Judicial Abuse: Land Justice Board Secretary, Non-bailable warrant issued to members
ಮೈಸೂರು

Judicial Abuse: Land Justice Board Secretary, Non-bailable warrant issued to members

November 25, 2021

ಮೈಸೂರು,ನ.೨೪-ಮೈಸೂರು ತಾಲೂಕು ಭೂ ನ್ಯಾಯ ಮಂಡಳಿ ಕಾರ್ಯದರ್ಶಿ ಯಾಗಿದ್ದ ಹಿಂದಿನ ತಹಸೀಲ್ದಾರ್ ರಮೇಶ್ ಬಾಬು, ಸದಸ್ಯರಾದ ಚಾಮುಂಡಯ್ಯ, ರವಿಕುಮಾರ್, ಸತೀಶ್‌ಕುಮಾರ್ ಮತ್ತು ಚಿಕ್ಕಣ್ಣೇಗೌಡ ಅವರಿಗೆ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹೈಕೋರ್ಟ್ ಜಾಮೀನು ರಹಿತ ವಾರೆಂಟ್ ಹೊರಡಿಸಿದೆ.

ವಿವರ: ಮೈಸೂರು ತಾಲೂಕು ಕಳಸ್ತವಾಡಿ ಗ್ರಾಮದ ಸರ್ವೆ ನಂ.೨೩೯ರ ೧೧ ಎಕರೆ ೧೭ ಗುಂಟೆ ಜಮೀನು ಟಿ.ಎಸ್.ಕಲಾಧರ್ ಉಪಾಧ್ಯಾಯ ಎಂಬುವರ ಹೆಸರಿನಲ್ಲಿದ್ದು, ಈ ಜಮೀನಿನಲ್ಲಿ ತಾವು ಬೇಸಾಯ ಮಾಡುತ್ತಿರುವುದಾಗಿ ಅದೇ ಗ್ರಾಮದ ಸಿದ್ದಯ್ಯ ಬಿನ್ ಕರಿಯಯ್ಯ ಎಂಬುವರು ೧೯೭೯ರಲ್ಲಿ ಫಾರಂ ನಂ.೧೯ರಡಿ ಅರ್ಜಿ ಸಲ್ಲಿಸಿದ್ದರು.

ಈ ಪ್ರಕರಣದಲ್ಲಿ ಸಿದ್ದಯ್ಯ ಅವರು ೨೦೧೮ರಲ್ಲಿ ಭೂ ನ್ಯಾಯ ಮಂಡಳಿ ವಿರುದ್ಧ ಹೈಕೋರ್ಟ್ನಲ್ಲಿ ಪ್ರಕರಣ ದಾಖಲಿಸಿದ್ದರು. ನ್ಯಾಯಾಲಯವು ೨೦೧೮ರ ಸೆ.೧೫ರ ಒಳಗೆ ಈ ಸಂಬAಧ ಆದೇಶ ಹೊರಡಿಸುವಂತೆ ಭೂ ನ್ಯಾಯ ಮಂಡಳಿಗೆ ಸೂಚಿಸಿತ್ತು. ಅದೇ ವೇಳೆ ಸರ್ಕಾರ ಭೂ ನ್ಯಾಯ ಮಂಡಳಿಯನ್ನು ವಿಸರ್ಜನೆ ಮಾಡಿತ್ತು. ಈ ನಡುವೆ ಭೂ ನ್ಯಾಯ ಮಂಡಳಿ ಅಧ್ಯಕ್ಷರಾಗಿದ್ದ ಕೆಎಎಸ್ ಅಧಿಕಾರಿ ಕುಸುಮಾಕುಮಾರಿ, ಕಾರ್ಯದರ್ಶಿಯಾಗಿದ್ದ ಅಂದಿನ ತಹಸೀಲ್ದಾರ್ ರಮೇಶ್ ಬಾಬು (ಈಗ ಅವರು ಪುತ್ತೂರು ತಹಸೀಲ್ದಾರ್ ಆಗಿದ್ದಾರೆ), ಸದಸ್ಯರಾದ ರಾಮನಹುಂಡಿಯ ಆರ್.ಹೆಚ್. ರವಿಕುಮಾರ್, ಕುಪ್ಪೇಗಾಲದ ಸತೀಶ್‌ಕುಮಾರ್, ಹೂಟಗಳ್ಳಿಯ ಚಿಕ್ಕಣ್ಣೇಗೌಡ ಮತ್ತು ಮರುಡಗಳ್ಳಿಯ ಚಾಮುಂಡಯ್ಯ ಅವರುಗಳು ತುರ್ತು ಸಭೆ ನಡೆಸಿ ಇತರೆ ಮೂರು ಆದೇಶಗಳನ್ನು ಹೊರಡಿಸಿದ್ದರಾದರೂ, ಸಿದ್ದಯ್ಯ ಅವರಿಗೆ ಸಂಬAಧಿಸಿದAತೆ ಯಾವುದೇ ರೀತಿಯ ಆದೇಶ ಹೊರಡಿಸಿರಲಿಲ್ಲ.
ಈ ಸಂಬAಧ ಹೈಕೋರ್ಟ್ಗೆ ಹಾಜರಾಗಿ ಉತ್ತರಿಸುವಂತೆ ನೋಟಿಸ್ ನೀಡಲಾಗಿತ್ತು. ಕುಸುಮಾಕುಮಾರಿ ಅವರು ಕಾಲಾವಕಾಶ ಕೇಳಿದ್ದರಿಂದ ಅದನ್ನು ಪರಿಗಣ ಸಿ ತಹಸೀಲ್ದಾರ್ ರಮೇಶ್ ಬಾಬು ಸೇರಿದಂತೆ ಎಲ್ಲಾ ಐವರ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿದ್ದು, ಪ್ರಕರಣವನ್ನು ನ.೨೫ಕ್ಕೆ ಮುಂದೂಡಲಾಗಿದೆ.

Translate »