ಪ್ರೇಕ್ಷಕರ ಕಣ್ಮನ ಸೆಳೆದ ಕಿತ್ತೂರು ರಾಣ ಚೆನ್ನಮ್ಮರ ನೃತ್ಯರೂಪಕ
ಮೈಸೂರು

ಪ್ರೇಕ್ಷಕರ ಕಣ್ಮನ ಸೆಳೆದ ಕಿತ್ತೂರು ರಾಣ ಚೆನ್ನಮ್ಮರ ನೃತ್ಯರೂಪಕ

November 24, 2021

ಮೈಸೂರು, ನ.೨೩(ಎಂಕೆ)- ವೀರ ವನಿತೆ, ಸ್ವಾತಂತ್ರö್ಯ ಹೋರಾಟಗಾರ್ತಿ ಕಿತ್ತೂರು ರಾಣ ಚೆನ್ನಮ್ಮರ ನೃತ್ಯರೂಪಕ ಕಲಾಭಿಮಾನಿಗಳ ಮೈನವಿರೇಳಿಸಿತು.
ಮೈಸೂರಿನ ಜೆಎಲ್‌ಬಿ ರಸ್ತೆಯಲ್ಲಿರುವ ನಾದಬ್ರಹ್ಮ ಸಂಗೀತ ಸಭಾದಲ್ಲಿ ವಸುಂಧರ ಪ್ರದರ್ಶಕ ಕಲೆಗಳ ಕೇಂದ್ರದ ವತಿಯಿಂದ ಕಲಾಪೋಷಕ ದಿವಂಗತ ಕೆ.ವಿ.ಮೂರ್ತಿ ಸಂಸ್ಮರಣಾರ್ಥ ಹಮ್ಮಿಕೊಂಡಿರುವ ೭ ದಿನಗಳ ‘ವಸುಂಧರೋತ್ಸವ-೨೦೨೧’ದಲ್ಲಿ ಕಿತ್ತೂರು ರಾಣ ಚೆನ್ನಮ್ಮಳ ಜೀವನ, ಸ್ವಾತಂತ್ರö್ಯ ಹೋರಾಟ ಕುರಿತು ರೂಪು ಗೊಂಡಿದ್ದ ಭರತನಾಟ್ಯ ನೃತ್ಯ ರೂಪಕ ನೋಡುಗರ ಕಣ್ಮನ ಸೆಳೆಯಿತು.

ಕಿತ್ತೂರು ರಾಣ ಚೆನ್ನಮ್ಮಳ ನೃತ್ಯ ರೂಪಕಕ್ಕೆ ಹೆಜ್ಜೆ ಹಾಕಿದ ಖ್ಯಾತ ಭರನಾಟ್ಯ ಕಲಾವಿದೆ ವಸುಂಧರ ದೊರೆಸ್ವಾಮಿ ಅವರ ಅಮೋಘ ನೃತ್ಯಾಭಿನಯ ನೋಡುಗರಿಗೆ ರೋಮಾಂಚನ ನೀಡಿತು. ರಾಣ ಚೆನ್ನಮ್ಮಳ ವೀರಾವೇಷದ ಹೋರಾಟ ದೃಶ್ಯಗಳು ಕಣ ್ಣಗೆ ಕಟ್ಟುವಂತಿತ್ತು. ಚೆನ್ನಮ್ಮಳ ಯುದ್ಧ ಕಲಿಕಾ ಆಶಕ್ತಿ, ಬ್ರಿಟಿಷರಿಂದ ದೇಶವನ್ನು ಕಾಪಾಡಲು ಮಾಡಿದ ಹೋರಾಟ ಚಿತ್ರಣ ವನ್ನೇ ತರೆದಿಡಲಾಯಿತು.

ರಾಣ ಚೆನ್ನಮ್ಮಳಂತೆಯೇ ವೇದಿಕೆ ಯಲ್ಲಿ ಕಾಣುತ್ತಿದ್ದ ವಸುಂಧರ ದೊg ೆಸ್ವಾಮಿ ಅವರು, ತಮ್ಮ ಭರತನಾಟ್ಯ ಕೌಶಲ್ಯತೆ ಯಿಂದಲೇ ಅಭಿಮಾನಿಗಳಿಂದ ಅಪಾರ ಮೆಚ್ಚುಗೆಗೆ ಪಾತ್ರರಾದರು. ಪ್ರತಿ ಯೊಂದು ಸನ್ನಿವೇಶಕ್ಕೆ ತಕ್ಕಂತೆ ಹೆಜ್ಜೆ ಹಾಕಿದ ಅವರು, ಚೆನ್ನಮ್ಮಳಿಗಿದ್ದ ರಾಷ್ಟಾçಭಿಮಾನವನ್ನು ಅಚ್ಚುಕಟ್ಟಾಗಿ ತಿಳಿಸಿ ಕೊಟ್ಟರು. ಅವರೊಂದಿಗೆ ಗಾಯನದಲ್ಲಿ ವಿದ್ವಾನ್ ಡಿ.ಎಸ್.ಶ್ರೀವತ್ಸ, ಡಾ.ಜ್ಯೋತಿ ಶಂಕರ್, ನಟುವಾಂಗದಲ್ಲಿ ವಿದ್ವಾನ್ ಸುಜೇಶ್ ಶಾನ್‌ಬಾಗ್, ಮೃದಂಗದಲ್ಲಿ ವಿದ್ವಾನ್ ಜನಾರ್ಧನ್ ರಾವ್, ಕೊಳಲು ವಿದ್ವಾನ್ ನಿತೀಶ್ ಅಮ್ಮಣ್ಣಯ್ಯ, ರಿದಂ ಪ್ಯಾಡ್‌ನಲ್ಲಿ ವಿದ್ವಾನ್ ಪ್ರಸನ್ನಕುಮಾರ್ ಸಹಕಾರ ನೀಡಿದರು.

