ)- ಮೈಸೂರು ನಗರದಲ್ಲಿ ಯಾವುದಾದರೂ ಸುಸ್ಥಿತಿಯಲ್ಲಿರುವ ರಸ್ತೆಗಳಿದ್ದರೆ ತಿಳಿಸಿ? ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗುವಷ್ಟರಲ್ಲಿ ಬೆನ್ನು, ಎದೆ ಹಾಗೂ ಕೈಕಾಲುಗಳೆಲ್ಲವೂ ನೋವು ಬರುತ್ತವೆ. ಮೈಕೈ ನೋವಿನ ಮಾತ್ರೆ ಇಲ್ಲದೆ ನಿದ್ರೆಯೇ ಇಲ್ಲದಂತಾಗಿದೆ ಎಂಬುದು ಫುಡ್ ಡೆಲಿವೆರಿ ಮಾಡುವ ಯುವಕರ ನಿತ್ಯಾನುಭವದ ನುಡಿಗಳು….!

ಸ್ವಚ್ಛ ನಗರಿ, ಸಾಂಸ್ಕೃತಿಕ ನಗರಿ ಎಂದೆಲ್ಲಾ ಬಿರುದುಗಳನ್ನು ಪಡೆದಿರುವÀ ಮೈಸೂರು ನಗರವಿಂದು ಗುಂಡಿಗಳ ನಗರಿಯಾಗಿದೆ ಎಂಬುದಕ್ಕೆ ಫುಡ್ ಡೆಲಿವೆರಿ ಯುವಕರ ಮಾತುಗಳೇ ಸಾಕ್ಷಿವಾಗಿವೆ. ಸ್ಕೂಟರ್, ಬೈಕ್‌ಗಳಷ್ಟೇ ಅಲ್ಲದೆ ಐಷಾರಾಮಿ ಕಾರುಗಳಲ್ಲಿಯೂ ಸಂಚರಿಸುವುದು ಸಾಹಸವೇ ಆಗಿದೆ. ದಿವಾನ್ಸ್ ರಸ್ತೆ, ನ್ಯೂ ಕಾಂತರಾಜ್ ಅರಸು ರಸ್ತೆ, ಕಾಳಿದಾಸ ರಸ್ತೆ, ಮಹದೇವಪುರ ಮುಖ್ಯ ರಸ್ತೆ, ಕುವೆಂಪುನಗರ, ಸಿದ್ದಾರ್ಥನಗರ, ರಾಘವೇಂದ್ರನಗರ, ವಿಜಯನಗರದ ನಾಲ್ಕೂ ಹಂತದ ರಸ್ತೆಗಳು, ಯಾದವಗಿರಿ, ಬನ್ನಿಮಂಟಪ, ಬೃಂದಾವನ ಬಡಾವಣೆ, ಬೋಗಾದಿ ೨ನೇ ಹಂತ, ಹಳ್ಳಿ ಬೋಗಾದಿ, ಉದಯಗಿರಿ, ರಾಜೀವ್ ನಗರ, ಶಾಂತಿನಗರ, ಕೃಷ್ಣಮೂರ್ತಿಪುರಂ, ಕೆ.ಜಿ.ಕೊಪ್ಪಲು, ಹೆಬ್ಬಾಳು, ಮಾನಸ ಗಂಗೋತ್ರಿ ಸೇರಿದಂತೆ ಮೈಸೂರು ನಗರದ ಎಲ್ಲಾ ಬಡಾವಣೆಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಸಂಚಾರಕ್ಕೆ ಸಂಚಕಾರ ತಂದೊಡ್ಡಿತ್ತಿವೆ.

ವಿದ್ಯಾರ್ಥಿಗಳಿಗೆ ತಪ್ಪದ ಸಂಕಟ: ಜೆಎಸ್‌ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದಿಂದ ತೊಣಚಿಕೊಪ್ಪಲು ಮಾರ್ಗವಾಗಿ ಚಲಿಸುವ ಚದುರಂಗ ರಸ್ತೆಯೂ ಸಂಪೂರ್ಣ ಗುಂಡಿಗಳಿAದ ಕೂಡಿದ್ದು, ಹಾಕಿರುವ ಡಾಂಬರ್ ಕಿತ್ತು ಗುಂಡಿಗಳು ಇನ್ನೂ ದೊಡ್ಡದಾಗಿದೆ. ಇದರಿಂದ ಮಳೆ ಬಂದರೆ ಮಳೆ ನೀರು ಗುಂಡಿಯಲ್ಲಿ ಶೇಖರಣೆಯಾಗಿ ಗುಂಡಿ ಕಾಣದೆ ವೇಗವಾಗಿ ಚಲಿಸುವ ವಾಹನಗಳು ಬಂದು ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಮೇಲೆ ಕೆಸರು ಹಾರಿಸಿರುವ ಘಟನೆಗಳು ನಡೆದಿದೆ. ಈ ಮಾರ್ಗವಾಗಿ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸಂಚರಿಸಿ ಕೆಲವೊಂದು ಸಣ್ಣ ಪುಟ್ಟ ಅಪಘಾತಗಳು ಸಂಭವಿಸಿವೆ.

