ಚಾಮುಂಡಿಬೆಟ್ಟ ಕಾಪಾಡಿ… ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಡಾ.ಎಸ್.ಎಲ್.ಭೈರಪ್ಪ ಪತ್ರದ ಮೂಲಕ ಮನವಿ
ಮೈಸೂರು

ಚಾಮುಂಡಿಬೆಟ್ಟ ಕಾಪಾಡಿ… ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಡಾ.ಎಸ್.ಎಲ್.ಭೈರಪ್ಪ ಪತ್ರದ ಮೂಲಕ ಮನವಿ

November 24, 2021

ಮೈಸೂರು, ನ. ೨೩- ಚಾಮುಂಡಿಬೆಟ್ಟದ ಪ್ರಾಕೃತಿಕ ಸೌಂದರ್ಯ ರಕ್ಷಣೆಗಾಗಿ ನಮ್ಮ ನಗರದ ಕಳಕಳಿಯುಳ್ಳ ನಾಗರಿಕರು ಮತ್ತು ಎನ್‌ಜಿಓ, ಮೈಸೂರು ಗ್ರಾಹಕರ ಪರಿಷತ್ (ಎಂಜಿಪಿ) ಅಭಿಯಾನವನ್ನೇ ಆರಂಭಿಸಿದೆ. ಕೇಂದ್ರ ಸರ್ಕಾರದ ಉದ್ದೇಶಿತ ‘ಪ್ರಸಾದ’ ಯೋಜನೆಯು ಸೇರಿದಂತೆ ಅನೇಕ ನಿರ್ಮಾಣ ಪ್ರಕ್ರಿಯೆಗಳಿಂದ ಚಾಮುಂಡಿಬೆಟ್ಟಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಮನವರಿಕೆ ಮಾಡಿಕೊಡುವ ನಿರಂತರ ಪ್ರಯತ್ನ ಸಾಗಿದೆ. ಕೊನೆಯ ಪ್ರಯತ್ನವಾಗಿ, ನಮ್ಮ ನಾಡಿನ ಪ್ರಸಿದ್ಧ ಲೇಖಕ ಹಾಗೂ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪನವರು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ವಿವರವಾದ ಪತ್ರವೊಂದನ್ನು ಬರೆದು, ಈ ದೇಗುಲ ಬೆಟ್ಟದಲ್ಲಿನ ವಿಧ್ವಂಸಕತೆಯನ್ನು ನಿಲ್ಲಿಸಲು ಸ್ವತಃ ಮುಂದಾಗುವAತೆ ಕರೆ ಕೊಟ್ಟಿದ್ದಾರೆ.

ಭೈರಪ್ಪನವರು ಪ್ರಧಾನಿ ಅವರಿಗೆ ಬರೆದಿರುವ ಪೂರ್ಣ ಪತ್ರವನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ.

ಗೌರವಾನ್ವಿತ ಪ್ರಧಾನಮಂತ್ರಿ ಮೋದಿ ಜೀ,
“ಪ್ರಸಾದ” ಯೋಜನೆಯಲ್ಲಿ ಅಂತರ್ಗತವಾಗಿರುವ ಊಹಾತ್ಮಕ ಮತ್ತು ಸೌಂದರ್ಯಕರಣದ ಪರಿಕಲ್ಪನೆಯ ನೈಜ ಭಾವದಿಂದ ಚಾಮುಂಡಿಬೆಟ್ಟದಲ್ಲಿ ಆಧ್ಯಾತ್ಮಿಕ ಪ್ರವಾಸೋದ್ಯಮ ಉತ್ತೇಜಿ ಸಲು ನಿಮ್ಮ ಪ್ರವಾಸೋದ್ಯಮ ಸಚಿವಾಲಯಕ್ಕೆ ಹೇಳುವಂತೆ ಕೋರಿ ತಮಗೆ ಈ ಪತ್ರ ಬರೆಯುತ್ತಿದ್ದೇನೆ.