ಉದ್ಘಾಟನೆ: ಇದಕ್ಕೂ ಮುನ್ನ ‘ವಸುಂಧ ರೋತ್ಸವ-೨೦೨೧’ ಕಾರ್ಯಕ್ರಮವನ್ನು ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಉದ್ಘಾಟಿಸಿದರು. ಬಳಿಕ ಮಾತ ನಾಡಿದ ಅವರು, ಒಬ್ಬ ಕಲಾವಿದನಿಗೆ ನಿರಂತರ ಸಾಧನೆ ಮಾಡುವ ಹಂಬಲವಿರಬೇಕು. ವೇದಿಕೆಯ ಮೇಲೆ ಪ್ರದರ್ಶನ ನೀಡುವುದಕ್ಕೂ ಹೆಚ್ಚಿನದಾಗಿ ಪ್ರತಿನಿತ್ಯ ಅಭ್ಯಾಸ ಮಾಡುವುದು ಅಗತ್ಯ ವಾಗಿರುತ್ತದೆ. ಇದನ್ನು ರೂಡಿಸಿಕೊಂಡರೆ ಮಾತ್ರ ಸಾಧನೆ ಸಾಧ್ಯ. ಈ ನಿಟ್ಟಿನಲ್ಲಿ ವಸುಂಧರ ದೊರೆಸ್ವಾಮಿ ಅವರು ಭರತ ನಾಟ್ಯದ ಜೊತೆಗೆ ಯೋಗ ಅಧ್ಯಯ ನದಲ್ಲೂ ತೊಡಗಿಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸ್ವಾತಂತ್ರö್ಯ ಸಂಗ್ರಾಮ ಸಂದರ್ಭದಲ್ಲಿ ಒಬ್ಬ ಹೆಣ್ಣು ಮಗಳಾಗಿ ಪರಕೀಯರ ದಾಳಿಯನ್ನು ಧೈರ್ಯ, ಸಾಹಸದಿಂದ ಎದುರಿಸಿದ ಕೀರ್ತಿ ಕಿತ್ತೂರು ರಾಣ ಚೆನ್ನಮ್ಮ ಅವರದು. ಅವರ ಕುರಿತಾದ ನೃತ್ಯರೂಪಕ ಆಯೋಜನೆ ಮಾಡಿರುವುದು ಶ್ಲಾಘನೀಯ. ಅದೇ ರೀತಿಯಾಗಿ ಕಲೆಗಳ ಉಳಿವು ಮತ್ತು ಅವುಗಳ ಬೆಳವಣ ಗೆ ಸಹಕಾರ ನೀಡಿದ ಕೆ.ವಿ.ಮೂರ್ತಿ ಅವರನ್ನು ಸ್ಮರಿಸಬೇಕಾಗಿದೆ ಎಂದರು.
ವೃತ್ತಿಯಲ್ಲಿ ಇಂಜಿನಿಯರ್ ಆಗಿದ್ದರೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋ ಜನೆಗೆ ಬೆನ್ನುಲುಬಾಗಿದ್ದ ಕೆ.ವಿ.ಮೂರ್ತಿಯವರು ವಿಶೇಷ ಕಲಾಪೋಷಕರಾಗಿದ್ದಾರೆ. ಕಲೆಗೆ ಪ್ರೋತ್ಸಾಹ ನೀಡುತ್ತಲೇ ಸಂಗೀತ ಮತ್ತು ನೃತ್ಯದ ಬಗ್ಗೆ ತಿಳಿದು ಕೊಂಡಿದ್ದರು ಎಂದು ಹೇಳಿದರು.ಉದ್ಯಮಿ ಜಗನ್ನಾಥ್ ಶೆಣೈ, ರೋಟರಿ ಉತ್ತರ ವಲಯದ ಅಧ್ಯಕ್ಷ ಎಲ್.ಚನ್ನಬಸವರಾಜು, ಸವಿತಾ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.

Translate »