ಕಿರಣ್ ಸಿಡ್ಲೆಹಳ್ಳಿಗೆ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ
ಮೈಸೂರು

ಕಿರಣ್ ಸಿಡ್ಲೆಹಳ್ಳಿಗೆ ಮುಕ್ತಕ ಸಾಹಿತ್ಯ ಪ್ರಶಸ್ತಿ ಪ್ರದಾನ

November 25, 2021

ಮೈಸೂರು,ನ.೨೪(ಎಂಟಿವೈ)-ಮೈಸೂರಿನ ರೋಟರಿ ಸಭಾಂಗಣದಲ್ಲಿ ನ.೨೬ರಂದು ಸಂಜೆ.೬.೩೦ಕ್ಕೆ ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿಯನ್ನು ತುಮಕೂರಿನ ಸಿಡ್ಲೆಹಳ್ಳಿ ನಿವಾಸಿ ಶಿಕ್ಷಕ ಕಿರಣ್ ಸಿಡ್ಲೆಹಳ್ಳಿ ಅವರಿಗೆ ಪ್ರದಾನ ಮಾಡಲಾಗುವುದು ಎಂದು ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ಅಧ್ಯಕ್ಷ ರಾಜಶೇಖರ ಕದಂಬ ತಿಳಿಸಿದ್ದಾರೆ.

ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೋಟರಿ ಮೈಸೂರು ಉತ್ತರ ಹಾಗೂ ಕರ್ನಾಟಕ ಮುಕ್ತಕ ಸಾಹಿತ್ಯ ಅಕಾಡೆಮಿ ಟ್ರಸ್ಟ್ ನೀಡುವ ರೋಟರಿ ಮುಕ್ತಕ ಸಾಹಿತ್ಯ ಪ್ರಶಸ್ತಿಯನ್ನು ವೃತ್ತಿಯಲ್ಲಿ ಶಿಕ್ಷಕರಾಗಿರುವ ಕಿರಣ್ ಪ್ರವೃತ್ತಿಯಲ್ಲಿ ಕವಿಯಾಗಿ, ಸಾಹಿತಿಯಾಗಿ ಅನೇಕ ಮೌಲಿಕ ಕೃತಿಗಳನ್ನು ರಚಿಸಿದ್ದಾರೆ. ಮುಕ್ತಕಸುಧೆ, ಭೋಗ ಮುಕ್ತ, ರತ್ನ ಕಂದನ ಕಗ್ಗ ಎಂಬ ಮುಕ್ತಕ ಕೃತಿಗಳನ್ನು, ಭಾವಕಿರಣ, ನಂಬುಗೆಯ ಕೊಡ ಎಂಬ ಕವನ ಸಂಕಲನಗಳನ್ನು ಹೊರತಂದಿದ್ದಾರೆ.

ಪೂಜಾರಿಯ ಕಾಟದಲ್ಲಿ ಬಡವಾದ ದೇವರು, (ಕಥಾ ಸಂಕಲನ), ರೊಟ್ಟಿ (ಲಲಿತ ಪ್ರಬಂಧ) ಹಾಗೂ ಬಯಲು ಸೀಮೆಯ ಬದುಕು (ಕಾದಂಬರಿ) ರಚಿಸಿ ದ್ದಾರೆ. ನ.೨೬ರಂದು ಸಂಜೆ ೬.೩೦ಕ್ಕೆ ಜೆಎಲ್‌ಬಿ ರಸ್ತೆಯಲ್ಲಿರುವ ರೋಟರಿ ಕೇಂದ್ರದಲ್ಲಿ ನಡೆಯುವ ಸಮಾರಂಭದಲ್ಲಿ ಪ್ರಶಸ್ತಿ ಫಲಕ, ಐದು ಸಾವಿರ ನಗದು ನೀಡಿ ಸನ್ಮಾನಿಸಲಾಗುತ್ತದೆ. ರೋಟರಿಯ ನಾಮಿನಿ ಜಿಲ್ಲಾ ಗೌರ್ನರ್ ಹೆಚ್.ಆರ್.ಕೇಶವ್ ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ. ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಲ್.ಚನ್ನ ಬಸವರಾಜು ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು. ೨೦೨೧ನೇ ಸಾಲಿನಿಂದ ಮುಕ್ತಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷರಾಗಿ ರಾಜಶೇಖರ್ ಕದಂಬ ಹಾಗೂ ಕಾರ್ಯದರ್ಶಿ ಪ್ರೊ.ನೀ.ಗಿರಿಗೌಡ ನೇಮಕವಾಗಿದ್ದು, ನಿಕಟಪೂರ್ವ ಅಧ್ಯಕ್ಷ ಎಸ್.ರಾಮಪ್ರಸಾದ್ ಗೌರವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪ್ರೊ.ನೀ.ಗಿರಿಗೌಡ, ರೋಟರಿ ಮೈಸೂರು ಉತ್ತರ ಅಧ್ಯಕ್ಷ ಎಲ್.ಚನ್ನಬಸವರಾಜು, ಎಂ.ಕೆ.ನAಜಯ್ಯ, ಆರ್ಯಕುಮಾರ್ ಉಪಸ್ಥಿತರಿದ್ದರು.

 

Translate »