ನಾನು ಕೇಳಿರುವ ಹಾಗೆ, ಕರ್ನಾಟಕ ರಾಜ್ಯ ಸರ್ಕಾರವು ಸದರಿ “ಪ್ರಸಾದ” ಯೋಜನೆಯ ಬಗ್ಗೆ ಸಲ್ಲಿಸಿರುವ ಪ್ರಸ್ತಾವನೆ ನನ್ನಲ್ಲಿ ನೋವನ್ನುಂಟು ಮಾಡಿದೆ. ಸದರಿ ಯೋಜನೆ ಕಾಂಕ್ರೀಟ್ ಮತ್ತು ಪರಿಸರಕ್ಕೆ ಹೊಂದಿಕೊಳ್ಳಲಾಗದ ಸಾಮಗ್ರಿಗಳನ್ನು ಬಳಸಿಕೊಂಡು, ನಿರ್ಮಿಸುವ ವಾಸ್ತುಶಿಲ್ಪದ ಉದ್ದೇಶ ಹೊಂದಿದೆ. ನಮಗೀಗ ಅಗತ್ಯವಿರುವುದು, ಈಗಾಗಲೇ ಅಸ್ತಿತ್ವದಲ್ಲಿರುವ ಕಾಂಕ್ರಿಟ್ ಕಾಡನ್ನು ನೆಲಸಮಗೊಳಿಸಿ, ಗುತ್ತಿಗೆದಾರರ ಕನಿಷ್ಠ ಮಧ್ಯಪ್ರವೇಶದೊಂದಿಗೆ ಬೆಟ್ಟದ ಪ್ರಾಕೃತಿಕ ಸೌಂದರ್ಯವನ್ನು ಪುನರ್ ಸ್ಥಾಪಿಸುವುದೇ ಆಗಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆಯು, ವೈಭವೀಕರಣದ ಹೆಸರಲ್ಲಿ ಬೆಟ್ಟವನ್ನು ಮತ್ತಷ್ಟು ಕಾಂಕ್ರಿಟ್ ಕಾಡಾಗಿಸಲು ಹೊರಟಂತಿದೆ. ನನ್ನ ಸಲಹೆಗಳನ್ನು ಈ ಕೆಳಕಂಡAತೆ ತಮ್ಮ ಅವಗಾಹನೆಗೆ ತರಬಯಸುತ್ತಿದ್ದೇನೆ.

ಚಾಮುಂಡಿಬೆಟ್ಟವು ಹಲವಾರು ಶಿಲಾಪದರವನ್ನು ಹೊಂದಿದೆ. ಅದರಲ್ಲೂ ಬೇಸಿಗೆ ತಿಂಗಳ ಅವಧಿಯಲ್ಲಿ ಅವು ಶಾಖವನ್ನು ಹೊರಸೂಸುತ್ತವೆ. ಈ ಬಂಡೆಗಳ ಆವರಿಸಿದಂತೆ ಬೆಟ್ಟಸ್ನೇಹಿ ಮರಗಳನ್ನು ನೆಡುವುದರಿಂದ ಅವುಗಳು ಶಾಖ ಹೊಂದುವು ದನ್ನು ತಡೆಯಬಹುದು. ಇದರ ಫಲವಾಗಿ ನಗರವು ಸ್ವಲ್ಪಮಟ್ಟಿಗೆ ತಂಪಾಗಿರಲು ಸಾಧ್ಯವಿದೆ.

ಬೆಟ್ಟದ ಮೇಲಿನ ದೇವಸ್ಥಾನದ ಸುತ್ತಮುತ್ತ ಕೃತಕವಾದ ಮೇಲ್ಛಾವಣ ಬದಲಿಗೆ ಮರಗಳನ್ನು ಬೃಹತ್ ಸಂಖ್ಯೆಯಲ್ಲಿ ಬೆಳೆಸಬೇಕಾಗಿದೆ. ಪ್ರಸ್ತುತ ಅಲ್ಲಿ ಯಾವುದೇ ಮರಗಿಡಗಳಾ ಗಲೀ ಕಾಣುವುದಿಲ್ಲ. ಸದರಿ ಪ್ರಸ್ತಾವನೆ ಕೂಡ ಹಸಿರೀಕರಣದ ಬಗ್ಗೆ ಚಕಾರವೆತ್ತುವುದಿಲ್ಲ. ಕೆಲವು ವರ್ಷಗಳ ಹಿಂದೆ ನೂರರಷ್ಟಿದ್ದ ಬೆಟ್ಟದ ಜನಸಂಖ್ಯೆ ಈಗ ನಾಲ್ಕು ಸಾವಿರದ ಗಡಿ ದಾಟಿದೆ. ಇದು ಅಸುಸ್ಥಿರ ಮಿತಿ ತಲುಪಿದೆ. ನಾವು, ಇಲ್ಲಿ ಕೇವಲ ದೇವಸ್ಥಾನದ ಅರ್ಚಕರು ಮತ್ತು ನೌಕರ ವರ್ಗದವರಿಗೆ ಮಾತ್ರ ಮನೆಗಳಿರುವ ಮಿತಿ ಹೇರಬೇಕು. ಬೇರೆ ಎಲ್ಲಾ ಮನೆಗಳನ್ನು ನಗರಕ್ಕೆ ಸ್ಥಳಾಂತರಗೊಳಿಸಿ, ನಾವು ಕೆಲವು ಮೀಸಲು ಅರಣ್ಯ ಪ್ರದೇಶದಲ್ಲಿನ ಗಿರಿಜನರಿಗೆ ನೀಡುವ ಹಾಗೆ ಪರಿಹಾರ ಕಲ್ಪಿಸಬೇಕು. ಗಣ್ಯ ವ್ಯಕ್ತಿಗಳ ವಾಹನ ಸೇರಿದಂತೆ (ಇತರರಿಗೆ ಮಾದರಿಯ ಹಾಗೆ) ಎಲ್ಲಾ ರೀತಿಯ ಖಾಸಗಿ ವಾಹನಗಳನ್ನು ನಿಷೇಧಿಸಬೇಕು. ವಿದ್ಯುತ್ ಚಾಲಿತ ಬಸ್ಸುಗಳ ಸಂಚಾರಕ್ಕೆ ಮಾತ್ರ ಅವಕಾಶ ಇರಬೇಕು.

