ಮೈಸೂರು ಜಿಲ್ಲೆಯಲ್ಲಿ ೭ ಮಂದಿ ಕೊರೊನಾ ಸೋಂಕಿತರು ಗುಣಮುಖ
ಮೈಸೂರು

ಮೈಸೂರು ಜಿಲ್ಲೆಯಲ್ಲಿ ೭ ಮಂದಿ ಕೊರೊನಾ ಸೋಂಕಿತರು ಗುಣಮುಖ

November 25, 2021

ಮೈಸೂರು, ನ.೨೪(ಎಸ್‌ಪಿಎನ್)- ಮೈಸೂರು ಜಿಲ್ಲೆಯಲ್ಲಿ ಬುಧವಾರಕ್ಕೆ ೨೪೦ ಕೊರೊನಾ ಸಕ್ರಿಯ ಪ್ರಕರಣಗಳಿದ್ದು, ರಾಜ್ಯದಲ್ಲಿ ಒಟ್ಟು ೬,೪೧೨ ಸಕ್ರಿಯ ಪ್ರಕರಣಗಳಿವೆ. ಇಂದು ಮೈಸೂರು ಜಿಲ್ಲೆಯಲ್ಲಿ ೩೦ ಮಂದಿಗೆ ಕೊರೊನಾ ಪತ್ತೆಯಾಗಿದ್ದು, ರಾಜ್ಯದಲ್ಲಿ ೨೫೪ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ ಜಿಲ್ಲೆಯಲ್ಲಿ ೧,೭೯,೬೩೦ ಜನರಲ್ಲಿ ಕೊರೊನಾ ಪತ್ತೆಯಾಗಿದ್ದು, ೧,೭೬,೯೬೧ ಮಂದಿ ಗುಣಮುಖರಾಗಿದ್ದಾರೆ. ಮೈಸೂರಲ್ಲಿ ಒಟ್ಟಾರೆ ೨,೪೨೯ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿಂದು ೩ ಮಂದಿ ಸಾವನ್ನಪ್ಪಿದ್ದು, ಒಟ್ಟು ೩೮,೧೮೫ ಮಂದಿ ಸಾವನ್ನಪ್ಪಿದ್ದಾರೆ.

ಮೈಸೂರು ಜಿಲ್ಲೆಯಲ್ಲಿ ೭ ಮಂದಿ ಸೋಂಕಿತರು ಗುಣಮುಖ ರಾಗಿದ್ದು, ರಾಜ್ಯದಲ್ಲಿ ೫೪೬ ಮಂದಿ ಗುಣಮುಖರಾಗಿದ್ದಾರೆ. ರಾಜ್ಯದಲ್ಲಿ ಇಲ್ಲಿತನಕ ೨೯,೪೯,೬೨೯ ಮಂದಿ ಗುಣಮುಖರಾಗಿದ್ದು, ೨೯,೯೪,೨೫೫ ಕೊರೊನಾ ಪ್ರಕರಣ ಪತ್ತೆಯಾಗಿವೆ. ಮೈಸೂರು ೩೦, ಮಂಡ್ಯ ೩, ಕೊಡಗು ೧, ಚಾಮರಾಜನಗರ ೨, ಹಾಸನ ೧೫, ಬೆಳಗಾವಿ ೪, ಬೆಂಗಳೂರು ಗ್ರಾಮಾಂತರ ೨, ಬೆಂಗಳೂರು ನಗರ ೧೫೨, ಚಿಕ್ಕಮಗಳೂರು ೫, ಉಡುಪಿ ೮, ಚಿತ್ರದುರ್ಗ ೪, ದಕ್ಷಿಣಕನ್ನಡ ೧೪, ಧಾರ ವಾಡ ೫, ಕಲಬುರಗಿ ೧, ತುಮಕೂರು ೪, ಶಿವಮೊಗ್ಗ ೪ ಪ್ರಕರಣ ಸೇರಿದಂತೆ ಒಟ್ಟು ೨೫೪ ಪ್ರಕರಣ ಪತ್ತೆ ಯಾಗಿವೆ. ಅಲ್ಲದೆ, ರಾಯಚೂರು, ರಾಮನಗರ, ಉತ್ತರ ಕನ್ನಡ, ವಿಜಯಪುರ, ಯಾದಗಿರಿ, ಬಾಗಲಕೋಟೆ, ಬಳ್ಳಾರಿ, ಬೀದರ್, ಕೋಲಾರ, ಕೊಪ್ಪಳ, ಹಾವೇರಿ, ದಾವಣಗೆರೆ, ಗದಗ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಶೂನ್ಯ ಪ್ರಕರಣ ದಾಖಲಾಗಿವೆ.

ಇಂದು ಮೈಸೂರಿಗೆ ಹಿರಿಯ ವಕೀಲ ಅಶೋಕ ಹಾರನಹಳ್ಳಿ ಭೇಟಿ
ಮೈಸೂರು, ನ.೨೪- ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷರ ಚುನಾವಣೆ ಅಂಗವಾಗಿ ಆಜೀವ ಸದಸ್ಯರ ಸ್ನೇಹ ಮಿಲನ ಕಾರ್ಯಕ್ರಮವನ್ನು ನಾಳೆ (ನ.೨೫) ಮೈಸೂರಿನಲ್ಲಿ ಆಯೋಜಿಸಲಾಗಿದೆ. ಗುರುವಾರ ಸಂಜೆ ೪ಗಂಟೆಗೆ ಮೈಸೂರು ಕೃಷ್ಣಮೂರ್ತಿಪುರಂ ರಾಮಮಂದಿರ ಹಿಂಭಾಗ ಇರುವ ಶಾಂತಿ ನಿಕೇತನ ಭವನದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಧ್ಯಕ್ಷ ಸ್ಥಾನದ ಅಭ್ಯರ್ಥಿ, ಹಿರಿಯ ವಕೀಲ ಅಶೋಕ ಹಾರನಹಳ್ಳಿ ಭಾಗವಹಿಸಲಿದ್ದಾರೆ ಎಂದು ವಿಪ್ರ ಮುಖಂಡರಾದ ನಂ.ಶ್ರೀಕAಠಕುಮಾರ್, ಬಿ.ವಿ.ಶೇಷಾದ್ರಿ ತಿಳಿಸಿದ್ದಾರೆ.

Translate »