ದಸರಾ ವೇಳೆ ಅರಮನೆ ಅಲಂಕಾರಕ್ಕೆ 5,000   ಕುಂಡಗಳಲ್ಲಿ ಸಿದ್ಧಗೊಳ್ಳುತ್ತಿರುವ ಹೂಗಿಡಗಳು!
ಮೈಸೂರು

ದಸರಾ ವೇಳೆ ಅರಮನೆ ಅಲಂಕಾರಕ್ಕೆ 5,000  ಕುಂಡಗಳಲ್ಲಿ ಸಿದ್ಧಗೊಳ್ಳುತ್ತಿರುವ ಹೂಗಿಡಗಳು!

September 18, 2020

ಮೈಸೂರು, ಸೆ.17- ಕೊರೊನಾ ಪಿಡುಗಿ ನಿಂದಾಗಿ ಈ ಬಾರಿ ದಸರಾ ಸರಳವಾಗಿ, ಆದರೆ ಸಾಂಪ್ರದಾಯಿಕ ರೀತಿ ಆಚರಣೆಗೆ ಸೀಮಿತವಾಗಿ ದ್ದರೂ, ಮೈಸೂರಿನ ಪ್ರಮುಖ ವೃತ್ತ ಹಾಗೂ ಅರಮನೆಯ ಸೌಂದÀರ್ಯ ದೀಪಾಲಂಕಾರದಿಂದ ಕಂಗೊಳಿಸಲಿದೆ. ಇದರ ಜತೆಗೇ ಅರಮನೆ ಮತ್ತು ನಗರದ ಸೌಂದರ್ಯ ಇಮ್ಮಡಿಗೊಳಿಸಲು ಹೂವಿನ ಲೋಕವೂ ಎಂದಿನಂತೆ ಕಂಗೊಳಿಸಲಿದೆ.

ದಸರಾ ಸರಳ ಆಚರಣೆ ನಿರ್ಧಾರ ಹೊರಬಿದ್ದ ಬಳಿಕ ತೋಟಗಾರಿಕಾ ಇಲಾಖೆ ಹೂವಿನ ಲೋಕ ಸೃಷ್ಟಿಗೆ ಸಿದ್ಧತೆ ನಡೆಸಿದೆ. ಫಲಪುಷ್ಪ ಪ್ರದರ್ಶನ ರದ್ದಾಗಿದ್ದರೂ ಅರಮನೆ ಅಂಗಳ ಹಾಗೂ ನಗ ರದ ಪ್ರಮುಖ ವೃತ್ತಗಳಲ್ಲಿ ಬಗೆಬಗೆ ಬಣ್ಣದ ಹೂವಿನ ಲೋಕ ಅನಾವರಣಗೊಳ್ಳಲಿದೆ. ಇದಕ್ಕಾಗಿ ತೋಟ ಗಾರಿಕಾ ಇಲಾಖೆ, ಮೈಸೂರು ಮಹಾನಗರ ಪಾಲಿಕೆ ಹಾಗೂ ಅರಮನೆ ಆಡಳಿತ ಸನ್ನದ್ಧವಾಗುತ್ತಿದೆ. ಇದಕ್ಕಾಗಿ ವಿವಿಧ ಸ್ಥಳಗಳಲ್ಲಿ ಹೂಕುಂಡಗಳಲ್ಲಿ ಬಗೆಬಗೆಯ ಪುಷ್ಪಗಳು ಅರಳಲು ಸಜ್ಜಾಗುತ್ತಿವೆ.

45 ದಿನದಲ್ಲೇ ಅರಳುವ ಸುಮ: ತೋಟ ಗಾರಿಕಾ ವಿಭಾಗ ದಸರಾ ಮಹೋತ್ಸವಕ್ಕಾಗಿ 45 ದಿನದಲ್ಲೇ ಹೂವು ಅರಳುವ ಗಿಡಗಳನ್ನೇ ಬೆಳೆಸಲು ಮುಂದಾಗಿದೆ. ಅರಮನೆ ಆಡಳಿತ ಮಂಡಳಿ ಅರ ಮನೆ ಆವರಣದಲ್ಲಿ ಹೂವಿನ ಲೋಕ ಸಿದ್ಧಗೊಳಿಸ ಲಿದೆ. 22 ಬಗೆಯ ಹೂವಿನ ಗಿಡಗಳನ್ನು 5 ಸಾವಿರ ಕುಂಡಗಳಲ್ಲಿ ಬೆಳಸಲಾಗುತ್ತಿದೆ. ಬಣ್ಣಬಣ್ಣದ ಹೂ ಗಳು ಅರಮನೆ ಸೌಂದರ್ಯ ಹೆಚ್ಚಿಸಲಿವೆ. ವರಾಹ ದ್ವಾರದಿಂದ ಅರಮನೆಗೆ ಪ್ರವೇಶಿಸುವ ಪ್ರವಾಸಿಗರಿಗೆ 20 ಬಗೆಯ ಗುಲಾಬಿ ಗಿಡಗಳು ಬಣ್ಣದ ಹೂವಿನೊಂದಿಗೆ ಕಣ್ಮನ ಸೆಳೆಯಲು ಸಿದ್ಧಗೊಳ್ಳುತ್ತಿವೆ.