ಸಾಧ್ಯವಾದಷ್ಟು ಮಟ್ಟಿಗೆ, ಕಾಂಕ್ರಿಟ್ ಕಾಡನ್ನು ಪರಿಸರಕ್ಕೆ ಹಾನಿಯಾಗದ ರೀತಿಯಲ್ಲಿ ಧ್ವಂಸ ಮಾಡಬೇಕು. ನನ್ನಲ್ಲಿ ನೋವನ್ನುಂಟು ಮಾಡುವ ಮತ್ತೊಂದು ಸಂಗತಿಯೆAದರೆ, ಬಹುಮಹಡಿ ವಾಹನ ನಿಲುಗಡೆ ನಿರ್ಮಾಣದಲ್ಲಿ ಡೈನಾ ಮೈಟ್ ಬಳಸುವುದಿಲ್ಲವೆಂದು ಅಧಿಕಾರಿಗಳು ಪರಿಸರವಾದಿ ಗಳಿಗೆ ಆಶ್ವಾಸನೆ ನೀಡಿದ್ದರೂ ಸಹ, ಅಂತಹ ಭರವಸೆಗಳನ್ನು ನಿರ್ಲಕ್ಷಿಸಲಾಗಿದೆ. ಇದಕ್ಕೆ ಕಾರಣಕರ್ತರಾದವರನ್ನು ಜವಾಬ್ದಾರರ ನ್ನಾಗಿಸಿಲ್ಲ. ಈ ಡೈನಾಮೈಟ್ ಗಳಿಂದ ಹಳೆಯ ದೇವಸ್ಥಾನದ ಒಳ ಮಣ ್ಣಗೆ ಹಾಗೂ ವನ್ಯಜೀವಿಗಳು ಮತ್ತು ಪಕ್ಷಿಗಳಿಗೆ ಯಾವ ರೀತಿಯ ಹಾನಿ ಉಂಟು ಮಾಡಿದೆಯೋ ನಮಗೆ ಗೊತ್ತಿಲ್ಲ.

ಕಡೆಯದಾಗಿ ಭಾರತವಷ್ಟೇ ಅಲ್ಲದೇ ಪ್ರಪಂಚದ ಯಾವುದೇ ಭಾಗದಲ್ಲಿ ಪ್ರಯೋಗ ಮಾಡದಂತಹ ಒಂದು ವಿನೂತನ ಆಲೋಚನೆಯನ್ನು ನಾನು ಸಲಹೆ ರೂಪದಲ್ಲಿ ತಮಗೆ ಸಲ್ಲಿಸು ತ್ತಿದ್ದೇನೆ. ಹಂಪಿ ಅಥವಾ ತಿರುಪತಿಯನ್ನು ಮಾದರಿಯಾಗಿ ಪರಿಗಣ ಸದೇ, ಚಾಮುಂಡಿಬೆಟ್ಟವು, ತನ್ನದೇ ಅಭಿವೃದ್ಧಿಯ ಮೂಲಕ ಇತರರಿಗೆ ಮಾದರಿಯಾಗುವ ಹಾಗೇ ತಾನೇ ಅಭಿವೃದ್ಧಿಪಡಿಸಿಕೊಳ್ಳಬೇಕು. ದೇವಸ್ಥಾನದ ಆಸುಪಾಸಿನಲ್ಲಿ ಕೇವಲ ಪೂಜಾ ಸಾಮಗ್ರಿಗಳನ್ನು ಮಾತ್ರ ದೇವಸ್ಥಾನದ ನೌಕರ ವರ್ಗ ಮಾರುವ ಹಾಗಿರಬೇಕು. ಯಾವುದೇ ಖಾಸಗಿ ಮಾರಾಟ ಗಾರರು ಇವುಗಳನ್ನು ಮಾರುವ ಅವಕಾಶ ನೀಡಬಾರದು. ಬೆಟ್ಟದ ಮೇಲಿನ ವಾತಾವರಣ, ಧ್ಯಾನಾಸಕ್ತರಿಗೆ ಅಥವಾ ಮೌನಾಸಕ್ತರಿಗೆ ಪೂರಕವಾಗಿರಬೇಕು. ನನ್ನ ಸಲಹೆಗಳು,

