ಮೈಸೂರು ಅರಮನೆಗೆ ಪ್ರವಾಸಿಗರ ಆಗಮನ
ಮೈಸೂರು

ಮೈಸೂರು ಅರಮನೆಗೆ ಪ್ರವಾಸಿಗರ ಆಗಮನ

September 18, 2020

ಮೈಸೂರು,ಸೆ.17(ಆರ್‍ಕೆ)- ಕೋವಿಡ್ -19 ಸಂಕಷ್ಟ ಪರಿಸ್ಥಿತಿ ನಡುವೆಯೂ, ಮೈಸೂರು ಅರಮನೆಯತ್ತ ಪ್ರವಾಸಿಗರು ಮುಖ ಮಾಡಿರುವುದು ಸ್ಥಳೀಯ ಪ್ರವಾ ಸೋದ್ಯಮಕ್ಕೆ ಹೊಸ ಭರವಸೆ ಮೂಡಿ ಸಿದೆ. ಲಾಕ್‍ಡೌನ್ ನಿರ್ಬಂಧದಿಂದಾಗಿ ಕಳೆಗುಂದಿದ್ದ ಅಂಬಾ ವಿಲಾಸ ಅರಮನೆÀ ನಿರ್ಬಂಧ ತೆರವುಗೊಂಡ ನಂತರ ಈಗ ಚಟುವಟಿಕೆ ತಾಣವಾಗಿದ್ದು, ಇದರಿಂದ ಮೈಸೂರು ಪ್ರವಾಸೋದ್ಯಮ ಚೇತರಿಕೆ ಕಾಣುವ ಲಕ್ಷಣ ಕಂಡುಬಂದಿದೆ.

ಕೊರೊನಾ ಸೋಂಕು ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ವಿಶ್ವವಿಖ್ಯಾತ ಮೈಸೂರು ಅರಮನೆ ಕಳೆದ 70-80 ದಿನ ಗಳಿಂದ ಬಂದ್ ಆಗಿತ್ತು. ಪ್ರವಾಸಿ ಸ್ಥಳ ಗಳ ಮೇಲಿನ ನಿರ್ಬಂಧ ತೆರವುಗೊಳಿಸಿ ದರೆ ಜನರು ಸ್ವಾಭಾವಿಕವಾಗಿ ಗುಂಪು ಸೇರುವುದರಿಂದ ಸೋಂಕಿತರ ಸಂಖ್ಯೆ ಹೆಚ್ಚಾ ಗುವ ಅಪಾಯದಿಂದ ಪ್ರವಾಸೋದ್ಯಮಕ್ಕೆ ಕೊನೆಯ ಆದ್ಯತೆ ನೀಡಲಾಯಿತು. ಆದರೂ, ಆರ್ಥಿಕತೆಯನ್ನು ಸುಧಾರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಹಲವು ಸಡಿಲಿಕೆ ಯನ್ನು ಘೋಷಿಸಿ ಕೆಲವು ಪ್ರವಾಸಿ ಸ್ಥಳ ಗಳಿಗೆ ಪ್ರವೇಶಾವಕಾಶ ಕಲ್ಪಿಸಿತು. ಅದರ ಪ್ರಕಾರ, ಕಟ್ಟುನಿಟ್ಟಿನ ಮಾರ್ಗಸೂಚಿ ಮತ್ತು ಸಾಮಾಜಿಕ ಅಂತರ ಕಾಯ್ದುಕೊಂಡು ಮೈಸೂರು ಅರಮನೆ ಮತ್ತು ಮೃಗಾ ಲಯವನ್ನು ತೆರೆಯಲು ಅನುಮತಿ ನೀಡ ಲಾಯಿತು. ಆದಾಗ್ಯೂ, ಆರಂಭದಲ್ಲಿ ಅರ ಮನೆ ಮತ್ತು ಮೃಗಾಲಯಕ್ಕೆ ಪ್ರವಾಸಿಗ ರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಲಿಲ್ಲ. ಆರಂಭದ ದಿನಗಳಲ್ಲಿ 25-30 ಮಂದಿ ಪ್ರವಾ ಸಿಗರು ಅರಮನೆಗೆ ಆಗಮಿಸುತ್ತಿದ್ದರು.