ದ್ವಿಚಕ್ರ ವಾಹನಗಳ ಪರದಾಟ: ಬೋಗಾದಿ ಎರಡನೇ ಹಂತದ ಕೆಲವು ರಸ್ತೆಗಳಲ್ಲಿ ಭಾರೀ ಪ್ರಮಾಣದ ಹೊಂಡಗಳು ನಿರ್ಮಾಣವಾಗಿವೆ. ದ್ವಿಚಕ್ರ ವಾಹನ ಸವಾರರು ಸಂಚರಿಸಲು ಆತಂಕಕಾರಿಯಾಗಿದ್ದು. ಕೆಲ ಭಾಗಗಳಲ್ಲಿ ಬೀದಿದೀಪಗಳು ಸಹ ಇಲ್ಲ. ರಾತ್ರಿ ವೇಳೆಯಲ್ಲಿ ಬಹಳ ಎಚ್ಚರಿಕೆಯಿಂದ ವಾಹನ ಸಂಚಾರ ಮಾಡಬೇಕಾದ ಸ್ಥಿತಿ ಇದೆ.

ರಸ್ತೆ ಕುಸಿತ: ನಗರದಲ್ಲಿ ಹೆಚ್ಚು ಜನರು ಸಂಚರಿಸುವ ರಸ್ತೆಗಳಲ್ಲಿ ನಗರದ ಶಿವರಾಂಪೇಟೆ ರಸ್ತೆಯೂ ಒಂದು. ಈ ರಸ್ತೆಯಲ್ಲಿ ಅತಿ ಹೆಚ್ಚು ವ್ಯಾಪಾರಿಕ ವಸ್ತುಗಳ ಖರೀದಿಗೆ ಜನರು ಸಂಚರಿಸುತ್ತಾರೆ. ಅಂತಹ ರಸ್ತೆಯಲ್ಲಿ ರಸ್ತೆ ಸಣ್ಣ ಪ್ರಮಾಣದಲ್ಲಿ ಕುಸಿದಿದೆ. ಶೃಂಗಾರ್ ಹೋಟೆಲ್ ಮುಂಭಾಗ ರಸ್ತೆ ಸಣ್ಣ ಪ್ರಮಾಣದಲ್ಲಿ ಕುಸಿದಿದ್ದು ಗುಂಡಿ ನಿರ್ಮಾಣವಾಗಿದೆ. ವಾಹನ ಸವಾರರು ತಮ್ಮ ಕಾರ್ಯಗಳ ನಡುವೆ ಈ ಗುಂಡಿಯ ಬಗ್ಗೆ ಗಮನಹರಿಸದೆ ಅದರ ಸುತ್ತಲೂ ಸಂಚರಿಸುತ್ತಿದ್ದಾರೆ ಇದರಿಂದ ಸಣ್ಣ ಪ್ರಮಾಣದಲ್ಲಿರುವ ಗುಂಡಿ ದೊಡ್ಡದಾಗಿ ಅನಾಹುತ ಸಂಭನವಿಸುವುದರ ಮೊದಲು ಅಧಿಕಾರಿಗಳು ಇತ್ತ ಗಮನಹರಿಸಬೇಕಾಗಿದೆ ಎಂದು ಸ್ಥಳೀಯರು ಕಿಡಿಕಾರಿದರು.
ಮಳೆ ನಿಂತ ಮೇಲೆ ದುರಸ್ತಿಯಂತೆ: ಮೈಸೂರಿನಲ್ಲಿ ಸುರಿಯುತ್ತಿರುವ ಮಳೆ ನಿಂತ ಬಳಿಕ ರಸ್ತೆಗಳ ದುರಸ್ತಿ ಕಾರ್ಯ ನಡೆಸಲಾಗುವುದು ಪಾಲಿಕೆ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದುದ್ದು, ಮಳೆಯಿಂದಾಗಿ ಹಲವಾರು ರಸ್ತೆಗಳು ಶೋಚನೀಯ ಸ್ಥಿತಿ ತಲುಪಿವೆ. ಬರೀ ದುರಸ್ತಿಗೆ ಕೋಟ್ಯಾಂತರ ರೂ. ಖರ್ಚಾ ಗಬಹುದು. ದಸರಾ ಸಂದ ರ್ಭದಲ್ಲಿಯೇ ರಸ್ತೆಗಳಿಗೆ ಗುಂಡಿ ಮುಚ್ಚಲು ಹೆಣಗಾಡು ತ್ತಿದ್ದ ಪಾಲಿಕೆಯವರು, ಎಲ್ಲಾ ರಸ್ತೆಗಳಿಗೂ ಡಾಂಬರೀ ಕರಣ ಸಾಧ್ಯವೆ ಎಂಬ ಅನು ಮಾನ ಉಂಟಾಗುತ್ತಿದೆ ಎಂದು ಪ್ರಜ್ಞಾವಂತ ನಾಗರಿಕರು ‘ಮೈಸೂರು ಮಿತ್ರ’ನಿಗೆ ಪ್ರಶ್ನಿಸಿದರು.

Translate »