ಬಿಜೆಪಿಯ ರಘು ಕೌಟಿಲ್ಯ, ಕಾಂಗ್ರೆಸ್‌ನ ಡಾ.ತಿಮ್ಮಯ್ಯ, ಜೆಡಿಎಸ್‌ನ ಸಿ.ಎನ್.ಮಂಜೇಗೌಡ ನಾಮಪತ್ರ ಸಲ್ಲಿಕೆ
ಮೈಸೂರು

ಬಿಜೆಪಿಯ ರಘು ಕೌಟಿಲ್ಯ, ಕಾಂಗ್ರೆಸ್‌ನ ಡಾ.ತಿಮ್ಮಯ್ಯ, ಜೆಡಿಎಸ್‌ನ ಸಿ.ಎನ್.ಮಂಜೇಗೌಡ ನಾಮಪತ್ರ ಸಲ್ಲಿಕೆ

November 24, 2021

ವಿಧಾನ ಪರಿಷತ್ ಚುನಾವಣೆ: ಮೈಸೂರು-ಚಾಮರಾಜನಗರ ಕ್ಷೇತ್ರ
ವಾಟಾಳ್ ಸೇರಿ ಒಟ್ಟಾರೆ ಎಂಟು ಮಂದಿಯಿAದ ೧೪ ಉಮೇದುವಾರಿಕೆ
ಮೈಸೂರು, ನ.೨೩(ಆರ್‌ಕೆಬಿ)- ಸ್ಥಳೀಯ ಸಂಸ್ಥೆಗಳಿAದ ಮೈಸೂರು-ಚಾಮರಾಜನಗರ ವಿಧಾನಪರಿಷತ್‌ನ ದ್ವಿಸದಸ್ಯ ಕ್ಷೇತ್ರಕ್ಕೆ ಡಿ.೧೦ರಂದು ನಡೆಯುವ ಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಮಂಗಳವಾರ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಸೇರಿದಂತೆ ಒಟ್ಟು ೮ ಮಂದಿ ೧೪ ಉಮೇದು ವಾರಿಕೆ ಸಲ್ಲಿಸಿದರು. ಕಾಂಗ್ರೆಸ್‌ನಿAದ ಡಾ.ಡಿ.ತಿಮ್ಮಯ್ಯ (ಮೂರು ಸೆಟ್), ಬಿಜೆಪಿಯಿಂದ ರಘು ಆರ್ ಕೌಟಿಲ್ಯ (ಮೂರು ಸೆಟ್), ಜೆಡಿಎಸ್‌ನಿಂದ ಸಿ.ಎನ್.ಮಂಜೇಗೌಡ (ಎರಡು ಸೆಟ್) ಸೇರಿದಂತೆ ೮ ಮಂದಿ ನಾಮಪತ್ರಗಳನ್ನು ಜಿಲ್ಲಾಧಿಕಾರಿ ಕಚೇರಿಯಲ್ಲಿ ಚುನಾವಣಾಧಿಕಾರಿಯೂ ಆಗಿರುವ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರಿಗೆ ಸಲ್ಲಿಸಿದರು.
ಇದಲ್ಲದೇ ಪಕ್ಷೇತರರಾಗಿ ಮೈಸೂರಿನ ಆರ್.ಮಂಜು ನಾಥ್ (ಎರಡು ಸೆಟ್), ವಾಟಾಳ್ ಪಕ್ಷದ ವಾಟಾಳ್ ನಾಗರಾಜ್, ಪಿರಿಯಾಪಟ್ಟಣದ ಪಿ.ಎಸ್.ಯಡೂರಪ್ಪ, ಮೈಸೂರು ಜೆ.ಪಿ.ನಗರದ ಕೆ.ಸಿ.ಬಸವರಾಜಸ್ವಾಮಿ, ಹೆಚ್.ಡಿ.ಕೋಟೆ ಸರಗೂರು ತಾಲೂಕಿನ ಮುಳ್ಳೂರು ಗುರುಲಿಂಗಯ್ಯ, ಅವರೂ ತಲಾ ಒಂದು ಸೆಟ್ ನಾಮಪತ್ರಗಳನ್ನು ಸಲ್ಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ: ಕೆಪಿಸಿಸಿ ಕಾರ್ಯಾ ಧ್ಯಕ್ಷ ಆರ್.ಧ್ರುವನಾರಾಯಣ ನೇತೃತ್ವದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ ಅವರೊಂದಿಗೆ ಶಾಸಕರಾದ ತನ್ವೀರ್‌ಸೇಠ್, ಹೆಚ್.ಪಿ.ಮಂಜುನಾಥ್, ಸಿ.ಪುಟ್ಟರಂಗಶೆಟ್ಟಿ, ಅನಿಲ್ ಚಿಕ್ಕಮಾದು, ಮಾಜಿ ಸಚಿವ ಡಾ.ಹೆಚ್.ಸಿ.ಮಹ ದೇವಪ್ಪ, ಮಾಜಿ ಶಾಸಕರಾದ ಎಂ.ಕೆ. ಸೋಮಶೇಖರ್, ಎ.ಆರ್.ಕೃಷ್ಣಮೂರ್ತಿ, ಎಸ್.ಬಾಲರಾಜ್, ಕಳಲೆ ಕೇಶವ ಮೂರ್ತಿ, ಮಾಜಿ ಸಂಸದ ಕಾಗಲವಾಡಿ ಎಂ.ಶಿವಣ್ಣ, ರಾಜ್ಯ ಮಹಿಳಾ ಕಾಂಗ್ರೆಸ್ ರಾಜ್ಯಾಧ್ಯಕ್ಷೆ ಪುಷ್ಪಾ ಅಮರ್ ನಾಥ್, ಮುಖಂಡರಾದ ಕೆ.ಹರೀಶ್‌ಗೌಡ, ಕೆ.ಮರೀಗೌಡ, ಪಕ್ಷದ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್, ನಗರಾಧ್ಯಕ್ಷ ಆರ್.ಮೂರ್ತಿ, ಚಾಮರಾಜನಗರ ಜಿಲ್ಲಾಧ್ಯಕ್ಷ ಸಿ.ಮರಿಸ್ವಾಮಿ ಇನ್ನಿತರರು ಉಪಸ್ಥಿತರಿದ್ದರು. ಅಭ್ಯರ್ಥಿ ಡಾ.ಡಿ.ತಿಮ್ಮಯ್ಯ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರೊಂದಿಗೆ ಕಾಂಗ್ರೆಸ್ ಭವನದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣ ಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು.
ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ: ಬಿಜೆಪಿ ಅಭ್ಯರ್ಥಿ ರಘು ಕೌಟಿಲ್ಯ ಅವರು ಬಿಜೆಪಿ ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣ ಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ನಂಜನಗೂಡು ಶಾಸಕ ಹರ್ಷವರ್ಧನ್, ಎನ್.ಮಹೇಶ್, ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ಜಿಲ್ಲಾಧ್ಯಕ್ಷೆ ಮಂಗಳಾ ಸೋಮ ಶೇಖರ್, ನಗರಾಧ್ಯಕ್ಷ ಟಿ.ಎಸ್.ಶ್ರೀವತ್ಸ, ಮುಡಾ ಅಧ್ಯಕ್ಷ ಹೆಚ್.ವಿ. ರಾಜೀವ್ ಇನ್ನಿತರ ಅನೇಕ ಮುಖಂಡರು ಉಪಸ್ಥಿತರಿದ್ದರು.

ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ: ಜೆಡಿಎಸ್ ಅಭ್ಯರ್ಥಿ ಸಿ.ಎನ್.ಮಂಜೇಗೌಡ ಅವರು ರಮಾವಿಲಾಸ ರಸ್ತೆಯಲ್ಲಿರುವ ಶಾಸಕ ಸಾ.ರಾ.ಮಹೇಶ್ ಅವರ ಕಚೇರಿ ಯಿಂದ ಶಾಸಕ ಸಾ.ರಾ.ಮಹೇಶ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣ ಗೆಯಲ್ಲಿ ತೆರಳಿ ನಾಮಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ತಿ.ನರಸೀಪುರ ಶಾಸಕ ಅಶ್ವಿನ್‌ಕುಮಾರ್, ನಗರಪಾಲಿಕೆ ಸದಸ್ಯರಾದ ಪ್ರೇಮಾ ಶಂಕರೇಗೌಡ, ಅಶ್ವಿನಿ, ಪಕ್ಷದ ಜಿಲ್ಲಾಧ್ಯಕ್ಷ ನರಸಿಂಹಸ್ವಾಮಿ, ಜಿಪಂ ಮಾಜಿ ಸದಸ್ಯರಾದ ದ್ವಾರಕೀಶ್, ಬೀರಿಹುಂಡಿ ಬಸವಣ್ಣ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.

ಕಾಂಗ್ರೆಸ್, ಜೆಡಿಎಸ್ ಶಾಸಕರು ಮುಖಾಮುಖಿ, ಹಸ್ತಲಾಘವ
ತಮ್ಮ ಪಕ್ಷದ ಅಭ್ಯರ್ಥಿ ಸಿ.ಎನ್.ಮಂಜೇಗೌಡರ ನಾಮಪತ್ರ ಸಲ್ಲಿಕೆಗೆ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಶಾಸಕ ಸಾ.ರಾ.ಮಹೇಶ್ ಅವರು ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರ ನಾಮಪತ್ರ ಸಲ್ಲಿಸಲು ಆಗಮಿಸಿದ್ದ ಶಾಸಕರಾದ ತನ್ವೀರ್‌ಸೇಠ್, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ, ಹೆಚ್.ಪಿ.ಮಂಜುನಾಥ್ ಸೇರಿದಂತೆ ಶಾಸಕರು, ಕಾಂಗ್ರೆಸ್ ಮುಖಂಡರನ್ನು ಮಾತನಾಡಿಸಿ, ಹಸ್ತಲಾಘವ ನೀಡಿದ್ದು ವಿಶೇಷವಾಗಿತ್ತು.

Translate »