ದೇಶಾದ್ಯಂತ ಕೊರೊನಾ ಅಟ್ಟಹಾಸವಿರು ವುದರಿಂದ ಈ ನೀರಸ ಪ್ರತಿಕ್ರಿಯೆ ವ್ಯಕ್ತವಾ ಗಿತ್ತು. ಕ್ರಮೇಣ ಪ್ರವಾಸಿಗರ ಸಂಖ್ಯೆ ಹೆಚ್ಚಾ ಗುತ್ತಿದ್ದು, ಎರಡು ಅಂಕಿಗಳಿಂದ ನಾಲ್ಕು ಅಂಕಿಗಳಿಗೇರಿದ್ದು, ಪ್ರವಾಸೋದ್ಯಮ ಪ್ರಾಧಿಕಾರ ಮತ್ತು ಸ್ಟೇಕ್ ಹೋಲ್ಡರ್‍ಗಳ ಮುಖದಲ್ಲಿ ಮಂದಹಾಸ ಮೂಡುತ್ತಿದೆ.

ಮೈಸೂರು ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್. ಸುಬ್ರಮಣ್ಯ `ಮೈಸೂರು ಮಿತ್ರ’ನೊಂದಿಗೆ ಮಾತನಾಡಿ, ಕೊರೊನಾ ಸೋಂಕಿನಿಂದ ಆರಂಭದಲ್ಲಿ ಜನರು ಮನೆಯಿಂದ ಹೊರಗೆ ಬರುವು ದಕ್ಕೆ ಹಿಂಜರಿಯುತ್ತಿದ್ದರು. ಈಗ ಮುಂಜಾ ಗ್ರತಾ ಕ್ರಮಗಳೊಂದಿಗೆ ಮನೆಯಿಂದ ಹೊರಗೆ ಬರುತ್ತಿರುವುದರಿಂದ ನಿಧಾನ ವಾಗಿ ಆರ್ಥಿಕತೆ ಸುಧಾರಿಸುತ್ತಿದೆ.

ಹಾಗೆಯೇ ಕಳೆದ ಜೂನ್ ತಿಂಗಳಿನಲ್ಲಿ ಸುಮಾರು 2,012 ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದರು. ಕೋವಿಡ್ ಪಾಸಿಟಿವ್ ಪ್ರಕರಣಗಳು ಹೆಚ್ಚಾದ ಹಿನ್ನೆಲೆಯಲ್ಲಿ ಜುಲೈ ತಿಂಗಳಲ್ಲಿ ಆ ಸಂಖ್ಯೆ 725ಕ್ಕೆ ಕುಸಿ ಯಿತು. ಆದರೆ ಆಗಸ್ಟ್ ತಿಂಗಳಲ್ಲಿ ಮೈಸೂರು ಅರಮನೆಗೆ ಪ್ರವಾಸಿಗರ ಸಂಖ್ಯೆ 10,537 ಅಂಕಿ ದಾಟಿತು. ಈ ತಿಂಗಳು ಅಂದರೆ ಸೆಪ್ಟೆಂಬರ್ 14ರವರೆಗೆ ಈಗಾಗಲೇ 13,091 ಮಂದಿ ಪ್ರವಾಸಿಗರು ಅರಮನೆಗೆ ಭೇಟಿ ನೀಡಿದ್ದಾರೆ. ಇದರಿಂದ ಪ್ರತಿಯೊಬ್ಬರೂ ಉಸಿರು ಬಿಡುವಂತಾಗಿ, ಮೈಸೂರು ನಗರ ದಲ್ಲಿ ಪ್ರವಾಸೋದ್ಯಮ ಚೇತರಿಸಿಕೊಳ್ಳು ತ್ತಿದೆ ಎಂದು ಅವರು ಹೇಳಿದರು.