೨೦೧೫ರ ಪ್ಯಾರಿಸ್ ಶೃಂಗ ಸಭೆಯಲ್ಲಿ ತಾವು ಹವಾಮಾನ ಬದಲಾವಣೆ ವಿರುದ್ಧ ಹೋರಾಡಲು ಪ್ರಸ್ತಾಪಿಸಿದ್ದ ವಿಷಯಗಳಿಗೆ ಸಂಪೂರ್ಣ ಅನುಗುಣವಾಗಿವೆ. ಅಲ್ಲದೆ “ಸರಳ ಜೀವನ, ಉನ್ನತ ಚಿಂತನೆ” ಎಂಬ ಭಾರತದ ನಾಗರಿಕತೆ ಸಂದೇಶಕ್ಕೆ ಅನುಗುಣವಾಗಿದೆ. ಇದರಿಂದಾಗುವ ಮತ್ತೊಂದು ಅನುದ್ದೇಶಿತ ಲಾಭವೆಂದರೆ, ನನ್ನ ಸಲಹೆಗಳನ್ನು ಕಾರ್ಯರೂಪಕ್ಕೆ ತರಲು ಹೆಚ್ಚಿನ ಆರ್ಥಿಕ ಸಂಪನ್ಮೂಲಗಳ ಅವಶ್ಯಕತೆ ಇರುವುದಿಲ್ಲ. ಈ ಹಿಂದಿನ ಕರ್ನಾಟಕ ಸರ್ಕಾರ, ಸಿಮೆಂಟ್ ಮತ್ತು ಇಟ್ಟಿಗೆಗಳನ್ನು ಬಳಸಿಕೊಂಡು, ೬೦೦ ಕಾರುಗಳು ಹಾಗೂ ೧೦೦ ವಾಣ ಜ್ಯ ಮಳಿಗೆಗಳಿಗೆ ಬಹುಮಹಡಿ ವಾಹನ ನಿಲುಗಡೆ ಸ್ಥಳವನ್ನು ನಿರ್ಮಿಸಿತ್ತು. ಇದರ ಫಲವಾಗಿ ಈ ಮುಂಚೆ ಯಾತ್ರಾ ಸ್ಥಳವಾಗಿದ್ದ ಚಾಮುಂಡಿ ಬೆಟ್ಟವು ವಾಣ ಜ್ಯ ಕೇಂದ್ರವಾಗಿ ಪರಿವರ್ತನೆಯಾಗಿದೆ. ಈ ಪ್ರದೇಶದ ಶಾಂತಿ ಮತ್ತು ಪಾವಿತ್ರ÷್ಯತೆ ಕೂಡ ನಾಶವಾಗಿದೆ.

ಶತಮಾನಗಳ ಕಾಲದಿಂದಲೂ ಬೆಟ್ಟವನ್ನು ಹತ್ತಲು ಮೆಟ್ಟಿಲುಗಳಿವೆ. ಈ ಮೆಟ್ಟಿಲುಗಳಲ್ಲಿ ಲೋಹದ ರಚನೆಯ ಬದಲು ಬಳ್ಳಿಗಳಿಂದ ನೆರಳು ಕಲ್ಪಿಸಬೇಕು.

-ತಮ್ಮ ಗೌರವಾನ್ವಿತ
ಎಸ್.ಎಲ್.ಭೈರಪ್ಪ
ಕನ್ನಡದ ಪ್ರಸಿದ್ಧ ಕಾದಂಬರಿಕಾರರು, ಸಾಹಿತ್ಯ ಅಕಾಡೆಮಿ ಪುರಸ್ಕೃತರು,
ಸಾಹಿತ್ಯ ಅಕಾಡೆಮಿಯಿಂದ ಚೈನಾ ಮತ್ತು ರಷಿಯನ್ ಭಾಷೆಗಳಿಗೆ ಅನುವಾದಗೊಂಡ ‘ಪರ್ವ’ ಕಾದಂಬರಿಯ ಲೇಖಕರು;
ಐದು ವರ್ಷಗಳ ಕಾಲ ರಾಷ್ಟಿçÃಯ ಪ್ರಾಧ್ಯಾಪಕರು;
ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರು

Translate »