ಪ್ರಮುಖ ವೃತ್ತಗಳಲ್ಲೂ ಹೂವಿನ ಕಳೆ: ಸಾಂಪ್ರದಾ ಯಿಕ ದಸರೆ ಆಚರಿಸಿದರೂ ಈ ಬಾರಿ ನವರಾತ್ರಿ ವೇಳೆ ಸಾಂಸ್ಕøತಿಕ ನಗರಿ ದೀಪಾಲಂಕಾರದಿಂದ ಝಗ ಮಗಿಸಲಿದೆ. ಪ್ರಮುಖ ರಸ್ತೆಗಳ ದೀಪಾಲಂಕಾರಕ್ಕೂ ನಿರ್ಧರಿಸಲಾಗಿದೆ. ಇದಕ್ಕೆ ಪೂರಕವಾಗಿ ತೋಟ ಗಾರಿಕಾ ಇಲಾಖೆ ಮತ್ತು ಪಾಲಿಕೆಯಿಂದ ಸಿದ್ಧವಾಗು ತ್ತಿರುವ 8 ಸಾವಿರಕ್ಕೂ ಹೆಚ್ಚು ಹೂವಿನ ಕುಂಡಗಳಲ್ಲಿನ ಹೂವಿನ ಗಿಡಗಳನ್ನು ಜೋಡಿಸಲಾಗುತ್ತದೆ. ಕೆ.ಆರ್. ವೃತ್ತ, ಚಾಮರಾಜವೃತ್ತ, ಹಾರ್ಡಿಂಗ್ ವೃತ್ತ ಸೇರಿ ಪ್ರಮುಖ ವೃತ್ತಗಳಲ್ಲಿ ಹೂವಿನ ಗಿಡ ಕಣ್ಮನ ಸೆಳೆಯಲಿವೆ.

ಗಾಜಿನ ಮನೆ: ಕುಪ್ಪಣ್ಣ ಪಾರ್ಕ್‍ನ ಗಾಜಿನ ಮನೆ ಸುತ್ತಲೂ ಹೂವಿನ ಕುಂಡಗಳ ಜೋಡಣೆ ಆಗಲಿದೆ. ರಾಕ್ ಗಾರ್ಡನ್, ಟೊಪೆರರಿ ಗಾರ್ಡನ್, ಹಸಿರಾಗಿ ರುವ ಹುಲ್ಲುಹಾಸು ಪ್ರವಾಸಿಗರು ಹಾಗೂ ಸಾರ್ವಜನಿ ಕರನ್ನು ಸೆಳೆಯಲಿದೆ. ಈ ಬಾರಿ ದಸರಾ ಫಲಪುಷ್ಪ ಪ್ರದರ್ಶನ ಇಲ್ಲದ ಕಾರಣ ಗಾಜಿನ ಮನೆಯಲ್ಲಿ ಶೈಕ್ಷಣಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಪ್ರವಾಸಿಗ ರನ್ನು ಸೆಳೆಯಲು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. ಇದರಿಂದಾಗಿ ಗಾಜಿನ ಮನೆ ಸುತ್ತಲೂ ಹೂವು ಅರಳಿ ರುವ ಗಿಡಗಳ ಪಾಟ್ ಜೋಡಿಸಲು ಕ್ರಮ ಕೈಗೊಳ್ಳ ಲಾಗಿದೆ. ಜಿ.ಪಂ, ಮೈಸೂರು ವಿವಿ, ಪಾಲಿಕೆ ತೋಟ ಗಾರಿಕಾ ವಿಭಾಗದಿಂದಲೂ ಹೂಕುಂಡಗಳಲ್ಲಿ ಗಿಡ ಬೆಳೆಸಲಾಗುತ್ತಿದೆ. ನವರಾತ್ರಿ ಆರಂಭಕ್ಕೂ(ಅ.17) ಮುನ್ನ ಇವುಗಳಲ್ಲಿ ಹೂವು ಅರಳಲಿವೆ. ಮೈಸೂರಿಗೆ ಬರುವ ಪ್ರವಾಸಿಗರ ಮನತಣಿಸಲಿವೆ.

ಎಂ.ಟಿ.ಯೋಗೇಶ್ ಕುಮಾರ್

 

 

Translate »