ಕೊರೊನಾ ಭಯ ಹಾಗೂ ವಿದೇಶ ಪ್ರಯಾಣ ಬಂದ್ ಹಿನ್ನೆಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿಲ್ಲ. ಸಾಮಾನ್ಯ ದಿನಗಳಲ್ಲಿ ಕನಿಷ್ಠ 1000 ವಿದೇಶಿ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ ಆಗಸ್ಟ್ ತಿಂಗಳಿನಲ್ಲಿ ಕೇವಲ 24 ಮಂದಿ ವಿದೇಶಿ ಪ್ರವಾಸಿಗರು ಭೇಟಿ ಕೊಟ್ಟಿದ್ದರು.

ಈ ತಿಂಗಳು ಕೂಡ ಸೆ. 14 ರವರೆಗೆ ಕೇವಲ 13 ಮಂದಿ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ. ಶೀಘ್ರದಲ್ಲೇ ಕೊರೊನಾ ಸೋಂಕು ಅಂತ್ಯವಾಗುವ ನಿರೀಕ್ಷೆ ಇದ್ದು, ಮೈಸೂರಿನಲ್ಲಿ ಪ್ರವಾಸೋದ್ಯಮ ಸಹಜ ಸ್ಥಿತಿಗೆ ಮರಳುವ ಮೂಲಕ ಸಾವಿರಾರು ಜನರ ಜೀವನ ನಿರ್ವಹಣೆಗೆ ಪ್ರತ್ಯಕ್ಷ ಮತ್ತು ಪರೋಕ್ಷ ವಾಗಿ ಅನುಕೂಲವಾಗಲಿದೆ ಎಂದರು.

ಪ್ರತಿ ವರ್ಷ ಮೈಸೂರು ಒಂದೇ ಸುಮಾರು 35ರಿಂದ 40 ಲಕ್ಷ ಪ್ರವಾಸಿ ಗರನ್ನು ಆಕರ್ಷಿಸುತ್ತಿತ್ತು. ಪ್ರವಾಸೋದ್ಯಮ ಮತ್ತು ಆತಿಥ್ಯ ಮೈಸೂರಿನ ಪ್ರಮುಖ ಗಳಿಕೆ ಉದ್ಯಮವಾಗಿದೆ. ಈ ವಹಿವಾಟು ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸುಮಾರು 25,000 ಉದ್ಯೋಗಿಗಳ ಆರ್ಥಿಕತೆ ಯನ್ನು ಅವಲಂಬಿಸಿದೆ ಎಂದರು.

ಅರಮನೆ ಭೇಟಿಗೆ ಸುರಕ್ಷತಾ ಕ್ರಮ ಗಳನ್ನು ಒಳಗೊಂಡಿದೆ. ನಾವು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಅಂದರೆ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಥರ್ಮಲ್ ಸ್ಕ್ಯಾನಿಂಗ್ ಮತ್ತು ಪ್ರತಿಯೊಬ್ಬರಿಗೂ ಹ್ಯಾಂಡ್ ಸ್ಯಾನಿಟೈಸರ್ ಒಳಗೊಂಡಿದೆ. ಪ್ರವಾಸಿಗರ ಸುರಕ್ಷತಾ ದೃಷ್ಟಿಯಿಂದ ಮಧ್ಯಂತರ ಸಮಯದಲ್ಲಿ ಪ್ರತಿದಿನ ಸ್ಯಾನಿಟೈಷನ್ ವ್ಯವಸ್ಥೆ ಕಲ್ಪಿಸ ಲಾಗಿದೆ ಎಂದು ಸುಬ್ರಮಣ್ಯ ತಿಳಿಸಿದ್ದಾರೆ.

Translate »